ಧೋನಿಯೇ ನಿವೃತ್ತಿ ನೀಡಿಲ್ಲ, ನನ್ನ ಗಂಡ ಯಾಕೆ ಕೊಡಬೇಕು?; ಪಾಕ್ ಆಟಗಾರನ ಪತ್ನಿ

ಸದ್ಯದಲ್ಲೇ ಪಿಸಿಬಿ ಏಕದಿನ ಕ್ರಿಕೆಟ್​ನಿಂದಲೂ ಸರ್ಫರಾಜ್​ನನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿ ಹೊಸ ಕ್ಯಾಪ್ಟನ್ ಆಯ್ಕೆ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

Vinay Bhat | news18-kannada
Updated:October 23, 2019, 8:55 AM IST
ಧೋನಿಯೇ ನಿವೃತ್ತಿ ನೀಡಿಲ್ಲ, ನನ್ನ ಗಂಡ ಯಾಕೆ ಕೊಡಬೇಕು?; ಪಾಕ್ ಆಟಗಾರನ ಪತ್ನಿ
ಎಂ ಎಸ್ ಧೋನಿ ಹಾಗೂ ಸರ್ಫರಾಜ್ ಅಹ್ಮದ್
  • Share this:
ಬೆಂಗಳೂರು (ಅ. 23): ಕಳಪೆ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ಇತ್ತೀಚೆಗಷ್ಟೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್​​ ಸರ್ಫರಾಜ್ ಅಹ್ಮದ್​ರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿತ್ತು. ಇವರ ಬದಲು ಟಿ-20 ತಂಡಕ್ಕೆ ಬಾಬರ್ ಅಜಮ್ ಹಾಗೂ ಟೆಸ್ಟ್​ಗೆ ಅಜರ್ ಅಲಿ ಅವರನ್ನು ನೂತನ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿತ್ತು.

ಅಲ್ಲದೆ ಸರ್ಫರಾಜ್​ರನ್ನು ಮುಂಬರುವ ಆಸ್ಟ್ರೇಲಿಯಾ ಸರಣಿಯಿಂದಲೂ ಕೈಬಿಟ್ಟಿತ್ತು. ಇದಾದ ಬೆನ್ನಲ್ಲೆ ಸರ್ಫರಾಜ್ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಊಹಾಪೋಹಗಳು ಹಬ್ಬತ್ತು. ಪಾಕ್ ಮಾಜಿ ನಾಯಕ ನಿವೃತ್ತಿ ಆಗಲು ಬರಸುತ್ತಿದ್ದಾರೆ. ತಂಡದ ಕೋಚ್ ಆಗುವತ್ತ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದಕ್ಕೆ ಸರ್ಫರಾಜ್ ಪತ್ನಿ ಖುಷ್ ಬಹ್ತ್ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಉದಾಹರಣೆ ನೀಡಿ ಉತ್ತರಿಸಿದ್ದಾರೆ.

Vijay Hazare Trophy: ಇಂದು ಕರ್ನಾಟಕ- ಛತ್ತೀಸ್‌ಗಢ ನಡುವೆ ಸೆಮೀಸ್ ಫೈಟ್; ರಾಜ್ಯಕ್ಕೆ ಮಯಾಂಕ್ ಬಲ

"38 ವರ್ಷ ಪ್ರಾಯದ ಧೋನಿಯೇ ಇನ್ನುಕೂಡ ಟೀಂ ಇಂಡಿಯಾ ಪರವಾಗಿ ಆಡುತ್ತಿದ್ದಾರೆ. ಹೀಗಿರುವಾಗ ನನ್ನ ಗಂಡನಿಗೆ ಇನ್ನು 32 ವರ್ಷವಷ್ಟೆ. ಅವರೇಕೆ ನಿವೃತ್ತಿ ನೀಡಬೇಕು. ಸದ್ಯದಲ್ಲೆ ಅವರು ಫಾರ್ಮ್​ಗೆ ಮರಳಿ ಕಮ್​ಬ್ಯಾಕ್ ಮಾಡುವ ವಿಶ್ವಾಸ ನನಗಿದೆ" ಎಂದು ಖುಷ್ ಹೇಳಿದ್ದಾರೆ.

ಸರ್ಫರಾಜ್ ನಾಯಕತ್ವದಲ್ಲಿ ಪಾಕಿಸ್ತಾನ ವಿಶ್ವಕಪ್ ಸೇರಿದಂತೆ ನಂತರದ ಸರಣಿಯಲ್ಲೂ ಸತತ ಸೋಲಿನಿಂದ ಕಂಗೆಟ್ಟಿತ್ತು. ಸದ್ಯದಲ್ಲೇ ಪಿಸಿಬಿ ಏಕದಿನ ಕ್ರಿಕೆಟ್​ನಿಂದಲೂ ಸರ್ಫರಾಜ್​ನನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿ ಹೊಸ ಕ್ಯಾಪ್ಟನ್ ಆಯ್ಕೆ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading