Hardik Pandya: ಎರಡನೆಯ ಮಗುವಿನ ನಿರೀಕ್ಷೆಯಲ್ಲಿ ಹಾರ್ದಿಕ್ ಪಾಂಡ್ಯ ದಂಪತಿ..?

Natasa Stankovic pregnant?: ಕ್ರಿಸ್ಮಸ್ ಹಬ್ಬವನ್ನು ನತಾಶಾ ಹಾಗೂ ಹಾರ್ದಿಕ್ ಪಾಂಡ್ಯ ದಂಪತಿ ಜೋಡಿಯಾಗಿ ಅದ್ದೂರಿಯಾಗಿ ಆಚರಣೆ ಮಾಡಿದರು. ಕ್ರಿಸ್ಮಸ್ ಆಚರಣೆ ವೇಳೆ ಅಗಸ್ತ್ಯ ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರ ಸಹೋದರ ಕೃನಾಲ್ ಪಾಂಡ್ಯ ಪಂಖೂರಿ ಶರ್ಮಾ ಮತ್ತು ಅವರ ತಾಯಿ ನಂದಿನಿ ಪಾಂಡ್ಯ ಅವರು ಫೋಟೋಗಳಲ್ಲಿ ಕಾಣಿಸಿಕೊಂಡಿಡ್ರು

ಹಾರ್ದಿಕ್ ಪಾಂಡ್ಯ ನತಾಶ

ಹಾರ್ದಿಕ್ ಪಾಂಡ್ಯ ನತಾಶ

  • Share this:
    ಭಾರತೀಯ ಕ್ರಿಕೆಟ್ ತಂಡ (Team India) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik pandya) ನಟಾಸಾ ಸ್ಟ್ಯಾಂಕೋವಿಕ್ (Natasa Stankovic) ಜೋಡಿ ಭಾರತೀಯ ಕ್ರಿಕೆಟ್ ತಾರೆಗಳ ಜೋಡಿಗಳಲ್ಲಿ ಅತ್ಯಂತ ಮುದ್ದಾದ ಜೋಡಿ.. ಈ ಜೋಡಿಗೆ ಜನವರಿ 2020 ರಲ್ಲಿ ನಿಶ್ಚಿತಾರ್ಥ(Engagement) ಮಾಡಿಕೊಂಡರು ಮತ್ತು ಮೇ ತಿಂಗಳಲ್ಲಿ ಮದುವೆಯಾದ ಈ ಜೋಡಿಗೆ ಅದೇ ವರ್ಷ  ಜುಲೈನಲ್ಲಿ ಮಗ ಅಗಸ್ತ್ಯನನ್ನು ಎಂಬ ಮಗ ಕೂಡ ಹುಟ್ಟಿದ .ಈಗ ಇದೆಲ್ಲ ಹಳೆಯ ಕಥೆ. ಈಗ ವಿಶೇಷ ಅಂದ್ರೆ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಜೋಡಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ.

    ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಪಾಂಡ್ಯ ದಂಪತಿ

    ಮೊನ್ನೆ ಮೊನ್ನೆ ನಡೆದ ಕ್ರಿಸ್ಮಸ್ ಹಬ್ಬವನ್ನು ನತಾಶಾ ಹಾಗೂ ಹಾರ್ದಿಕ್ ಪಾಂಡ್ಯ ದಂಪತಿ ಜೋಡಿಯಾಗಿ ಅದ್ದೂರಿಯಾಗಿ ಆಚರಣೆ ಮಾಡಿದರು. ಕ್ರಿಸ್ಮಸ್ ಆಚರಣೆ ವೇಳೆ ಅಗಸ್ತ್ಯ, ಅವರ ಪತ್ನಿ ನತಾಶಾ ಸ್ಟಾಂಕೋವಿಕ್, ಅವರ ಸಹೋದರ ಕೃನಾಲ್ ಪಾಂಡ್ಯ, ಪಂಖೂರಿ ಶರ್ಮಾ ಮತ್ತು ಅವರ ತಾಯಿ ನಂದಿನಿ ಪಾಂಡ್ಯ ಅವರು ಫೋಟೋಗಳಲ್ಲಿ ಕಾಣಿಸಿಕೊಂಡಿಡ್ರು.ಅಲ್ಲದೇ ಈ ಫೋಟೋಗಳನ್ನು ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಇದರ ಬೆನ್ನಲ್ಲೇ ಅಭಿಮಾನಿಗಳು ನತಾಶಾ ಮತ್ತೊಮ್ಮೆ ತಾಯಿಯಾಗುತ್ತಿದ್ದಾರಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಹಂಚಿಕೊಂಡಿರುವ ಫೋಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಹೊಸ ಟ್ಯಾಟೂ ಹಾಕಿಸಿಕೊಂಡ ಹಾರ್ದಿಕ್ ಪಾಂಡ್ಯ! ಇದರಲ್ಲಿರೋ ದಿನಾಂಕದ ಹಿಂದಿನ ಗುಟ್ಟೇನು ಗೊತ್ತಾ?

    ಫೋಟೋದಲ್ಲಿ ಕಾಣಿಸುತ್ತಿದೆ ನತಾಶಾ ಬೇಬಿ ಬಂಪ್

    ಇನ್ನು ಪಾಂಡ್ಯ ಸಹೋದರರು ಅದ್ದೂರಿಯಾಗಿ ಕ್ರಿಸ್ಮಸ್ ಹಬ್ಬವನ್ನು ಸೆಲೆಬ್ರೇಶನ್ ಮಾಡಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.. ಈ ಫೋಟೋದಲ್ಲಿ ಹಾರ್ದಿಕ್ ಪಾಂಡ್ಯ ಪತ್ನಿ ನತಾಶರನ್ನ ಗಮನಿಸಿದ ಪಾಂಡ್ಯ ಅಭಿಮಾನಿಗಳು ನತಾಶಾ ಮತ್ತೊಮ್ಮೆ ತಾಯಿಯಾಗುತ್ತಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ.. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿರುವ ಫೋಟೋದಲ್ಲಿ ನತಾಶ ಗುಲಾಬಿ ಬಣ್ಣದ ಸ್ಟ್ರಾಪ್​ಲೆಸ್ ಗೌನ್ ಧರಿಸಿ ಕಾಣಿಸಿಕೊಂಡಿದ್ದು, ಈ ವೇಳೆ ಮಗ ಅಗಸ್ತ್ಯನನ್ನು ಎತ್ತಿಕೊಂಡು ಪತ್ನಿಯೊಂದಿಗೆ ಹಾರ್ದಿಕ್​ ಪಾಂಡ್ಯ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ನತಾಶಾ ಅವರ ಬೇಬಿ ಬಂಪ್ ಕಾಣುತ್ತಿದೆ. ಹೀಗಾಗಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವು ನೆಟ್ಟಿಗರು ಅಗಸ್ತ್ಯನಿಗೆ ಸಹೋದರ ಅಥವಾ ಸಹೋದರಿ ಬರುತ್ತಿದ್ದಾರೆ. ಹಾಯ್, ನತಾಶಾ ಜೀ ನೀವು ಗರ್ಭಿಣಿಯಾಗಿದ್ದೀರಾ? ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ.

    ಇನ್ನು ನತಾಶಾ ಹಾಗೂ ಹಾರ್ದಿಕ್ ಈಗಿನ್ನೂ ಅಗಸ್ತ್ಯನ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರಾ ಅನ್ನೋ ಅನುಮಾನ ಅಭಿಮಾನಿಗಳಿಗೆ ಕಾಡ್ತಾ ಇದೆ. ಆದರೆ ಈ ಪ್ರಶ್ನೆಗೆ ಇವರಿಬ್ಬರಿಂದ ಉತ್ತರ ಬಂದಿಲ್ಲ.ಹೀಗಾಗಿ ಅಭಿಮಾನಿಗಳು ನತಾಶಾ ಗರ್ಭಿಣಿಯಾಗಿರುಬಹುದು ಎಂದು ತಮ್ಮಲ್ಲೇ ಮಾತಾಡಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಕಪ್‌ ತರದೆ 5 ಕೋಟಿ ಮೌಲ್ಯದ ವಾಚ್ ತಂದ ಹಾರ್ದಿಕ್‌ ಪಾಂಡ್ಯ ವಶಕ್ಕೆ: ಟೈಮೇ ಸರಿ ಇಲ್ಲ..!

    ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿರುವ ಹಾರ್ದಿಕ್

    ಹಾರ್ದಿಕ್ ಕೆಲವು ಸಮಯದಿಂದ ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿದ್ದಾರೆ. T20 ವಿಶ್ವಕಪ್ ನಂತರ, ನ್ಯೂಜಿಲೆಂಡ್ ವಿರುದ್ಧದ T20 ಸರಣಿಗೆ ಅವರನ್ನು ಕೈ ಬಿಡಲಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯೂ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದಾರೆ.ಇನ್ನು ಹಾರ್ದಿಕ್ ಪಾಂಡ್ಯ ಅವರ ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಅವರನ್ನು ಈ ವರ್ಷ ಅವರ ತಂಡದಿಂದ ಬಿಡುಗಡೆ ಮಾಡಿದೆ. ಹೀಗಿರುವಾಗ ಹಾರ್ದಿಕ್ ಅಹಮದಾಬಾದ್ ತಂಡ ಸೇರಬಹುದು ಎನ್ನಲಾಗುತ್ತಿದೆ. ಈ ಡ್ಯಾಶಿಂಗ್ ಆಲ್ ರೌಂಡರ್ ಅನ್ನು ಯಾವ ಫ್ರಾಂಚೈಸಿ ತನ್ನ ತಂಡದಲ್ಲಿ ಸೇರಿಸಿಕೊಳ್ಳಲಿದೆ ಎಂಬುದನ್ನು ನೋಡಬೇಕಾಗಿದೆ.
    Published by:ranjumbkgowda1 ranjumbkgowda1
    First published: