ಇನ್​ಸ್ಟಾ ಲೈವ್​ನಲ್ಲಿ ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗರ ಸಮಾಗಮ; ಏನೆಲ್ಲ ಮಾತಾಡಿದ್ರು ಗೊತ್ತೇ?

ಪ್ರಮುಖವಾಗಿ ಕಳೆದ ವರ್ಷದ ಐಪಿಎಲ್​ನಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ತಂಡದ ವಿರುದ್ಧ ಆಡುತ್ತಿರುವಾಗ ರಾಹುಲ್ ಅವರಿಂದ ಸಿಕ್ಕಾಪಟ್ಟೆ ಬೈಸಿಕೊಂಡ ಘಟನೆಯೊಂದನ್ನು ಮಯಾಂಕ್ ನೆನಪಿಸಿಕೊಂಡಿದ್ದಾರೆ.

news18-kannada
Updated:June 4, 2020, 9:43 AM IST
ಇನ್​ಸ್ಟಾ ಲೈವ್​ನಲ್ಲಿ ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗರ ಸಮಾಗಮ; ಏನೆಲ್ಲ ಮಾತಾಡಿದ್ರು ಗೊತ್ತೇ?
ಮಯಾಂಕ್ ಅಗರ್ವಾಲ್ ಹಾಗೂ ಕೆ. ಎಲ್ ರಾಹುಲ್.
  • Share this:
ಕೊರೋನಾ ಲಾಕ್​ಡೌನ್​ನಿಂದಾಗಿ ಕ್ರಿಕೆಟ್ ಜಗತ್ತು ಸ್ತಬ್ಧವಾಗಿರುವ ಹಿನ್ನಲೆಯಲ್ಲಿ ಆಟಗಾರರು ಇನ್​ಸ್ಟಾಗ್ರಾಂ ಲೈವ್​ನಲ್ಲಿ ಬಂದು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಅದರಂತೆ ನಿನ್ನೆ ಭಾರತ ಕ್ರಿಕೆಟ್ ತಂಡದ ಇಬ್ಬರು ಪ್ರಮುಖ ಆಟಗಾರರಾದ, ಕರ್ನಾಟಕದ ಕೆ. ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಇನ್​ಸ್ಟಾಗ್ರಾಂ ಲೈವ್​ನಲ್ಲಿ ಬಂದು ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

“Son, if you score more than me…”: Ishant Sharma reveals KL Rahul’s comical challenge
ಮಯಾಂಕ್ ಅಗರ್ವಾಲ್ ಹಾಗೂ ಕೆ. ಎಲ್ ರಾಹುಲ್.


ಸಚಿನ್-ಗಂಗೂಲಿ ವಿಕೆಟ್ ಉರುಳಿಸಿ ಮಿಂಚಿದ್ದ ಮಾರಕ ವೇಗಿ ಬಳಿಕ ಪೈಲಟ್ ಆದರು..!

ಅದರಲ್ಲೂ ಪ್ರಮುಖವಾಗಿ ಕಳೆದ ವರ್ಷದ ಐಪಿಎಲ್​ನಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ತಂಡದ ವಿರುದ್ಧ ಆಡುತ್ತಿರುವಾಗ ರಾಹುಲ್ ಅವರಿಂದ ಸಿಕ್ಕಾಪಟ್ಟೆ ಬೈಸಿಕೊಂಡ ಘಟನೆಯೊಂದನ್ನು ಮಯಾಂಕ್ ನೆನಪಿಸಿಕೊಂಡಿದ್ದಾರೆ. ರಾಹುಲ್ ಹಾಗೂ ಮಯಾಂಕ್ ಐಪಿಎಲ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ಲೈವ್‌ ಚಾಟ್‌ನಲ್ಲಿ ಈ ಘಟನೆ ನೆನಪಿಸಿಕೊಂಡ ಮಯಾಂಕ್, 'ಸನ್‌ರೈಸರ್ಸ್‌ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್‌ ನಬಿ ಅವರ ಬೌಲಿಂಗ್‌ನಲ್ಲಿ ಸಿಕ್ಸರ್‌ ಬಾರಿಸಿದ್ದಕ್ಕೆ ನೀವು ನನ್ನ ಬಳಿ ಬಂದು ಸಿಕ್ಕಾಪಟ್ಟೆ ಬೈದಿದ್ದು ಏಕೆ? ಎಂಬುದು ನನಗೆ ಈಗಲೂ ಅರ್ಥವಾಗಲಿಲ್ಲ' ಎಂದು ಕೇಳಿದ್ದಾರೆ.

ಇದಕ್ಕೆ ನಗುತ್ತಲೇ ಉತ್ತರ ನೀಡಿದ ರಾಹುಲ್‌, 'ಆ ಪಂದ್ಯದಲ್ಲಿ ನಾವು ಟಾರ್ಗೆಟ್ ಬೆನ್ನತ್ತಿದ್ದದ್ದು 180-190 ರನ್‌ಗಳನ್ನು ಅಲ್ಲ. ಬದಲಿಗೆ 140-150ರ ಒಳಗೆ ಗುರಿ ಸಿಕ್ಕಿತ್ತು. ಉತ್ತಮ ಆರಂಭ ಕೂಡ ದೊರೆತಿದ್ದ ಕಾರಣಕ್ಕೆ ಬಿರುಸಿನ ಹೊಡೆತಗಳ ಮೊರೆ ಹೋಗುವುದು ಬೇಡ ಫೋರ್‌ಗಳಿಂದ ಮಾತ್ರ ರನ್‌ ಗಳಿಸೋಣ ಎಂದು ಆ ಓವರ್‌ಗು ಮುನ್ನ ಚರ್ಚಿಸಿದ್ದೆವು. ಆದರೆ, ಮರು ಓವರ್‌ನ ಮೊದಲ ಎಸೆತದಲ್ಲೇ ನೀನು ಸಿಕ್ಸರ್‌ ಬಾರಿಸಿದ್ದೆ. ಅಷ್ಟು ಹೇಳಿದರೂ ಗಾಳಿಯಲ್ಲಿ ಚೆಂಡನ್ನು ಹೊಡೆದಕ್ಕೆ ಬಹಳ ಕೋಪ ಬಂದಿತ್ತು,' ಎಂದಿದ್ದಾರೆ.

VVS Laxman: ದ ಗ್ರೇಟ್ ವಾಲ್ ಕ್ರಿಕೆಟ್​ನ ಅತ್ಯುತ್ತಮ ವಿದ್ಯಾರ್ಥಿ..!'ಅವಶ್ಯಕತೆ ಇಲ್ಲದಿದ್ದರೂ ಸಿಕ್ಸ್ ಸಿಡಿಸಿದ್ದ ಕಾರಣಕ್ಕೆ ನಿನಗೆ ಬೈದಿದ್ದೆ. ಲಾಂಗ್‌ಆನ್‌ನಲ್ಲಿ ಫೀಲ್ಡ್‌ ಮಾಡುತ್ತಿದ್ದ ವಿಜಯ್‌ ಶಂಕರ್‌ ಇನ್ನು ಸ್ವಲ್ಪ ಪ್ರಯತ್ನ ಮಾಡಿದರೂ ಅದು ಕ್ಯಾಚ್‌ ಆಗುವ ಸಾಧ್ಯತೆ ಇತ್ತು. ಆ ಹಂತದಲ್ಲಿ ವಿಕೆಟ್‌ ಕಳೆದುಕೊಳ್ಳಲು ನಾನು ರೆಡಿ ಇರಲಿಲ್ಲ. ಹೀಗಾಗಿ ಕೋಪದಿಂದ ಬೈದಿದ್ದೆ' ಎಂದು ರಾಹುಲ್‌ ನೆನದುಕೊಂಡಿದ್ದಾರೆ.

ಕೆ ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ನಡುವಣ ಇನ್​ಸ್ಟಾಗ್ರಾಂ ಲೈವ್​ ಚಾಟ್ ವಿಡಿಯೋ ಇಲ್ಲಿದೆ:

 
First published: June 4, 2020, 9:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading