ಮುಂಬರುವ ಆಸೀಸ್​​ ಟೆಸ್ಟ್​​ ಸರಣಿಯಲ್ಲಿ ಪಾಂಡ್ಯ ಅಪಾಯಕಾರಿಯಾಗಲಿದ್ದಾರೆ; ಇಯಾನ್​​‌ ಚಾಪೆಲ್

ಹಾರ್ದಿಕ್​​ ಪಾಂಡ್ಯ ಉತ್ತಮ ದಾಡಿಂಗ. ಕೀಪರ್‌ ರಿಷಭ್‌ ಪಂತ್‌ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿದರೆ. ಪಾಂಡ್ಯ 7ನೇ ಕ್ರಮಾಂಕದಲ್ಲಿ ಬ್ಯಾಂಡಿಂಗ್​ಗೆ ಇಳಿಯಬಹುದು ಎಂದಿದ್ದಾರೆ ಇಯಾನ್​​‌ ಚಾಪೆಲ್‌.

news18-kannada
Updated:June 8, 2020, 2:52 PM IST
ಮುಂಬರುವ ಆಸೀಸ್​​ ಟೆಸ್ಟ್​​ ಸರಣಿಯಲ್ಲಿ ಪಾಂಡ್ಯ ಅಪಾಯಕಾರಿಯಾಗಲಿದ್ದಾರೆ; ಇಯಾನ್​​‌ ಚಾಪೆಲ್
ಹಾರ್ದಿಕ್‌ ಪಾಂಡ್ಯ (ಆಲ್‌ರೌಂಡರ್‌)
  • Share this:
ಮುಂಬರುವ ಆಸ್ಟ್ರೇಲಿಯದಲ್ಲಿ ನಡೆಯುವ ಟೆಸ್ಟ್‌ ಸರಣಿ ವೇಳೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಲಭ್ಯರಾದರೆ ಅದರಿಂದ ಭಾರತಕ್ಕೆ ಭಾರೀ ಲಾಭವಿದೆ  ಎಂದು ಆಸೀಸ್​​ ಮಾಜಿ ಕ್ರಿಕೆಟಿಗ ಇಯಾನ್​​‌ ಚಾಪೆಲ್‌ ಹೇಳಿದ್ದಾರೆ.

ಹಾರ್ದಿಕ್​​ ಪಾಂಡ್ಯ ಉತ್ತಮ ದಾಡಿಂಗ. ಕೀಪರ್‌ ರಿಷಭ್‌ ಪಂತ್‌ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿದರೆ. ಪಾಂಡ್ಯ 7ನೇ ಕ್ರಮಾಂಕದಲ್ಲಿ ಬ್ಯಾಂಡಿಂಗ್​ಗೆ ಇಳಿಯಬಹುದು ಎಂದಿದ್ದಾರೆ ಇಯಾನ್​​‌ ಚಾಪೆಲ್‌.

ಟೆಸ್ಟ್​ ಸರಣಿಯ ವೇಳೆ ಹಾರ್ದಿಕ್​ ಪಾಂಡ್ಯ ಭಾರತದ ಪಾಲಿಗೆ ಲಭ್ಯವಾದರೆ ಹೆಚ್ಚುವರಿ ಬೌಲಿಂಗ್‌ ಅವಕಾಶವನ್ನು ಒದಗಿಸಲಿದ್ದಾರೆ. ವೇಗದ ಬೌಲರ್‌ಗಳಿಗೆ ವಿಶ್ರಾಂತಿ ಬೇಕಾದಾಗ ಪಾಂಡ್ಯ ಅವರನ್ನು ಬಳಸಿಕೊಳ್ಳಬಹುದು. ಆಗ ಅವರು ತೃತೀಯ ಸೀಮರ್‌ ಆಗಿ ಪರಿಗಣಿಸಲ್ಪಡುತ್ತಾರೆ. ಇದರಿಂದ ಅವಳಿ ಸ್ಪಿನ್‌ ದಾಳಿಯನ್ನೂ ಭಾರತ ಸಂಘಟಿಸಬಹುದಾಗಿದೆ ಎಂದು ಚಾಪೆಲ್‌ ತಮ್ಮ ಅಂಕಣವೊಂದರಲ್ಲಿ ಬರೆದಿದ್ದಾರೆ.

ಆಸೀಸ್ ಟೆಸ್ಟ್​​​​​ ಸರಣಿಗಾಗಿ ಟೀಂ ಇಂಡಿಯಾ ಸ್ಪಿನ್ನರ್‌ಗಳ ಆಯ್ಕೆಯು ದೊಡ್ಡ ತಲೆನೋವಾಗಿ ಪರಿಣಮಿಸಬಹುದು. ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌ ನಡುವೆ ಪೈಪೋಟಿ ಇರಲಿದೆ. ಅಶ್ವಿ‌ನ್‌ ಟೆಸ್ಟ್​ನಲ್ಲಿ  ಉತ್ತಮ ಪ್ರದರ್ಶನ  ನೀಡಿದ್ದರಾದರು ಆಸ್ಟ್ರೇಲಿಯ ವಿರುದ್ಧ ಹೆಳಿಕೊರ್ಳಲುವ ಪ್ರದರ್ಶನ ನೀಡಲಿಲ್ಲ. ಆಲ್​​ರೌಂಡರ್​​​ ಜಡೇಜಾ ಬ್ಯಾಟಿಂಗ್​ ಜೊತೆಗೆ ಬೌಲಿಂಗ್​ನಲ್ಲೂ ಸಾಕಷ್ಟು ಸುಧಾರಿಸಿಗೊಂಡಿದ್ದಾರೆ, ಇವರಿಬ್ಬರಿಗಿಂತ ರಿಸ್ಟ್‌ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಆಸ್ಟ್ರೇಲಿಯ ಬ್ಯಾಟ್ಸ್​ಮನ್​ಗೆ ನಡುಕ ಹುಟ್ಟಿಸಲಿದ್ದಾರೆ ಎಂದು ಇಯಾನ್​​‌ ಚಾಪೆಲ್‌ ಹೇಳಿದ್ದಾರೆ.

Chiranjeevi Sarja: ಚಿರು ಸಾವಿಗೆ ಸಂತಾಪ ಸೂಚಿಸಿದ ಮಾಲಿವುಡ್ ತಾರೆಯರು

ನನ್ನನ್ನು ಕರಿಯ ಎಂದು ಕರೆಯುತ್ತಿದ್ದರು; ಆಕ್ರೋಶ ಹೊರ ಹಾಕಿದ ಸನ್​ರೈಸರ್ಸ್​ ತಂಡದ ಆಟಗಾರ!

 
First published: June 8, 2020, 2:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading