HOME » NEWS » Sports » CRICKET HARDIK PANDYA UPLOAD A THROWBACK PHOTO IN SOCIAL MEDIA THAT MAKES YOUR DAY

2011ರಲ್ಲಿ ವಿಶ್ವಕಪ್​ ಗೆದ್ದಾಗ ಅಭಿಮಾನಿಯಾಗಿ ಮೈದಾನದಲ್ಲಿ ಸಂಭ್ರಮಿಸಿದ್ದ ಈ ವ್ಯಕ್ತಿ ಇಂದು ಭಾರತ ತಂಡದ ಪ್ರಮುಖ ಆಟಗಾರ!

2011ರಲ್ಲಿ ಪಾಂಡ್ಯಾ ಭಾರತ ತಂಡವನ್ನು ಪ್ರತಿನಿಧಿಸುತ್ತಿರಲಿಲ್ಲ. ಈ ವೇಳೆ ಅವರು ಭಾರತ ಕ್ರಿಕೆಟ್​ ತಂಡದ ಅಭಿಮಾನಿಯಾಗಿದ್ದರು. ಪ್ರೇಕ್ಷಕರ ಮಧ್ಯೆ ನಿಂತು ಪಾಂಡ್ಯಾ ಚಿಯರ್ ಮಾಡುತ್ತಿದ್ದರು!

Rajesh Duggumane | news18
Updated:May 25, 2019, 10:21 AM IST
2011ರಲ್ಲಿ ವಿಶ್ವಕಪ್​ ಗೆದ್ದಾಗ ಅಭಿಮಾನಿಯಾಗಿ ಮೈದಾನದಲ್ಲಿ ಸಂಭ್ರಮಿಸಿದ್ದ ಈ ವ್ಯಕ್ತಿ ಇಂದು ಭಾರತ ತಂಡದ ಪ್ರಮುಖ ಆಟಗಾರ!
ಪಾಂಡ್ಯಾ ಹಂಚಿಕೊಂಡ ಫೋಟೋ
  • News18
  • Last Updated: May 25, 2019, 10:21 AM IST
  • Share this:
ಸಾಧನೆ ಮಾಡಿ ಉತ್ತುಂಗಕ್ಕೇರಿದಾಗ ಬಂದ ದಾರಿಯನ್ನು ನೆನೆದರೆ ರೋಮಾಂಚನವಾಗುತ್ತದೆ. ನಾವು ಅಂದು ಹಾಗಿದ್ದೆವಾ, ಅಷ್ಟು ಕಷ್ಟದ ಜೀವನ ನಡೆಸುತ್ತಿದ್ದೆವಾ ಎನ್ನುವ ಪ್ರಶ್ನೆಯೂ ಕಾಡುತ್ತದೆ. ಭಾರತದ ಕ್ರಿಕೆಟ್​ ತಂಡದ ಆಟಗಾರರಲ್ಲೊಬ್ಬರಾದ ಹಾರ್ದಿಕ್​ ಪಾಂಡ್ಯಾ ಇದೇ ರೀತಿಯ ಅನುಭವ  ಹಂಚಿಕೊಂಡಿದ್ದಾರೆ.

ಈ ಬಾರಿಯ ಕ್ರಿಕೆಟ್​ ವಿಶ್ವಕಪ್ ಆಡಲು ಹಾರ್ದಿಕ್​ ಪಾಂಡ್ಯಾ ಭಾರತ ತಂಡದಲ್ಲಿ  ಸ್ಥಾನಪಡೆದುಕೊಂಡಿದ್ದು, ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ. ಆದರೆ, 2011ರ ವಿಶ್ವಕಪ್​ ಸಮಯದಲ್ಲಿ ಪ್ರೇಕ್ಷಕರ ಮಧ್ಯೆ ನಿಂತು ಪಾಂಡ್ಯಾ ಚಿಯರ್ ಮಾಡುತ್ತಿದ್ದರು! ಈ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

2011ರಲ್ಲಿ ಪಾಂಡ್ಯಾ ಭಾರತ ತಂಡವನ್ನು ಪ್ರತಿನಿಧಿಸುತ್ತಿರಲಿಲ್ಲ. ಈ ವೇಳೆ ಅವರು ಭಾರತ ಕ್ರಿಕೆಟ್​ ತಂಡದ ಅಭಿಮಾನಿಯಾಗಿದ್ದರು. “2011ರಲ್ಲಿ ಭಾರತ ವಿಶ್ವಕಪ್​ಗೆದ್ದಿದ್ದನ್ನು ಸಂಭ್ರಮಿಸುತ್ತಿದ್ದ ನಾನು 2019ರಲ್ಲಿ ಭಾರತ ಕ್ರಿಕೆಟ್​ ತಂಡವನ್ನು ಪ್ರತಿನಿಧಿಸುವವರೆಗೆ ಬಂದಿದ್ದೇನೆ. ಕನಸು ನನಸಾಗಿದೆ,”  ಎಂದು ಪಾಂಡ್ಯಾ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.ಇದನ್ನೂ ಓದಿ: ವಾರ್ಮ್ ಅಪ್ ಪಂದ್ಯದಲ್ಲೇ 'ಅಫ್ಘಾನ್ ವಾರ್ನಿಂಗ್'; ಬಲಿಷ್ಠ ಪಾಕ್​ಗೆ ಮಣ್ಣು ಮುಕ್ಕಿಸಿದ ಕ್ರಿಕೆಟ್ ಶಿಶುಗಳು2016ರಲ್ಲಿ ಹಾರ್ದಿಕ್​ ಪಾಂಡ್ಯಾ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿದ್ದರು. ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡ ಪ್ರತಿನಿಧಿಸಿದ್ದ ಅವರು, ಈ ಬಾರಿ 402 ರನ್​ ಬಾರಿಸಿದ್ದಾರೆ. ಜನವರಿ ತಿಂಗಳಲ್ಲಿ ‘ಕಾಫಿ ವಿತ್​ ಕರಣ್​’ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಅವರ ಮೇಲೆ ನಿಷೇಧ ಹೇರಲಾಗಿತ್ತು. ನಂತರ ಅವರು ಮತ್ತೆ ಮೈದಾನಕ್ಕೆ ಇಳಿಯಲು ಅವಕಾಶ ನೀಡಲಾಗಿತ್ತು.

First published: May 25, 2019, 10:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories