• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • Hardik Pandya: ಇವ್ರೇ ನೋಡಿ ಅತಿ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ ಹೊಂದಿದ ಅತ್ಯಂತ ಕಿರಿಯ ಕ್ರಿಕೆಟಿಗ!

Hardik Pandya: ಇವ್ರೇ ನೋಡಿ ಅತಿ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ ಹೊಂದಿದ ಅತ್ಯಂತ ಕಿರಿಯ ಕ್ರಿಕೆಟಿಗ!

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

ಇಂಟರೆಸ್ಟಿಂಗ್‌ ಸಂಗತಿಯೆಂದರೆ ಜಾಗತಿಕ ತಾರೆಗಳಾದ ರಾಫೆಲ್ ನಡಾಲ್, ರೋಜರ್ ಫೆಡರರ್, ಮ್ಯಾಕ್ಸ್ ವರ್ಸ್ಟಾಪ್ಪೆನ್ ಮತ್ತು ಎರ್ಲಿಂಗ್ ಹಾಲೆಂಡ್‌ಗಿಂತಲೂ ಹಾರ್ದಿಕ್ ಪಾಂಡ್ಯ ಹೆಚ್ಚಿನ ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಗಳಿಸಿದ್ದಾರೆ.

 • Trending Desk
 • 5-MIN READ
 • Last Updated :
 • Karnataka, India
 • Share this:

  ಭಾರತದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅತ್ಯಂತ ರೋಮಾಂಚಕಾರಿ ಆಟಗಾರಲ್ಲಿ ಒಬ್ಬರಾಗಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಹೌದು, ವಿಶ್ವದ ಪ್ರಸಿದ್ಧ ಆಟಗಾರರನ್ನು ಹಿಂದಿಕ್ಕಿ ಭಾರತದ ಕ್ರಿಕೆಟ್‌ ಆಟಗಾರ ಹಾರ್ದಿಕ್ ಪಾಂಡ್ಯ 25 ಮಿಲಿಯನ್ ಅಥವಾ  2.5 ಕೋಟಿ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ ಹೊಂದಿದ ವಿಶ್ವದ ಅತ್ಯಂತ ಕಿರಿಯ ಕ್ರಿಕೆಟಿಗ (Hardik Pandya) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


  ಇಂಟರೆಸ್ಟಿಂಗ್‌ ಸಂಗತಿಯೆಂದರೆ ಜಾಗತಿಕ ತಾರೆಗಳಾದ ರಾಫೆಲ್ ನಡಾಲ್, ರೋಜರ್ ಫೆಡರರ್, ಮ್ಯಾಕ್ಸ್ ವರ್ಸ್ಟಾಪ್ಪೆನ್ ಮತ್ತು ಎರ್ಲಿಂಗ್ ಹಾಲೆಂಡ್‌ಗಿಂತಲೂ ಹಾರ್ದಿಕ್ ಪಾಂಡ್ಯ ಹೆಚ್ಚಿನ ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಗಳಿಸಿದ್ದಾರೆ. ಇದು ವಿಶ್ವದಾದ್ಯಂತ ಕ್ರಿಕೆಟ್‌ ಅಭಿಮಾನಿಗಳು ಅವರ ಮೇಲೆ ತೋರಿಸಿರುವ ಪ್ರೀತಿಗೆ ಸಾಕ್ಷಿಯಾಗಿದೆ.


  ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಪಾಂಡ್ಯ
  25 ಮಿಲಿಯನ್‌ ಫಾಲೋವರ್ಸ್‌ಗಳಾದ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಹಾರ್ದಿಕ್‌ ಅವರು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನನ್ನ ಮೇಲಿನ ಪ್ರೀತಿಗಾಗಿ ನನ್ನ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಹಾರ್ದಿಕ್‌ ಹೇಳಿದ್ದಾರೆ.


  "ನನ್ನ ಪ್ರತಿಯೊಬ್ಬ ಅಭಿಮಾನಿಯೂ ನನಗೆ ವಿಶೇಷ. ಅವರು ನನಗೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿನ ಫಾಲೋವರ್ಸ್‌ಗೆ ಕೃತಜ್ಞತೆ ಅರ್ಪಿಸಿದ್ದಾರೆ.
  ಇನ್ನು ಸಾಮಾಜಿಕ ಮಾಧ್ಯಮದಿಂದ ಅಭಿಮಾನಿಗಳು ತಮ್ಮಿಷ್ಟದ ಸೆಲೆಬ್ರಿಟಿಗಳ ಜೀವನದ ಬಗ್ಗೆ ತಿಳಿದುಕೊಳ್ಳಬಹುದು. ಇದರಿಂದಾಗಿಯೇ ಹಾರ್ದಿಕ್‌ ಪಾಂಡ್ಯ ಅವರ ಬಗ್ಗೆ, ಅವರ ಜೀವನದ ವಿಶೇಷ ದಿನಗಳ ಬಗ್ಗೆ ಮೈದಾನದ ಒಳಗೆ ಮತ್ತು ಹೊರಗೆ ತಿಳಿದುಕೊಳ್ಳಲು ಅಭಿಮಾನಿಗಳಿಗೆ ಸಾಧ್ಯವಾಗಿದೆ. ಇದು ಅಭಿಮಾನಿಗಳೊಂದಿಗೆ ಅವರ ಭಾವನಾತ್ಮಕ ಸಂಪರ್ಕವನ್ನು ಬಲಪಡಿಸಿದೆ ಅಂದರೆ ತಪ್ಪಾಗೋದಿಲ್ಲ.


  ಹಾರ್ದಿಕ್‌ ಪಾಂಡ್ಯ ಪೋರ್ಟ್‌ಫೋಲಿಯೋ
  ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಯಸ್ಸು ಕೇವಲ 29 ಆದರೂ ಅವರು ಭಾರತೀಯ ತಂಡದ ಹಿರಿಯ ಸದಸ್ಯ ಮತ್ತು ಅಂತರರಾಷ್ಟ್ರೀಯ ಮತ್ತು ಐಪಿಎಲ್‌ನಲ್ಲಿ ಸಾಬೀತಾದ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಅವರು ಯುವ ನಾಯಕ ಮಾತ್ರವಲ್ಲದೇ ಮೈದಾನದಲ್ಲಿ ತಮ್ಮ ನಿಪುಣತೆ, ಅನುಭವ ಹಾಗೂ ಬುದ್ಧಿವಂತಿಕೆಯನ್ನು ಅನೇಕ ಬಾರಿ ಸಾಬೀತುಪಡಿಸಿದ್ದಾರೆ.


  ಹಾರ್ದಿಕ್ ಅವರ ಪೋರ್ಟ್‌ಫೋಲಿಯೊವು ಕ್ರೀಡಾ ಸಲಕರಣೆಗಳು, ಆಡಿಯೋ, ಡೆನಿಮ್‌ಗಳು ಮತ್ತು ಶರ್ಟ್‌ಗಳು, ಬ್ಯಾಟರಿಗಳು ಮತ್ತು ಲೂಬ್ರಿಕಂಟ್‌ಗಳು, ಎನರ್ಜಿ ಡ್ರಿಂಕ್, ಬಿಸ್ಕಟ್‌ಗಳು, ಕ್ಯಾಶುಯಲ್ ಉಡುಪುಗಳು, ಶೂಗಳು, ಪಾನೀಯ, ಸುಗಂಧ ದ್ರವ್ಯ ಮತ್ತು ಮಾಧ್ಯಮ ಮತ್ತು ಪ್ರಸಾರ ಸೇರಿದಂತೆ ಕ್ಷೇತ್ರಗಳಾದ್ಯಂತ ಸುಮಾರು 20 ಬ್ರಾಂಡ್‌ಗಳನ್ನು ಒಳಗೊಂಡಿದೆ.


  ಹಾರ್ದಿಕ್‌ ನಡೆದು ಬಂದ ಹಾದಿ ಹೀಗಿದೆ
  ಅಂದಹಾಗೆ 1993 ರಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಜನಿಸಿದ ಹಾರ್ದಿಕ್‌ ಪಾಂಡ್ಯ ಅವರು 2016 ರಲ್ಲಿ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯದಿಂದ ಕ್ರಿಕೆಟ್‌ ಲೋಕಕ್ಕೆ ಪದಾರ್ಪಣೆ ಮಾಡಿದರು. ಅವರು ಭಾರತೀಯ ತಂಡದ ವೈಟ್-ಬಾಲ್ ಸೆಟಪ್‌ನಲ್ಲಿ ಮತ್ತು ಐಪಿಎಲ್‌ನಲ್ಲಿ ಹಿರಿಯ ಆಟಗಾರರಾಗಿದ್ದಾರೆ.


  ಇದನ್ನೂ ಓದಿ: Team India: 28ರ ಯುವತಿ ಜೊತೆ 66 ವರ್ಷದ ಭಾರತೀಯ ಕ್ರಿಕೆಟಿಗನ ಮದುವೆ! ಮೊದಲ ಹೆಂಡತಿಯ ಗ್ರೀನ್‌ ಸಿಗ್ನಲ್, ಕಿಸ್ಸಿಂಗ್ ಫೋಟೋ ವೈರಲ್!


  ಹಾರ್ದಿಕ್ 2018 ರಿಂದ ಟೆಸ್ಟ್‌ಗಳಲ್ಲಿ ಕಾಣಿಸಿಕೊಂಡಿಲ್ಲ. ಪ್ರಸ್ತುತ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ವಿರುದ್ಧ ಆಡುತ್ತಿರುವ ಭಾರತೀಯ ತಂಡದ ಭಾಗವಾಗಿಲ್ಲ. ಇನ್ನು, ಬಲಗೈ ಆಟಗಾರ ಹಾರ್ದಿಕ್‌ T20I ಸರಣಿಯಲ್ಲಿ ಭಾರತದ ನಾಯಕತ್ವವನ್ನು ವಹಿಸಿದ್ದರು. ತೀವ್ರ ಬೆನ್ನುನೋವಿನಿಂದ ಚೇತರಿಸಿಕೊಂಡ ನಂತರ, ಜೂನ್ 2022 ರಿಂದ ಭಾರತದ ಸೀಮಿತ-ಓವರ್‌ಗಳ ಸೆಟ್‌ಅಪ್‌ನಲ್ಲಿ ಪಾಂಡ್ಯ ಪ್ರಮುಖರಾಗಿದ್ದಾರೆ.


  ಇದನ್ನೂ ಓದಿ: MS Dhoni: ಧೋನಿ Instagram ನಲ್ಲಿ ಯಾರನ್ನೆಲ್ಲಾ ಫಾಲೋ ಮಾಡ್ತಿದ್ದಾರೆ? ಈ 2 ಹೆಸರುಗಳು ನಿಮ್ಮ ಊಹೆಗೂ ಸಿಗಲ್ಲ


  ಮಾರ್ಚ್ 17 ರಂದು ಮುಂಬೈನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ODI ಸರಣಿಯಲ್ಲಿ ಪಾಂಡ್ಯ ಅವರು ಕಾಣಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಶರ್ಮಾ ಅವರಿಗೆ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published: