ವಿರಾಟ್ ಕೊಹ್ಲಿ ಬಳಿ ಕ್ಷಮೆ ಕೇಳಿದ ಡೇಲ್ ಸ್ಟೇನ್; ದಕ್ಷಿಣ ಆಫ್ರಿಕಾ ಆಟಗಾರ ಮಾಡಿದ ತಪ್ಪೇನು?

ವಿರಾಟ್​ ಬಳಿ ಡೇಲ್​ ಸ್ಟೇನ್​ ಕ್ಷಮೆ ಕೇಳಿದ್ದು ಏಕೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇದಕ್ಕೆ ಕಾರಣ ಭಾರತ-ದ.ಆಫ್ರಿಕಾ ಆಡುವ ಟಿ-20 ಸರಣಿಗೆ ಸ್ಟೇನ್​ ಆಯ್ಕೆಗೊಳ್ಳದೆ ಇರುವುದು.

Rajesh Duggumane | news18
Updated:August 14, 2019, 2:09 PM IST
ವಿರಾಟ್ ಕೊಹ್ಲಿ ಬಳಿ ಕ್ಷಮೆ ಕೇಳಿದ ಡೇಲ್ ಸ್ಟೇನ್; ದಕ್ಷಿಣ ಆಫ್ರಿಕಾ ಆಟಗಾರ ಮಾಡಿದ ತಪ್ಪೇನು?
ಡೇಲ್​ ಸ್ಟೇನ್​-ವಿರಾಟ್​ ಕೊಹ್ಲಿ
  • News18
  • Last Updated: August 14, 2019, 2:09 PM IST
  • Share this:
ವಿರಾಟ್​ ಕೊಹ್ಲಿ ಭಾರತ ಕ್ರಿಕೆಟ್​ ತಂಡದ ನಾಯಕನಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಒಂದೊಂದೇ ದಾಖಲೆಗಳನ್ನು ಪುಡಿಪುಡಿ ಮಾಡುತ್ತಿರುವ ಅವರು, ವಿವಾದಗಳ ಮೂಲಕವೂ ಸುದ್ದಿಯಾಗಿದ್ದಾರೆ. ಸಾಕಷ್ಟು ಪ್ರಕರಣಗಳಲ್ಲಿ ಕ್ಷಮೆಯನ್ನೂ ಕೇಳಿದ್ದಾರೆ! ಈಗ ದಕ್ಷಿಣ ಆಫ್ರಿಕಾ ಆಟಗಾರ ಡೇಲ್​ ಸ್ಟೇನ್​ ಅವರು ವಿರಾಟ್​ ಬಳಿ ಕ್ಷಮೇ ಕೇಳಿದ್ದಾರೆ!

ವಿರಾಟ್​ ಬಳಿ ಡೇಲ್​ ಸ್ಟೇನ್​ ಕ್ಷಮೆ ಕೇಳಿದ್ದು ಏಕೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇದಕ್ಕೆ ಕಾರಣ ಭಾರತ-ದ.ಆಫ್ರಿಕಾ ನಡುವೆ ನಡೆಯಲಿರುವ ಟಿ-20 ಸರಣಿಗೆ ಸ್ಟೇನ್​ ಆಯ್ಕೆಗೊಳ್ಳದೆ ಇರುವುದು. ಈ ವಿಚಾರಕ್ಕೆ ಸ್ಟೇನ್​ ತುಂಬಾನೇ ಸಿಟ್ಟಾಗಿದ್ದಾರೆ.

ದಕ್ಷಿಣ ಆಫ್ರಿಕಾದ ಬೌಲರ್​ಗಳ ಪೈಕಿ ಡೇಲ್​ ಸ್ಟೇನ್​ ಪ್ರಮುಖರು. ಟೆಸ್ಟ್​ ಪಂದ್ಯಗಳಲ್ಲಿ ಸಾಕಷ್ಟು ವಿಕೆಟ್​ ಕಿತ್ತಿರುವ ಅವರು,  ಮುಂಬರುವ ಭಾರತದ ವಿರುದ್ಧದ ಟಿ-20 ಪಂದ್ಯದಲ್ಲಿ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ, ಅವರನ್ನು ನೇಮಕ ಮಾಡಿಕೊಳ್ಳದೇ ಇರುವುದು ಕೋಪಕ್ಕೆ ಕಾರಣವಾಗಿದೆ. ಈ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭಾರತದ ವಿರುದ್ಧ ಆಟ ಆಡದೆ ಇರುವುದಕ್ಕೆ ವಿರಾಟ್​ ಬಳಿ ಕ್ಷಮೆ ಯಾಚಿಸಿದ್ದಾರೆ.Loading...
ಸ್ಟೇನ್​ ಟೆಸ್ಟ್​ಗೆ ನಿವೃತ್ತಿ ಘೋಷಿಸಿದ್ದರು. ಐಪಿಎಲ್​ನಲ್ಲಿ ವಿರಾಟ್​ ಕೊಹ್ಲಿ ನಾಯಕತ್ವದ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ, ಗಾಯಗೊಂಡ ಹಿನ್ನೆಲೆಯಲ್ಲಿ ಅವರು ಯಾವುದೆ ಪಂದ್ಯ ಆಡಿರಲಿಲ್ಲ.

ಈ ವಿಚಾರಕ್ಕೆ ದಕ್ಷಿಣ ಆಫ್ರಿಕ ಕ್ರಿಕೆಟ್​ ಮಂಡಳಿ ನೀಡುವ ಸಬೂಬೇ ಬೇರೆ. ಈ ಬಾರಿಯ ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ ಅವರು ಮುಂಬರುವ ಟಿ-20 ವಿಶ್ವಕಪ್​ಗೆ ಸಿದ್ಧಗೊಳ್ಳುತ್ತಿದ್ದಾರಂತೆ. ಹೀಗಾಗಿ ಪ್ರಮುಖ ಆಟಗಾರರನ್ನು ವಿಶ್ರಾಂತಿಯಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.

First published:August 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...