ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಸರಣಿ ಆರಂಭವಾಗಲು ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಆಸ್ಟ್ರೇಲಿಯಾ ಪತ್ರಿಕೆಗಳು ಕಿಂಗ್ ಕೊಹ್ಲಿಯನ್ನು ಹಾಡಿಹೊಗಳುತ್ತಿದ್ದಾರೆ. ಅಷ್ಟೇ ಅಲ್ಲದೆ ಕೊನೆಯ ಮೂರು ಟೆಸ್ಟ್ಗಳಿಂದ ಕೊಹ್ಲಿ ಹೊರಗುಳಿಯಲಿದ್ದು, ಇದು ಪಂದ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ತಿಳಿಸಿದ್ದಾರೆ. ಇದರ ನಡುವೆ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೇನ್ ನೀಡಿರುವ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ.
ವಿರಾಟ್ ಕೊಹ್ಲಿ ಬಗ್ಗೆ ಅನೇಕರು ಅನೇಕ ರೀತಿಯಲ್ಲಿ ಹೇಳಿಕೆ ನೀಡಬಹುದು. ಆದರೆ ಎದುರಾಳಿ ಆಟಗಾರರು ಅವರನ್ನು ದ್ವೇಷಿಸುವುದನ್ನೇ ಇಷ್ಟಪಡುತ್ತಾರೆ. ಕ್ರಿಕೆಟ್ ಅಭಿಮಾನಿಯಾಗಿ ನಾವು ಅವರ ಬ್ಯಾಟಿಂಗ್ ನೋಡಲು ಇಷ್ಟಪಡುತ್ತೇನೆ. ಆದರೆ ನನ್ನ ಪಾಲಿಗೆ ಆತ ಎದುರಾಳಿ. ಕೇವಲ ಮತ್ತೋರ್ವ ಕ್ರಿಕೆಟಿಗ ಅಷ್ಟೇ ಎಂದು ಟಿಮ್ ಪೇನ್ ಹೇಳಿದರು.
ಕೊಹ್ಲಿಯೊಂದಿಗೆ ನನಗೆ ಯಾವುದೇ ಉತ್ತಮ ಬಂಧವಿಲ್ಲ. ನಾನು ಆತನನ್ನು ಟಾಸ್ ವೇಳೆಯೇ ಭೇಟಿಯಾಗಲಿರುವುದು. ಎದುರಾಳಿಯಾಗಿ ನನಗೆ ಅವರೊಬ್ಬ ಕ್ರಿಕೆಟಿಗ ಹೊರತು ಬೇರೇನೂ ಇಲ್ಲ ಎಂದು ಪೇನ್ ತಿಳಿಸಿದರು.
ಸ್ಟೀವ್ ಸ್ಮಿತ್ ತಂಡದಿಂದ ಹೊರಗುಳಿದ ಬಳಿಕ ಆಸ್ಟ್ರೇಲಿಯಾ ಟೆಸ್ಟ್ ತಂಡವನ್ನು ಟಿಮ್ ಪೇನ್ ಮುನ್ನಡೆಸಿದ್ದರು. ಅದರಲ್ಲೂ ಇಂಗ್ಲೆಂಡ್ ವಿರುದ್ಧ ಪೇನ್ ನಾಯಕತ್ವದಲ್ಲಿ ಆ್ಯಶಸ್ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಟೀಮ್ ಇಂಡಿಯಾ ವಿರುದ್ಧದ ಪ್ರತಿಷ್ಠಿತ ಗವಾಸ್ಕರ್-ಬಾರ್ಡರ್ ಟೆಸ್ಟ್ ಸರಣಿಗೂ ಪೇನ್ ಅವರನ್ನೇ ಮುಂದುವರೆಸಲಾಗಿದೆ.
ಇನ್ನು ಕಳೆದ ವರ್ಷ ನಡೆದ ಈ ಪ್ರತಿಷ್ಠಿತ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ಗೆಲ್ಲುವ ಮೂಲಕ ಆಸ್ಟ್ರೇಲಿಯಾವನ್ನು ದಿಗ್ಭ್ರಮೆಗೊಳಿಸಿದ್ದರು.
ಇದನ್ನೂ ಓದಿ: IPL 2021: RCB ಖರೀದಿಸಲು ಕಣ್ಣಿಟ್ಟಿರುವ ಐವರು ಆಟಗಾರರು ಇವರೇ..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ