IPL RCB Team 2020 Players List: ಆರ್​ಸಿಬಿ ತಂಡ ಸೇರಿದ ಹೊಸ 8 ಆಟಗಾರರು; ಒಬ್ಬ ಕನ್ನಡಿಗ!

ಅಂದುಕೊಂಡಂತೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಪ್ರಮುಖ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಿದೆ. ಒಟ್ಟು ಎಂಟು ಹೊಸ ಪ್ಲೇಯರ್​​ಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ಆರ್​ಸಿಬಿ ತಂಡ ಮತ್ತಷ್ಟು ಬಲಿಷ್ಠವಾಗಿದೆ.

Vinay Bhat | news18-kannada
Updated:December 19, 2019, 9:41 PM IST
IPL RCB Team 2020 Players List: ಆರ್​ಸಿಬಿ ತಂಡ ಸೇರಿದ ಹೊಸ 8 ಆಟಗಾರರು; ಒಬ್ಬ ಕನ್ನಡಿಗ!
ಕಳೆದ 12 ಸೀಸನ್ನಲ್ಲಿ ಬೆಂಗಳೂರಿಗೆ ಐಪಿಎಲ್ ಟ್ರೋಫಿ ಸಿಕ್ಕಿಲ್ಲ.ಈ ಹಿಂದೆ ಫೈನಲ್ ಪ್ರವೇಶಿಸಿದರೂ ರನ್ನರ್ಅಪ್ಗೆ ತೃಪ್ತಿಪಟ್ಟುಕೊಂಡಿತ್ತು. ಈ ಸಲ ಸ್ಟಾರ್ ಆಟಗಾರರು ಆರ್ಸಿಬಿ ತಂಡದಲ್ಲಿದ್ದಾರೆ. ಈ ಬಾರಿಯಾದರೂ ಬೆಂಗಳೂರಿಗೆ ಐಪಿಎಲ್ ಕಪ್ ಒಲಿಯುತ್ತಾ ಎಂಬುದು ಕಾದು ನೋಡಬೇಕಿದೆ.
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. 332 ಆಟಗಾರರ ಪೈಕಿ 8 ತಂಡಗಳು ಸೇರಿ ಒಟ್ಟು 73 ಆಟಗಾರರನ್ನು ಖರೀದಿಸಿದ್ದಾರೆ.

ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಗರಿಷ್ಠ ಮೊತ್ತಕ್ಕೆ ಸೇಲ್ ಆಗಿದ್ದು ಆಸ್ಟ್ರೇಲಿಯಾ ಆಟಗಾರ ಪ್ಯಾಟ್ ಕಮಿನ್ಸ್​. ಇವರು ಬರೋಬ್ಬರಿ 15 ಕೋಟಿಯ 50 ಲಕ್ಷಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ಸೇರಿಸಿಕೊಂಡಿದ್ದಾರೆ. ನಂತರ ಗ್ಲೆನ್ ಮ್ಯಾಕ್ಸ್​ವೆಲ್​ 10 ಕೋಟಿ 75 ಲಕ್ಷಕ್ಕೆ ಕಿಂಗ್ಸ್​ ಇಲೆವೆನ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

2020 IPL Players List: ಹರಾಜು ಪ್ರಕ್ರಿಯೆ ಮುಕ್ತಾಯ; 73 ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡಕ್ಕೆ; ಇಲ್ಲಿದೆ ಕಂಪ್ಲೀಟ್ ಲಿಸ್ಟ್​

ಅಂದುಕೊಂಡಂತೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಪ್ರಮುಖ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಿದೆ. ಒಟ್ಟು ಎಂಟು ಹೊಸ ಪ್ಲೇಯರ್​​ಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ಆರ್​ಸಿಬಿ ತಂಡ ಮತ್ತಷ್ಟು ಬಲಿಷ್ಠವಾಗಿದೆ.

 ಅದರಲ್ಲು ದ. ಆಫ್ರಿಕಾದ ಆಲ್ರೌಂಡರ್ ಆಟಗಾರ ಕ್ರಿಸ್ ಮೊರೀಸ್ ಅವರನ್ನು 10 ಕೋಟಿ ಕೊಟ್ಟು ಖರೀದಿ ಮಾಡಿದ್ದು ಗರಿಷ್ಠ ಮೊತ್ತಕ್ಕೆ ಸೇಲ್ ಆದ 3ನೇ ಆಟಗಾರನಾಗಿದ್ದಾರೆ. ಆರಂಭದಲ್ಲಿ ಆ್ಯರೋನ್ ಫಿಂಚ್ ಅವರನ್ನು 4 ಕೋಟಿ 40 ಲಕ್ಷಕ್ಕೆ ಖರೀದಿ ಮಾಡಿತು. ನಂತರ ಅಂತಿಮ ಹಂತದಲ್ಲಿ ಸೇಲ್ ಆಗದೆ ಉಳಿದಿದ್ದ ಡೇಲ್ ಸ್ಟೈನ್​ರನ್ನು ಮೂಲಬೆಲೆ 2 ಕೋಟಿ ಕೊಟ್ಟು ತನ್ನ ತಂಡಕ್ಕೆ ಸೇರಿಸಿಕೊಂಡಿತು.

ಕರ್ನಾಟಕದ ಒಬ್ಬ ಆಲ್ರೌಂಡರ್ ಆಟಗಾರ ಪವನ್ ದೇಶಪಾಂಡೆ ಅವರನ್ನು 20 ಲಕ್ಷಕ್ಕೆ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಜೊತೆಗೆ ಶಹ್ಬಾಜ್ ಅಹ್ಮದ್ 20 ಲಕ್ಷ, ಶ್ರೀಲಂಕಾ ಆಲ್ರೌಂಡರ್ ಇಸ್ರು ಉದಾನ 50 ಲಕ್ಷಕ್ಕೆ, ಆಸ್ಟ್ರೇಲಿಯಾ ಪ್ರಮುಖ ವೇಗಿ ಕೇನ್ ರಿಚರ್ಡಸನ್ ಅವರನ್ನು 4 ಕೋಟಿ ಕೊಟ್ಟು ಖರೀದಿ ಮಾಡಿದೆ. ಇವರ ಜೊತೆಗೆ ಆಸ್ಟ್ರೇಲಿಯಾದ ವಿಕೆಟ್ ಕೀಪರ್- ಬ್ಯಾಟ್ಸ್​ಮನ್​ ಜೋಶ್ ಪಿಲಿಪ್ ಅವರನ್ನು 20 ಲಕ್ಷ ಕೊಟ್ಟು ತಮ್ಮ ತಂಡಕ್ಕೆ ಆರ್​ಸಿವಿ ಸೇರಿಸಿದೆ.

ಆರ್​ಸಿಬಿ ತಂಡಕ್ಕೆ 10 ಕೋಟಿಗೆ ಸೇಲ್ ಆದ ಖುಷಿಯಲ್ಲಿ ಕ್ರಿಸ್ ಮೊರೀಸ್ ಏನು ಮಾಡಿದ್ರು ನೋಡಿ!

 ಹರಾಜಿಗೂ ಮುನ್ನ ಆರ್​ಸಿಬಿ ತನ್ನಲ್ಲೆ ಉಳಿಸಿಕೊಂಡ ಆಟಗಾರರು: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​, ಪಾರ್ಥಿವ್ ಪಟೇಲ್, ಶಿವಂ ದುಬೆ, ಗುರುಕ್ರೀತ್ ಮನ್ ಸಿಂಗ್, ಪವನ್ ನೇಗಿ, ಮೊಯೀನ್ ಅಲಿ, ಯಜುವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಹಾಗೂ ನವ್​ದೀಪ್ ಸೈನಿ.

ಹರಾಜಿನಲ್ಲಿ ಖರೀದಿಸಿದ ಆಟಗಾರರು: ಆ್ಯರೋನ್ ಫಿಂಚ್, ಕ್ರಿಸ್ ಮೊರೀಸ್, ಡೇಲ್ ಸ್ಟೈನ್, ಕೇನ್ ರಿಚರ್ಡಸನ್, ಇಸ್ರು ಉದಾನ, ಜೋಶ್ ಪಿಲಿಪ್, ಶಹ್ಬಾಜ್ ಅಹ್ಮದ್ ಹಾಗೂ ಪವನ್ ದೇಶಪಾಂಡೆ.

First published:December 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading