ಕನ್ನಡ ಸೇರಿ 16 ಭಾಷೆಗಳಲ್ಲಿ ಟ್ಯಾಟೋ ಹಾಕಿ ಟ್ರೋಲ್ ಆದ ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಇತ್ತೀಚೆಗೆ ತಮ್ಮ ಕೈಗೆ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಭಾರತದ 16 ಭಾಷೆಗಳಲ್ಲಿ ತಮ್ಮ ಹೆಸರನ್ನು ಹಚ್ಚೆ ಹಾಕಿಸಿಕೊಂಡಿರುವ ಪಾಂಡ್ಯ ಫೋಟೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಸಾಕಷ್ಟು ಕಮೆಂಟ್​ಗಳು ಬರುತ್ತಿವೆ.

ಹಾರ್ದಿಕ್ ಪಾಂಡ್ಯ (ಟೀಂ ಇಂಡಿಯಾ ಆಲ್ರೌಂಡರ್ ಆಟಗಾರ)

ಹಾರ್ದಿಕ್ ಪಾಂಡ್ಯ (ಟೀಂ ಇಂಡಿಯಾ ಆಲ್ರೌಂಡರ್ ಆಟಗಾರ)

  • News18
  • Last Updated :
  • Share this:
ಟೀಂ ಇಂಡಿಯಾದ ಸ್ಟೈಲೀಶ್ ಆಟಗಾರರ ಪೈಕಿ ಹಾರ್ದಿಕ್ ಪಾಂಡ್ಯ ಕೂಡ ಒಬ್ಬರು. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹೊಸಹೊಸ ಅಲಂಕಾರದ ಬಟ್ಟೆ ಧರಿಸಿ ಕಲರ್ ಫುಲ್​ ಆಗಿ ಮಿಂಚುತ್ತಿರುತ್ತಾರೆ. ಅದರಲ್ಲು ಪಾಂಡ್ಯ ಹೇರ್ ಸ್ಟೈಲ್​​ ಬಗ್ಗೆಯಂತು ಕೇಳುವುದು ಬೇಡ. ಪ್ರತಿ ಸರಣಿಯಲ್ಲಿ ಹೊಸಹೊಸ ಕೇಶ ವಿನ್ಯಾಸದೊಂದಿಗೆ ಮೈದಾನದಲ್ಲಿ ಕಾಣಸಿಗುತ್ತಾರೆ.

ಅಂತೆಯೆ ಹಾರ್ದಿಕ್ ಇತ್ತೀಚೆಗೆ ತಮ್ಮ ಕೈಗೆ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಭಾರತದ 16 ಭಾಷೆಗಳಲ್ಲಿ ತಮ್ಮ ಹೆಸರನ್ನು ಹಚ್ಚೆ ಹಾಕಿಸಿಕೊಂಡಿರುವ ಪಾಂಡ್ಯ ಫೋಟೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಸಾಕಷ್ಟು ಕಮೆಂಟ್​ಗಳು ಬರುತ್ತಿವೆ.

ಪಾಂಡ್ಯ ಹಾಕಿಕೊಂಡಿರುವ ಟ್ಯಾಟೋದಲ್ಲಿ ಕನ್ನಡ ಭಾಷೆ ಕೂಡ ಇದೆ ಎಂಬುದು ವಿಶೇಷ. ಆದರೆ, ಇದುವೇ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಹಾರ್ದಿಕ್ ತಮ್ಮ ಹೆಸರನ್ನು 16 ಭಾಷೆಗಳಲ್ಲಿ ಹಚ್ಚೆ ಹಾಕಿಸಿಕೊಳ್ಳಲು ಗೂಗಲ್ ಟ್ರಾನ್ಸ್​​​ಲೇಟ್​​​ ಮೊರೆಹೋಗಿದ್ದಾರೆ ಎಂದು ಹೇಳುತ್ತಿದ್ದಾರೆ. ಯಾಕೆಂದರೆ ಕನ್ನಡದಲ್ಲಿ ಹಾರ್ದಿಕ್ ಎಂದು ಹಚ್ಚೆಹಾಕಿಸುವ ಬದಲು ಹಾರ್ಡಿಕ್ ಎಂದು ಬರೆದಿದ್ದಾರೆ. ಇದರಂತೆ ಅನೇಕ ತಪ್ಪುಗಳು ಟ್ಯಾಟೋದಲ್ಲಿದೆಯಂತೆ.

ಇದನ್ನೂ ಓದಿ: ಅಬ್ಬರವನ್ನು ಮರೆತ ಗಬ್ಬರ್; 2ನೇ ಏಕದಿನದಲ್ಲಿ ಧವನ್ ಬದಲು ರಾಹುಲ್​ಗೆ ಅವಕಾಶ?

 ಇದಕ್ಕಾಗಿಯೆ ಹಾರ್ದಿಕ್​ರನ್ನು ಅನೇಕರು ಕಾಲೆಳೆದಿದ್ದು, ಈ ಎರಡು ರೂ. ನೋಟಿಗೆ ಆರ್​ಬಿಐ ಗವರ್ನರ್​​ ಸೈನ್​​​ಒಂದು ಬಾಕಿ ಇದೆ ಎಂದಿದ್ದಾರೆ.

 

First published: