2019ರ ವಿಶ್ವಕಪ್ ಬಳಿಕ ಮಹೇಂದ್ರ ಸಿಂಗ್ ಧೋನಿ ಯಾವುದೇ ಪಂದ್ಯಗಳಲ್ಲಿ ಪಾಲ್ಗೊಂಡಿಲ್ಲ. ಐಪಿಎಲ್ನಲ್ಲಾದರೂ ಧೋನಿ ಮೈದಾನಕ್ಕಿಳಿಯುವುದನ್ನು ನಿರೀಕ್ಷಿಸಲಾಗಿತ್ತು, ಆದರೆ ಕೊರೊನಾದಿಂದಾಗಿ ಐಪಿಎಲ್ ಕೂಡ ಅಸ್ಥಿರವೆನಿಸಿದೆ. ಧೋನಿ ದೀರ್ಘ ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದರಿಂದ ಅವರು ನಿವೃತ್ತಿ ನೀಡುತ್ತಾರೆ ಎಂಬ ಗಾಳಿಸುದ್ದಿ ಆಗೀಗ ಕೇಳಿಬರುತ್ತಲೇಯಿದೆ.
ಅದರಲ್ಲೂ ಮೊನ್ನೆಯಷ್ಟೆ ಟ್ವಿಟ್ಟರ್ನಲ್ಲಿ #DhoniRetires ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿತ್ತು.
ಧೋನಿ ನಿವೃತ್ತಿ ನೀಡುತ್ತಿದ್ದಾರೆ, ತನ್ನ ಮೆಚ್ಚಿನ ಆಟಗಾರನನ್ನು ಇನ್ನು ಟೀಂ ಇಂಡಿಯಾ ಜೆರ್ಸಿಯಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಎಂದು ಧೋನಿಯ ಅನೇಕ ಅಭಿಮಾನಿಗಳು ಬೇಸರ ಹೊರಹಾಕಿದ್ದರು.
ಕರಾಟೆ ಮಾಸ್ಟರ್ಗೆ ಕಾಡಿದ ಕೊರೋನಾ ; ಚಿಕಿತ್ಸೆಗೂ ಹಣವಿಲ್ಲದೆ ಪರದಾಟ..!
ಈ ವಿಚಾರ ವೈರಲ್ ಆಗುತ್ತಿದೆ ಎಂಬುವಹೊತ್ತಿಗೆ ಧೋನಿ ಪತ್ನಿ ಸಾಕ್ಷಿ, ಇದೊಂದು ಸಳ್ಳು ಸುದ್ದಿ. ಈ ಲಾಕ್ಡೌನ್ ಸಮಯದಲ್ಲಿ ಜನರು ಮಾನಸಿಕವಾಗಿ ಅಸ್ಥಿರವಾಗಿದ್ದಾರೆಂದು ನಾನು ಭಾವಿಸುತ್ತೇನೆ ಎಂದು ಬರೆದು ಖಾರವಾಗಿ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದರು. ಸಾಕ್ಷಿ ಅವರು ಈ ಟ್ವೀಟ್ ಮಾಡಿ ಕೆಲವೇ ನಿಮಿಷಗಳ ಬಳಿಕ ಡಿಲೀಟ್ ಕೂಡ ಮಾಡಿದರು.
ಸದ್ಯ ಈ ಎಲ್ಲ ವಿಚಾರದ ಕುರಿತು ಚೆನ್ನೈ ಸೂಪ್ ಸಿಂಗ್ಸ್ ಇನ್ಸ್ಟಾಗ್ರಾಂ ಪೇಜ್ನ ಲೈವ್ ಚಾಟ್ನಲ್ಲಿ ಸ್ವತಃ ಸಾಕ್ಷಿ ಧೋನಿ ಮಾತನಾಡಿದ್ದಾರೆ. 'ಸ್ನೇಹಿತರೊಬ್ಬರ ಮೂಲಕ ಧೋನಿ ನಿವೃತ್ತಿ ಸುದ್ದಿ ಟ್ರೆಂಡ್ ಆಗುತ್ತಿರುವುದು ತಿಳಿಯಿತು. ಟ್ವಿಟ್ಟರ್ ಗಮನಿಸಿದ ಬಳಿಕ ನಾನು ಯಾಕೆ ಹಾಗೆ ಟ್ವೀಟ್ ಮಾಡಿದೆ ಎಂದು ಈಗಲೂ ತಿಳಿದಿಲ್ಲ. ನಂತರ ಡಿಲಿಟ್ ಮಾಡಿದೆ, ಆದರೆ ಹೇಳಬೇಕಾದದ್ದನ್ನ ಹೇಳಿ ಮುಗಿದಿತ್ತು' ಎಂದಿದ್ದಾರೆ.
'ಈ ಲಾಕ್ ಡೌನ್ ಸಮಯದಲ್ಲಿ ಧೋನಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಶೂನ್ಯ ಉಪಸ್ಥಿತಿಯನ್ನು ಹೊಂದಿದ್ದಾರೆ. ಈ ವಿಷಯಗಳು ಎಲ್ಲಿಂದ ಬರುತ್ತವೆ ಎಂದು ನನಗೆ ತಿಳಿದಿಲ್ಲ' ಎಂದು ಸಾಕ್ಷಿ ಹೇಳಿದ್ದಾರೆ.
35 ಸಾವಿರ ಮಕ್ಕಳ ಹಸಿವು ನೀಗಿಸಲು ಮುಂದಾದ ಖ್ಯಾತ ಕ್ರಿಕೆಟಿಗ..!
ಇನ್ನು ಇದೇವೇಳೆ ಮಾಹಿ ಕ್ರಿಕೆಟ್ ವಿಚಾರದಲ್ಲಿ ಬಹಳ ಭಾವುಕರಾಗುತ್ತಾರೆ ಎಂದಿರುವ ಸಾಕ್ಷಿ ಅವರಿಗೆ ಕ್ರಿಕೆಟ್ ಮೊದಲ ಪ್ರೀತಿ ಎಂಬುದು ಬಹಿರಂಗ ಪಡಿಸಿದ್ದಾರೆ. "ವಿಡಿಯೋ ಗೇಮ್ಸ್ಗಳು ಧೋನಿಗೆ ಸ್ಟ್ರೆಸ್ ಬಸ್ಟರ್. ಅವರ ತಲೆ ಸದಾ ಕೆಸಲ ಮಾಡುತ್ತಲೇ ಇರುತ್ತದೆ. ಅದು ವಿಶ್ರಾಂತಿಯೇ ತೆಗೆದುಕೊಳ್ಳುವುದಿಲ್ಲ. ಆದರೆ, ವಿಡಿಯೋ ಗೇಮ್ಸ್ ಆಡುವಾಗ ಮಾತ್ರ ಅವರ ಗಮನ ಬೇರೆಡೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಪಬ್ಜಿ ಗೇಮ್ ನಮ್ಮ ಮಂಚವನ್ನು ಆವರಿಸಿದೆ. ಮಾಹಿ ನಿದ್ರೆಯಲ್ಲೂ ಪಬ್ಜಿ ಬಗ್ಗೆ ಮಾತನಾಡುತ್ತಿರುತ್ತಾರೆ," ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ