HOME » NEWS » Sports » CRICKET HERES WHY ROHIT SHARMA WAS NOT SELECTED IN INDIAS 2011 WC SQUAD ZP

Rohit Sharma: 2011ರ ವಿಶ್ವಕಪ್​ ತಂಡದಲ್ಲಿ ಸ್ಥಾನ ಸಿಗದಿರುವ ಕಾರಣ ತಿಳಿಸಿದ ಹಿಟ್​ಮ್ಯಾನ್..!

2007ರ ಟಿ20 ವಿಶ್ವಕಪ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಬರುವಷ್ಟರಲ್ಲಿ ತಂಡದಿಂದ ಹೊರಬಿದ್ದಿದ್ದರು. ಇದಕ್ಕೆ ಕಾರಣವೇನು, ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದು ಹೇಗೆ ಎಂಬುದನ್ನು ಖುದ್ದು ಹಿಟ್​ಮ್ಯಾನ್ ಬಹಿರಂಗಪಡಿಸಿದ್ದಾರೆ.

news18-kannada
Updated:April 2, 2021, 10:12 PM IST
Rohit Sharma: 2011ರ ವಿಶ್ವಕಪ್​ ತಂಡದಲ್ಲಿ ಸ್ಥಾನ ಸಿಗದಿರುವ ಕಾರಣ ತಿಳಿಸಿದ ಹಿಟ್​ಮ್ಯಾನ್..!
Rohit Sharma
  • Share this:
ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದು ಇಂದಿಗೆ (ಏ.2) ಹತ್ತು ವರ್ಷ. ಬಲಿಷ್ಠ ಪಡೆಯೊಂದಿಗೆ ಶ್ರೀಲಂಕಾವನ್ನು ಬಗ್ಗು ಬಡಿದು ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದ್ದ ಟೀಮ್​ ಇಂಡಿಯಾದಲ್ಲಿ ಅಂದು ಹಿಟ್​ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಇರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ವಿಶ್ವಕಪ್​ಗೆ ಆಯ್ಕೆ ಮಾಡಲಾದ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ರೋಹಿತ್ ಶರ್ಮಾ ವಿಫಲರಾಗಿದ್ದರು.

2007ರ ಟಿ20 ವಿಶ್ವಕಪ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಬರುವಷ್ಟರಲ್ಲಿ ತಂಡದಿಂದ ಹೊರಬಿದ್ದಿದ್ದರು. ಇದಕ್ಕೆ ಕಾರಣವೇನು, ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದು ಹೇಗೆ ಎಂಬುದನ್ನು ಖುದ್ದು ಹಿಟ್​ಮ್ಯಾನ್ ಬಹಿರಂಗಪಡಿಸಿದ್ದಾರೆ.

ಇಂಗ್ಲೆಂಡ್​ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಜೊತೆ ನಡೆಸಿದ ಅನೌಪಚಾರಿಕ ಸಂಭಾಷಣೆಯಲ್ಲಿ ರೋಹಿತ್ ಶರ್ಮಾ ಹಲವು ವಿಷಯಗಳನ್ನು ತೆರೆದಿಟ್ಟಿದ್ದಾರೆ. ಹೌದು, 2011ರ ಐಸಿಸಿ ಏಕದಿನ ವಿಶ್ವಕಪ್‌ ಭಾರತ ತಂಡದಲ್ಲಿ ಅವಕಾಶ ಸಿಗದಿರುವುದು ನನ್ನ ಜೀವನದ ಅತ್ಯಂತ ದುಖಃದ ಕ್ಷಣ. ಅದರಲ್ಲೂ ನಮ್ಮ ತಂಡ ತವರಿನಲ್ಲಿ ಫೈನಲ್ ಪ್ರವೇಶಿಸಿ, ನನ್ನ ಹೋಮ್​ಗ್ರೌಂಡ್​ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡುವಾಗ, ಈ ಅದೃಷ್ಟ ನನಗೆ ಸಿಗಲಿಲ್ವಲ್ಲಾ ಎಂದು ಇನ್ನಷ್ಟು ನೋವಾಯಿತು ಎಂದು ರೋಹಿತ್ ಶರ್ಮಾ ತಿಳಿಸಿದರು.

ಇದೇ ವೇಳೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗದಿರಲು ಕಾರಣವೇನು ಎಂಬುದನ್ನು ಕೂಡ ರೋಹಿತ್ ಶರ್ಮಾ ಬಹಿರಂಗಪಡಿಸಿದರು. ನಾನು 2009 ರಲ್ಲಿ ಗಾಯಗೊಂಡಿದ್ದೆ. ಇದರಿಂದ 5 ರಿಂದ 6 ವಾರಗಳ ಕಾಲ ವಿಶ್ರಾಂತಿ ಪಡೆದಿದ್ದೆ. ಆ ವರ್ಷ ನಾನು ಭಾರತ ಕೇವಲ 7 ಇನಿಂಗ್ಸ್​ ಮಾತ್ರ ಆಡಿದ್ದೆ. ಇದಾಗಿ
2010 ರಲ್ಲಿ ರೋಹಿತ್ ಶರ್ಮಾ ಟೀಮ್​ ಇಂಡಿಯಾಗೆ ಕಂಬ್ಯಾಕ್ ಮಾಡಿದರೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.ಅಂದು ನನ್ನ ಕಳಪೆ ಪ್ರದರ್ಶನದಿಂದಾಗಿ ನಾನು ತಂಡದಿಂದ ಹೊರಬಿದ್ದೆ. ಇದೇ ಕಾರಣದಿಂದ 2011ರ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಇದಕ್ಕೆಲ್ಲಾ ನನ್ನ ಪ್ರದರ್ಶನವೇ ಕಾರಣ ಹೊರತು ಬೇರೆ ಯಾರೂ ಅಲ್ಲ ಎಂಬುದನ್ನು ರೋಹಿತ್ ಶರ್ಮಾ ತಿಳಿಸಿದರು. ಇದಾಗ್ಯೂ 2015ರ ಹಾಗೂ 2019ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ಭಾರತದ ಪರ ಹಿಟ್​ಮ್ಯಾನ್ ಅದ್ಭುತ ಪ್ರದರ್ಶನ ನೀಡಿದ್ದರು. ಅದರಲ್ಲೂ 2019ರ ವಿಶ್ವಕಪ್​ನಲ್ಲಿ ಹಿಟ್​ಮ್ಯಾನ್ ಆರ್ಭಟ ಜೋರಾಗಿತ್ತು. ಅದಾಗ್ಯೂ ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾ ಮುಗ್ಗರಿಸುವ ಮೂಲಕ ರೋಹಿತ್ ಶರ್ಮಾ ಅವರ ವಿಶ್ವಕಪ್ ಕನಸು ಕಮರಿತು.
Published by: zahir
First published: April 2, 2021, 10:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories