ಮಾರಕ ಕೊರೋನಾ ವೈರಸ್ನಿಂದಾಗಿ ಇಡೀ ಜಗತ್ತು ಸ್ತಬ್ದಗೊಂಡಿದೆ. ಭಾರತದಲ್ಲೂ ಸೋಂಕಿತರ ಹಾಗೂ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಭಾರತದಲ್ಲಿ ಲಾಕ್ಡೌನ್ ಮೇ. 3ರ ತನಕ ಮುಂದುವರೆಸಲಾಗಿದೆ. ಆದರೆ, ಯಾವುದೇ ಪ್ರಯೋಜನ ಕಾಣುತ್ತಿಲ್ಲ. ಕ್ರೀಡಾ ಜಗತ್ತಿನ ಮೇಲೂ ಕೊರೋನಾ ಕರಿನೆರಳು ಬೀರಿದ್ದು, ಕ್ರಿಕೆಟ್ ಎಲ್ಲ ಚಟುವಟಿಕೆ ಸಂಪೂರ್ಣ ನಿಂತುಹೋಗಿದೆ.
ಆಟಗಾರರು ಮನೆಯಲ್ಲಿಯೇ ಕುಳಿತು ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಈ ನಡುವೆ ಟೀಂ ಇಂಡಿಯಾ ಪ್ರಮುಖ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಕೊರೋನಾ ವಿರುದ್ಧದ ಹೋರಾಟಕ್ಕೆ ಕನ್ನಡಿಗ ರಾಹುಲ್ ಮಾಡಿದ ಸಹಾಯ ಕೇಳಿದ್ರೆ ಹೆಮ್ಮೆಯಾಗುತ್ತೆ!
ಟೀಂ ಇಂಡಿಯಾ ಆಟಗಾರರು ಇಂದು ಶ್ರೀಮಂತರಾಗಿರಬಹುದು. ಆದರೆ, ಕೆಲವು ಆಟಗಾರರು ಬೆಳೆದು ಬಂದ ಹಾದಿ, ತಂಡ ಸೇರಿಕೊಳ್ಳಲು ಪಟ್ಟ ಶ್ರಮ ಅಷ್ಟಿಟ್ಟಲ್ಲ. ಇದೇ ಸಾಲಿನಲ್ಲಿ ಪ್ರಮುಖರು ಎಂದರೆ ಪಾಂಡ್ಯ ಬ್ರದರ್ಸ್.
ಕ್ರಿಕೆಟ್ ಪಂದ್ಯ ಆಡಲು ಅಭ್ಯಾಸಕ್ಕಾಗಿ ಟ್ರಕ್ನಲ್ಲಿ ಪಾಂಡ್ಯ ಬ್ರದರ್ಸ್ ಪ್ರಯಾಣಿಸುತ್ತಿದ್ದರು. ಸದ್ಯ ತಾನು ಟೀಂ ಇಂಡಿಯಾ ಸೇರುವ ಮುನ್ನ ನಡೆದ ಬಂದ ಹಾದಿಯ ಬಗ್ಗೆ ನೆನಪು ಮಾಡಿಕೊಂಡು ಹಾರ್ದಿಕ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.
ಈ ಫೋಟೋದಲ್ಲಿ ಹಾರ್ದಿಕ್ ಜೊತೆ ಅಣ್ಣ ಕ್ರುನಾಲ್ ಪಾಂಡ್ಯ ಕೂಡ ಇದ್ದು, 'ಇದು 2011ರ ಫೋಟೋ. ಸಮಯ ಹೇಗೆ ಬದಲಾಗುತ್ತದೆ, ಸ್ವ್ಯಾಗ್ ಮೇರಾ ದೇಸಿ ಹೈ' ಎಂದು ಹಾರ್ದಿಕ್ ಬರೆದುಕೊಂಡಿದ್ದಾರೆ.
ಕನ್ನಡಿಗನ ಸಾಧನೆಗೆ ತಕ್ಕ ಗೌರವ ಸಿಕ್ಕಿಲ್ಲವೆಂದ ಖ್ಯಾತ ವಿದೇಶಿ ಆಟಗಾರ..!
ಹಾರ್ದಿಕ್ ಈ ಫೋಟೋ ಹಂಚಿಕೊಂಡ ಬೆನ್ನಲ್ಲೇ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ಗಳು ಬಂದಿದೆ. ಟೀಂ ಇಂಡಿಯಾ ಆಟಗಾರರಾದ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಕೂಡ ಕಮೆಂಟ್ ಮಾಡಿದ್ದಾರೆ. ಐಪಿಎಲ್ನಲ್ಲಿ ಹಾರ್ದಿಕ್ ಹಾಗೂ ಕ್ರುನಾಲ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.
![Krunal Pandya]()
ಹಾರ್ದಿಕ್ ಫೋಟೋಕ್ಕೆ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಕಮೆಂಟ್ ಮಾಡಿರುವುದು.
ಈ ಬಾರಿಯ ಐಪಿಎಲ್ ಕೊರೋನಾ ವೈರಸ್ನಿಂದಾಗಿ ಮುಂದಿನ ಆದೇಶದವರೆಗೆ ರದ್ದು ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ