World Cup 2019: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿಯನ್ನು ಲಫಂಗಾ ಎಂದು ಜರಿದ ಪತ್ನಿ ಹಸೀನ್..!

zahir | news18
Updated:June 28, 2019, 3:22 PM IST
World Cup 2019: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿಯನ್ನು ಲಫಂಗಾ ಎಂದು ಜರಿದ ಪತ್ನಿ ಹಸೀನ್..!
mohammed shami and wife
  • News18
  • Last Updated: June 28, 2019, 3:22 PM IST
  • Share this:
ICC World cup 2019 ನಲ್ಲಿ ಟೀಂ ಇಂಡಿಯಾದ ವಿಜಯ ಯಾತ್ರೆ ಮುಂದುವರೆದಿದೆ. ಭಾರತ ಆಡಿರುವ ಐದು ಪಂದ್ಯಗಳಲ್ಲಿ ಮೂರಲ್ಲಿ ಬ್ಯಾಟ್ಸ್​​ಮನ್​ಗಳು ಪರಾಕ್ರಮ ಮೆರೆದರೆ ಎರಡರಲ್ಲಿ ಬೌಲರುಗಳು ತೋಳ್ಬಲ ಪ್ರದರ್ಶಿಸಿದ್ದಾರೆ. ಅದರಲ್ಲೂ ಅಫ್ಘಾನಿಸ್ತಾನದ ವಿರುದ್ಧ ಹ್ಯಾಟ್ರಿಕ್ ಮೂಲಕ ಅಬ್ಬರಿಸಿದ್ದ ಮೊಹಮ್ಮದ್ ಶಮಿ, ವೆಸ್ಟ್​ ಇಂಡೀಸ್ ವಿರುದ್ಧ ಸಹ ಮಾರಕ ದಾಳಿ ನಡೆಸಿ ಗೆಲುವು ತಂದು ಕೊಟ್ಟಿದ್ದರು.

ಅತ್ತ ಇಂಗ್ಲೆಂಡ್​ನಲ್ಲಿ ಶಮಿ ಬೌಲಿಂಗ್​ನಲ್ಲಿ ಮಿಂಚು ಹರಿಸುತ್ತಿದ್ದರೆ, ಇತ್ತ ಭಾರತದಲ್ಲಿ ವೈಯುಕ್ತಿಕ ವಿಚಾರಗಳಿಂದ ಸುದ್ದಿಯಾಗಿದ್ದಾರೆ. ಅತ್ಯುತ್ತಮ ಫಾರ್ಮ್​​ನಲ್ಲಿ ಶಮಿಯ ವೈಯುಕ್ತಿಕ ಜೀವನವನ್ನು ಮತ್ತೊಮ್ಮೆ ಪತ್ನಿ ಹಸೀನ್ ಜಹಾನ್ ಸಾರ್ವಜನಿಕವಾಗಿ ತೆರೆದಿಟ್ಟಿದ್ದಾರೆ. ಅಫ್ಘಾನ್ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಪತಿಯನ್ನು ಪರೋಕ್ಷವಾಗಿ ಪತ್ನಿ ಹೊಗಳಿದ್ದರು. ಆದರೆ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಬೆನ್ನಲ್ಲೇ ಶಮಿಯ ಚಾರಿತ್ರ್ಯಹರಣಕ್ಕೆ ಹಸೀನ್ ಮುಂದಾಗಿದ್ದಾರೆ.

ತಮ್ಮ ಫೇಸ್​ಬುಕ್ ಖಾತೆಯಲ್ಲಿ ಮೊಹಮ್ಮದ್ ಶಮಿ ವೈಯುಕ್ತಿಕ ವಿಚಾರಗಳನ್ನು ಪೋಸ್ಟ್​ ಮಾಡಿರುವ ಹಸೀನ್ ಜಹಾನ್, ತಮ್ಮ ಪತಿಯ ಇನ್ನೊಂದು ಮುಖವನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಶಮಿ ಅವರ ಟಿಕ್ ಟಾಕ್ ನ ಫಾಲೋ ಲೀಸ್ಟ್​ ಸ್ಕ್ರೀನ್ ಶಾಟ್​ ಬಹಿರಂಗ ಪಡಿಸಿರುವ ಹಸೀನ್, 'ಲಫಂಗ ಮೊಹಮ್ಮದ್ ಶಮಿ ಟಿಕ್ ಟಾಕ್ ಅಕೌಂಟ್ ತೆರೆದಿದ್ದೇನೆ. ಆತ 97 ಮಂದಿಯನ್ನು ಫಾಲೋ ಮಾಡುತ್ತಿದ್ದು, ಅದರಲ್ಲಿ 90 ಹುಡುಗಿಯರು. ಒಂದು ಮಗುವಿನ ತಂದೆಯಾಗಿ ಇದು ನಾಚಿಕೆಗೇಡು' ಎಂದು ಪೋಸ್ಟ್​ ಮಾಡಿದ್ದಾರೆ.ಭಾರತದ ವೇಗಿ ವಿರುದ್ಧ ಮಾಡಲಾದ ಈ ಪೋಸ್ಟ್​ ಇದೀಗ ಭಾರೀ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ಹುಟ್ಟಿಕೊಂಡಿದೆ. ಕಳೆದ ವರ್ಷದ ಐಪಿಎಲ್‌ ಸೀಸನ್ ವೇಳೆ ಮೊಹಮ್ಮದ್ ಶಮಿ ಮತ್ತು ಹಸೀನ್ ಜಹಾನ್ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟುಕೊಂಡಿತು. ಶಮಿ ಇತರೆ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಹಸೀನ್ ದೂರು ದಾಖಲಿಸಿದ್ದರು. ಇದರಿಂದ ಇವರ ಸಂಬಂಧ ಕೋರ್ಟ್​ ಮೆಟ್ಟಿಲೇರುವಂತಾಯಿತು. ಈ ಬಳಿಕ ಈ ಜೋಡಿ ವೈವಾಹಿಕ ಜೀವನದಿಂದ ದೂರ ಉಳಿದಿದ್ದರು.

ಆದರೂ ಅಫ್ಘಾನಿಸ್ತಾನದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ಬರೆದ ಶಮಿಯನ್ನು ಪರೋಕ್ಷವಾಗಿ ಹಸೀನ್ ಹೊಗಳಿದ್ದರು. ಶಮಿ ಹೆಸರನ್ನು ಸೂಚಿಸದೇ, ದೇಶದ ಪರ ಯಾರು ಉತ್ತಮವಾಗಿ ಆಡಿದರೂ ಖುಷಿಯ ವಿಚಾರ ಎಂದಿದ್ದರು. ಇದರಿಂದ ಇಬ್ಬರ ನಡುವಿನ ಮನಸ್ತಾಪ ಮುಗಿದ ಅಧ್ಯಾಯ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇದೀಗ ಮತ್ತೊಮ್ಮೆ ಹಸೀನ್ ಟೀಂ ಇಂಡಿಯಾ ಆಟಗಾರನ ಮೇಲೆ 'ವೈಯುಕ್ತಿಕ' ದಾಳಿ ನಡೆಸಿದ್ದಾರೆ.

First published:June 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...