ಅವರಿವರಿಂದ ಶೂ ಪಡೆದು ಬೌಲಿಂಗ್ ಮಾಡುತ್ತಿದ್ದೆ: ಕಷ್ಟದ ದಿನಗಳನ್ನ ನೆನೆದ ಭಾರತದ ಆಲ್​ರೌಂಡರ್

Hardik Pandya Tough Situations- ಹಾರ್ದಿಕ್ ಪಾಂಡ್ಯ ಅವರು ಆಲ್​ರೌಂಡರ್ ಆಟಗಾರನಾಗಿ ರೂಪುಗೊಂಡಿದ್ದು ಆಕಸ್ಮಿಕವಾಗಿ. ಹದಿಹರೆಯದವರಾಗಿದ್ದಾಗ ಗ್ರೀನ್ ಪಿಚ್​ನಲ್ಲಿ ಬೌಲಿಂಗ್ ಮಾಡಬಲ್ಲ ಆಟಗಾರರು ತಂಡದಲ್ಲಿ ಇಲ್ಲದಾಗ ಹಾರ್ದಿಕ್ ಬೌಲಿಂಗ್ ಮಾಡಿ ಸೈ ಎನಿಸಿದ್ದರು.

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

 • Cricketnext
 • Last Updated :
 • Share this:
  ಬೆಂಗಳೂರು: ಭಾರತದ ಸದ್ಯದ ಅತ್ಯುತ್ತಮ ಆಲ್​ರೌಂಡರ್​ಗಳ ಸಾಲಿನಲ್ಲಿ ಸುಲಭವಾಗಿ ಕೇಳಿಬರುವ ಹೆಸರು ಹಾರ್ದಿಕ್ ಪಾಂಡ್ಯ (Hardik Pandya). ಬ್ಯಾಟಿಂಗ್​ನಲ್ಲಿ ಬಿಗ್ ಹಿಟ್ಟರ್, ಬೌಲಿಂಗ್​ನಲ್ಲಿ ಫಾಸ್ಟ್ ಬೌಲರ್ (Fast Bowling All-rounder). ಹೀಗಾಗಿ, ಬಹುತೇಕ ಸಂದರ್ಭದಲ್ಲಿ ಭಾರತ ತಂಡಕ್ಕೆ ಬಹಳ ಉಪಯುಕ್ತವಾಗಬಲ್ಲ ಪ್ರತಿಭಾನ್ವಿತ ಆಲ್​ರೌಂಡರ್ ಅವರು. ಮುಂದಿನ ತಿಂಗಳು ಯುಎಇಯಲ್ಲಿ ಪ್ರಾರಂಭವಾಗುವ ಟಿ20 ವಿಶ್ವಕಪ್​ಗೆ (T20 World Cup Cricket) ಭಾರತ ತಂಡದಲ್ಲಿ ಅವರು ಸ್ಥಾನ ಪಡೆದಿದ್ದಾರೆ. ಕಡುಬಡತನದಲ್ಲಿ ಹಾಗೂ ಹಲವು ಅಡೆತಡೆಗಳನ್ನ ದಾಟಿ ಅವರು ಈ ಹಂತಕ್ಕೆ ಬಂದಿದ್ದಾರೆ. ಮೂಲತಃ ಬ್ಯಾಟುಗಾರರಾಗಿದ್ದ ಹಾರ್ದಿಕ್ ಪಾಂಡ್ಯ ಫಾಸ್ಟ್ ಬೌಲಿಂಗ್​ಗೆ ಬಂದದ್ದು ಆಕಸ್ಮಿಕವಾಗಿ. ಆ ಸಂದರ್ಭವನ್ನ ನೆನಪಿಸಿಕೊಳ್ಳುವ ಪಾಂಡ್ಯ, ವೇಗದ ಬೌಲಿಂಗ್ ಮಾಡುವಾಗ ಬೇರೆಯವರಿಂದ ಶೂಗಳನ್ನ (Borrowing Shoes for Fast bowling) ಪಡೆದು ಹೋಗುತ್ತಿದ್ದರಂತೆ. ಹದಿಹರೆಯದವರಾಗಿದ್ದಾಗ ಕ್ರಿಕೆಟ್ ಬ್ಯಾಟ್, ಪ್ಯಾಡ್, ಬಾಲ್ ಇತ್ಯಾದಿಯನ್ನ ಹೊಂಚಿಕೊಳ್ಳುವುದೇ ಕಷ್ಟವಾಗಿತ್ತು ಎಂದು ಅವರು ಹೇಳುತ್ತಾರೆ.

  ಅಂಡರ್-19 ಕ್ರಿಕೆಟ್ ಆಡುವಾಗ ಹಾರ್ದಿಕ್ ಪಾಂಡ್ಯ ಪೂರ್ಣಪ್ರಮಾಣದ ಬ್ಯಾಟ್ಸ್​ಮನ್ ಆಗಿದ್ದರು. ಅಂದರೆ ಬೌಲಿಂಗ್ ಮಾಡದೇ ಬ್ಯಾಟಿಂಗ್​ಗೇ ಸೀಮಿತವಾಗಿದ್ದವರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬರುತ್ತಿದ್ದವರು. ಬೌಲಿಂಗ್ ಬರುತ್ತಿತ್ತಾದರೂ ಅಪರೂಪಕ್ಕೆ ಬೌಲಿಂಗ್ ಮಾಡುತ್ತಿದ್ದರು. ತಮ್ಮ ತಂಡದ ಬೌಲರ್​ಗಳು ನೆಟ್ ಪ್ರಾಕ್ಟೀಸ್ ವೇಳೆ ಸುಸ್ತಾಗಿದ್ದಾಗ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿದ್ದರು. ಆಗೆಲ್ಲಾ ಅವರು ತಮ್ಮ ಸಹ ಆಟಗಾರರ ಶೂಗಳನ್ನ ಪಡೆದು ಫಾಸ್ಟ್ ಬೌಲಿಂಗ್ ಮಾಡುತ್ತಿದ್ದರು. ಅಂದಹಾಗೆ, ಅವರು ಆಲ್​ರೌಂಡರ್ ಆಗಿದ್ದೇ ಆಕಸ್ಮಿಕವಾಗಿಯಂತೆ.

  “ನಾನು 19ನೇ ವಯಸ್ಸಿನಲ್ಲಿದ್ದಾಗ ಆಕಸ್ಮಿಕವಾಗಿ ಆಲ್​ರೌಂಡರ್ ಆದೆ. ಭಾರತಕ್ಕೆ ಆಡುವ ಮುಂಚೆ ನಾನು ಬೌಲಿಂಗ್ ಮಾಡಿದ್ದು ಒಂದು ವರ್ಷ ಇರಬಹುದು ಅಷ್ಟೇ” ಎಂದು ಹಾರ್ದಿಕ್ ಪಾಂಡ್ಯ ಕೆಲ ಘಟನೆಗಳನ್ನ ಸ್ಮರಿಸಿಕೊಳ್ಳುತ್ತಾರೆ.

  ಇದನ್ನೂ ಓದಿ: Eng vs Ind- ರದ್ದಾದ ಐದನೇ ಪಂದ್ಯ ಬೇರೆ ದಿನ ಆಡಿಸುವ ಸಾಧ್ಯತೆ; ಭಾರತಕ್ಕೆ ಸಿಕ್ಕಿತು ಬೆಂಬಲ

  ಕೋಚ್ ಕಣ್ಣಿಗೆ ಬಿದ್ದ ಘಟನೆ:

  ಹಾರ್ದಿಕ್ ಪಾಂಡ್ಯ ಆಗ ಕಿರಣ್ ಮೋರೆ ಅಕಾಡೆಮಿಯಲ್ಲಿ ಅಂಡರ್-19 ಆಟಗಾರನಾಗಿ ತರಬೇತಿ ಪಡೆಯುತ್ತಿದ್ದರು. ಫಾಸ್ಟ್ ಬೌಲರ್ಸ್​ಗೆ ನೆರವಾಗುವ ಪಿಚ್​ನಲ್ಲಿ ಲೋಕಲ್ ಮ್ಯಾಚ್ ನಡೆದಿತ್ತು. ಆಗ ಹಾರ್ದಿಕ್ ಪಾಂಡ್ಯ ಇದ್ದ ತಂಡದಲ್ಲಿ ಆ ಸಂದರ್ಭಕ್ಕೆ ವೇಗದ ಬೌಲರ್ ಇರಲಿಲ್ಲ. ಹಾರ್ದಿಕ್ ಪಾಂಡ್ಯಗೆ ವೇಗದ ಬೌಲಿಂಗ್ ಬರುತ್ತಿದ್ದರಿಂದ ಅವರೇ ಬೌಲಿಂಗ್​ಗೆ ಇಳಿದರು. ಫಾಸ್ಟ್ ಬೌಲರ್ಸ್ ಹಾಕುವ ಶೂ ಅವರಲ್ಲಿ ಇಲ್ಲದ್ದರಿಂದ ತಮ್ಮ ಸಹ ಆಟಗಾರರಿಂದ ಶೂ ಪಡೆದು ಬೌಲಿಂಗ್ ಮಾಡಿದರು. ಆ ಪಂದ್ಯದಲ್ಲಿ ಪಾಂಡ್ಯ ಐದು ವಿಕೆಟ್ ಪಡೆದು ಗಮನ ಸೆಳೆದರು. ಅದೃಷ್ಟಕ್ಕೆ, ಈ ಪಂದ್ಯಕ್ಕೆ ಮುನ್ನ ಕೋಚ್ ಶರತ್ ಕುಮಾರ್ ಅವರು ಹಾರ್ದಿಕ್ ಪಾಂಡ್ಯ ಮತ್ತಿತರರು ಮಾಡುತ್ತಿದ್ದ ಅಭ್ಯಾಸವನ್ನ ವೀಕ್ಷಿಸಿದ್ದರು. ಕುತೂಹಲದಿಂದ ಅವರು ಆವತ್ತಿನ ಮ್ಯಾಚ್ ವೀಕ್ಷಿಸಲು ಬಂದಿದ್ದರು. ಪಾಂಡ್ಯ ಐದು ವಿಕೆಟ್ ಪಡೆಯುತ್ತಿದ್ದಂತೆಯೇ ಅವರನ್ನ ಬರೋಡಾ ರಣಜಿ ತಂಡಕ್ಕೆ ಕೊಂಡೊಯ್ದರೆನ್ನಲಾಗಿದೆ. ಹಾರ್ದಿಕ್ ಪಾಂಡ್ಯ ಈ ವಿಚಾರವನ್ನ ಹಿಂದೂಸ್ತಾನ್ ಟೈಮ್ಸ್​ನ ಆನ್​ಲೈನ್ ಸಂದರ್ಶನದ ವೇಳೆ ಹಂಚಿಕೊಂಡಿದ್ದಾರೆ.

  ರಣಜಿ ತಂಡ ಸೇರಿದ ಬಳಿಕ ಹಾರ್ದಿಕ್ ಪಾಂಡ್ಯ ತಮ್ಮ ಕ್ರಿಕೆಟ್ ಪ್ರಯಾಣದಲ್ಲಿ ಹಿಂದಿರುಗಿ ನೋಡಿದ್ದಿಲ್ಲ. ಚುಟುಕು ಕ್ರಿಕೆಟ್​ನಲ್ಲಿ ಭಾರತ ತಂಡದ ರೆಗ್ಯುಲರ್ ಮೆಂಬರ್ ಆಗುವ ಮಟ್ಟಕ್ಕೆ ಛಾಪು ಮೂಡಿಸಿದ್ದಾರೆ. ಭಾರತ ತಂಡದ ಪರ 63 ಏಕದಿನ ಪಂದ್ಯಗಳನ್ನ ಆಡಿ 1,286 ರನ್ ಗಳಿಸಿದ್ದಾರೆ. 49 ಟಿ20 ಪಂದ್ಯಗಳನ್ನ ಆಡಿ 484 ರನ್ ಗಳಿಸಿದ್ದಾರೆ. ಎರಡೂ ಪ್ರಾಕಾರದ ಕ್ರಿಕೆಟ್ ಟೂರ್ನಿಗಳಲ್ಲಿ ಒಟ್ಟಾರೆ 99 ವಿಕೆಟ್ ಪಡೆದು ಒಬ್ಬ ಅಮೂಲ್ಯ ಆಲ್​ರೌಂಡರ್ ಎನಿಸಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ವಿಶ್ವಕಪ್​ಗೆ ಮುಂಚೆ ಅವರು ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ.

  ಹಾರ್ದಿಪ್ ಪಾಂಡ್ಯ ಅವರ ಹಿರಿಯ ಸಹೋದರ ಕೃಣಾಲ್ ಪಾಂಡ್ಯ ಕೂಡ ಆಲ್​ರೌಂಡರ್ ಆಗಿದ್ದಾರೆ. ಹಾರ್ದಿಕ್ ಅವರು ಫಾಸ್ಟ್ ಬೌಲಿಂಗ್ ಆಲ್​ರೌಂಡರೆ ಆದರೆ, ಕೃಣಾಳ್ ಸ್ಪಿನ್ನಿಂಗ್ ಆಲ್​ರೌಂಡರ್ ಆಗಿದ್ಧಾರೆ. ಇಬ್ಬರೂ ಕೂಡ ಬ್ಯಾಟಿಂಗ್​ಗೆ ಇಳಿದರೆ ಬಿಗ್ ಹಿಟ್ಟರ್ಸ್​ಗಳೇ ಆಗಿದ್ದಾರೆ. ಇಬ್ಬರೂ ಭಾರತ ತಂಡದಲ್ಲಿ ಒಟ್ಟಿಗೆ ಆಡಿದ ದಾಖಲೆಯೂ ಇದೆ.
  Published by:Vijayasarthy SN
  First published: