ದುಬೈ (ಅಕ್ಟೋಬರ್ 26); ಅಮೆರಿಕದಲ್ಲಿ ಇತ್ತೀಚೆಗೆ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವರ್ಣದ ವ್ಯಕ್ತಿಯನ್ನು ಅಲ್ಲಿನ ಪೊಲೀಸರು ನಡುರಸ್ತೆಯಲ್ಲೇ ಅಮಾನವೀಯ ಕೊಂದಿದ್ದರು. ಈ ಸಂದರ್ಭದಲ್ಲಿ ಈ ಘಟನೆಯನ್ನು ವಿರೋಧಿಸಿ ವಿಶ್ವದಾದ್ಯಂತ ಬ್ಲಾಕ್ ಲೈವ್ ಮ್ಯಾಟರ್ (Black Live Matter) ಎಂಬ ಚಳುವಳಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇತ್ತೀಚೆಗೆ ಉತ್ತರಪ್ರದೇಶದ ಹತ್ರಾಸ್ ಎಂಬಲ್ಲಿ ದಲಿತ ಯುವತಿಯನ್ನು ಅದೇ ಊರಿನ ಮೇಲ್ಜಾತಿಯ ಕೆಲ ಯುವಕರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಅಮಾನವೀಯ ಕೊಲೆ ಮಾಡಿದ್ದರು. ಈ ಘಟನೆ ಭಾರತದಾದ್ಯಂತ ಈಗಲೂ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಆದರೆ, ಇಂತಹ ಘಟನೆಗಳ ವಿರುದ್ಧ ಕ್ರೀಡಾಪಟುಗಳು ಸಹ ತಮ್ಮ ಸಂವೇದನೆಯನ್ನು ಪ್ರದರ್ಶಿಸುವುದು, ಘಟನೆಯನ್ನು ಖಂಡಿಸುವುದು ತೀರಾ ಅಪರೂಪ. ಅಂತಹ ಅಪರೂಪದ ಘಟನೆಗೆ ಇದೀಗ ಭಾರತದ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಾಕ್ಷಿಯಾಗಿದ್ದಾರೆ.
ಐಪಿಎಲ್ ಇತಿಹಾಸದಲ್ಲಿಯೇ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಇದೇ ಮೊದಲ ಬಾರಿಗೆ ಪಂದ್ಯದ ನಡುವೆ ಮಂಡಿಯೂರಿ ‘Black Lives Matter’ ಚಳವಳಿಗೆ ಐಕ್ಯಮತ್ಯ ಸೂಚಿಸಿ ಗಮನ ಸೆಳೆದಿದ್ದಾರೆ. ಈ ಪೋಟೋವನ್ನು ಟ್ವಿಟರ್ನಲ್ಲೂ ಹಂಚಿಕೊಳ್ಳುವ ಮೂಲಕ ಅವರು ಈ ಮಹತ್ವದ ಚಳುವಳಿಗೆ ಬೆಂಬಲ ಸೂಚಿಸಿದ್ದಾರೆ.
#BlackLivesMatter pic.twitter.com/yzUS1bWh7F
— hardik pandya (@hardikpandya7) October 25, 2020
ಆಟದ 19ನೇ ಓವರ್‌ನಲ್ಲಿ ಅಬ್ಬರದ ಅರ್ಧಶತಕ ಗಳಿಸಿದ ಹಾರ್ದಿಕ್ ಪಾಂಡ್ಯ ಈ ವೇಳೆ ಮಂಡಿಯೂರಿ ಜನಾಂಗೀಯವಾದದ ವಿರುದ್ಧ ನಡೆಯುತ್ತಿರುವ ಚಳವಳಿಗೆ ತನ್ನ ಬೆಂಬಲವನ್ನು ಘೋಷಿಸಿದ್ದಾರೆ. ಪಂದ್ಯದ ನಂತರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಂಡಿಯೂರಿ ಕುಳಿತ ಫೋಟೊ ಹಾಕಿ Black Lives Matter ಎಂದು ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ