Hardik Pandya | 20 SIXES: ಹಾರ್ದಿಕ್ ಪಾಂಡ್ಯ ಮತ್ತೊಂದು ಸ್ಫೋಟಕ ಆಟ; ಈ ಬಾರಿ ಸಿಡಿಸಿದ ರನ್ ಅಷ್ಟಿಟ್ಟಲ್ಲ!

Hardik Pandya 158 runs: ಇದಕ್ಕಿಂತ ಹಿಂದಿನ ಪಂದ್ಯದಲ್ಲೂ ಪಾಂಡ್ಯ ಅಬ್ಬರದ ಶತಕ ಸಿಡಿಸಿ ಆರ್ಭಟಿಸಿದ್ದರು. ಒಟ್ಟು 39 ಎಸೆತಗಳಲ್ಲಿ 105 ರನ್ ಚಚ್ಚಿದ್ದ ಪಾಂಡ್ಯ ಆಟದಲ್ಲಿ 10 ಸಿಕ್ಸರ್ ಮತ್ತು 8 ಭರ್ಜರಿ ಬೌಂಡರಿ ಸೇರಿದ್ದವು.

ಹಾರ್ದಿಕ್ ಪಾಂಡ್ಯ.

ಹಾರ್ದಿಕ್ ಪಾಂಡ್ಯ.

  • Share this:
ಇಂಜುರಿಯಿಂದಾಗಿ ಕಳೆದ ಐದು ತಿಂಗಳುಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಯಾರೂ ಊಹಿಸಲಾಗದ ರೀತಿಯಲ್ಲಿ ಕಮ್​ಬ್ಯಾಕ್ ಮಾಡಿದ್ದಾರೆ. ಡಿವೈ ಪಾಟಿಲ್‌ ಟಿ-20 ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ತನ್ನ ಸ್ಫೋಟಕ ಆಟದ ಮೂಲಕ ಕಳೆದ ಕೆಲವು ದಿನಗಳಿಂದ ಭಾರೀ ಸುದ್ದಿಯಲ್ಲಿರುವ ಈ ಪವರ್ ಹಿಟ್ಟರ್ ಈಗ ಮತ್ತೆ ಅಬ್ಬರಿಸಿ ಬೊಬ್ಬರಿದಿದ್ದಾರೆ.

Hardik Pandya Smashes 55-Ball 158 During Reliance 1 vs BPCL DY Patil T20 Cup 2020 Semi-Final, Watch Video Highlights
ಹಾರ್ದಿಕ್ ಪಾಂಡ್ಯ.


ರಿಲಯನ್ಸ್ 1 ತಂಡದ ಪರ ಆಡುತ್ತಿರುವ ಪಾಂಡ್ಯ ಇಂದು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಬಿಪಿಸಿಎಲ್ ವಿರುದ್ಧ ಶತಕ ಸಿಡಿಸಿ ಮಿಂಚಿದರು. ಪಾಂಡ್ಯ ಅಬ್ಬರಕ್ಕೆ ಶ್ರೇಯಸ್ ಐಯರ್ ದಾಖಲೆ ಪುಡಿಪುಡಿ ಆಗಿದೆ. ಕೇವಲ 39 ಎಸೆತದಲ್ಲಿ ತನ್ನ ಶತಕ ಪೂರೈಸಿದ ಪಾಂಡ್ಯ, ಒಟ್ಟು 55 ಎಸೆತಗಳಲ್ಲಿ ಅಜೇಯ 158 ರನ್ ಚಚ್ಚಿದರು.

(VIDEO): ಭಾರತೀಯ ಸಂಸ್ಕೃತಿಯಂತೆ ಸೀರೆಯುಟ್ಟು ಕ್ರಿಕೆಟ್ ಆಡಿ ಫೈನಲ್​ಗೆ ವಿಶೇಷವಾಗಿ ಶುಭಕೋರಿದ ಮಿಥಾಲಿ!

ಹಾರ್ದಿಕ್ ಈ ಪಂದ್ಯದಲ್ಲಿ ಬರೋಬ್ಬರಿ 20 ಸಿಕ್ಸರ್ ಸಿಡಿಸಿದರೆ ಬೌಂಡರಿ ಬಂದಿದ್ದು ಆರು. ಪಾಂಡ್ಯ ಸಿಡಿಸಿದ 158 ರನ್ ಟಿ-20 ಕ್ರಿಕೆಟ್​ನಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಗರಿಷ್ಠ ರನ್ ಆಗಿದೆ. ಇದಕ್ಕೂ ಮೊದಲು ಶ್ರೇಯಸ್ ಅಯ್ಯರ್ 147 ಗಳಿಸಿದ್ದರು.

ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ನಾನು ಫಿಟ್ ಎಂದು ತೋರಿಸಿರುವ ಹಾರ್ದಿಕ್, ಟೀಂ ಇಂಡಿಯಾಕ್ಕೆ ಕಮ್​ಬ್ಯಾಕ್​ ಮಾಡುವುದು ಬಹುತೇಕ ಖಚಿತವಾಗಿದೆ. ಇದಕ್ಕಿಂತ ಹಿಂದಿನ ಪಂದ್ಯದಲ್ಲೂ ಪಾಂಡ್ಯ ಅಬ್ಬರದ ಶತಕ ಸಿಡಿಸಿ ಆರ್ಭಟಿಸಿದ್ದರು.

IPL 2020: ಆರ್​ಸಿಬಿ ಸೇರಿ 8 ಫ್ರಾಂಚೈಸಿಗಳಿಂದ ಬಿಸಿಸಿಐ ವಿರುದ್ಧ ಪ್ರತಿಭಟನೆ; ಕಾರಣವೇನು ಗೊತ್ತಾ?

ಸಿಎಜಿ ವಿರುದ್ಧ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಹಾಗೂ 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಒಟ್ಟು 39 ಎಸೆತಗಳಲ್ಲಿ 105 ರನ್ ಚಚ್ಚಿದ್ದ ಪಾಂಡ್ಯ ಆಟದಲ್ಲಿ 10 ಸಿಕ್ಸರ್ ಮತ್ತು 8 ಭರ್ಜರಿ ಬೌಂಡರಿ ಸೇರಿದ್ದವು.

ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ವೈಖರಿಯ ವಿಡಿಯೋ:

First published: