news18 Updated:December 17, 2020, 11:09 AM IST
ನತಾಶಾ ಮತ್ತು ಹಾರ್ದಿಕ್ ಪಾಂಡ್ಯ
- News18
- Last Updated:
December 17, 2020, 11:09 AM IST
ನಾಲ್ಕೈದು ತಿಂಗಳಿಂದ ನಿರಂತರ ಕ್ರಿಕೆಟ್ ಆಡಿ ಬಳಲಿ ಬೆಂಡಾಗಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ತಮ್ಮ ಕುಟುಂಬದ ಜೊತೆ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ. ಸಂಗಾತಿ ನಟಾಶಾ ಸ್ಟಾಂಕೋವಿಚ್ ಹಾಗೂ ಮಗ ಅಗಸ್ತ್ಯಾ ಅವರೊಂದಿಗೆ ಖುಷಿಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಮಗ ಅಗಸ್ತ್ಯನಿಗೆ ಹಾರ್ದಿಕ್ ಊಟ ಉಣಿಸುತ್ತಿರುವ ಫೋಟೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ನತಾಶಾ ಸ್ಟಾನ್ಕೋವಿಚ್ ಅವರೊಂದಿಗೆ ಹಾರ್ದಿಕ್ ಡಿನ್ನರ್ ಡೇಟಿಂಗ್ ಮಾಡಿರುವ ಫೋಟೋಗಳು ಅಭಿಮಾನಿಗಳ ಮನಸೆಳೆದಿವೆ. ರೆಸ್ಟೋರೆಂಟ್ವೊಂದರಲ್ಲಿ ಇಬ್ಬರೂ ಏಡಿಯ ತಿಂಡಿಗಳನ್ನ ಸವಿದಿದ್ದಂತಿದೆ. ಡಿನ್ನರ್ ಮಾಡುತ್ತಿರುವ ಫೋಟೋಗಳನ್ನ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದೇ ವೇಳೆ ಹಾರ್ದಿಕ್ ಪಾಂಡ್ಯ ಅವರು ದೀರ್ಘಕಾಲದಿಂದ ಬ್ಯಾಕ್ ಇಂಜುರಿ ಸಮಸ್ಯೆಯಿಂದ ಬಳಲುತ್ತಿದ್ಧಾರೆ. ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಪಂದ್ಯವು ಕಳೆದ ಒಂದು ವರ್ಷದ ಅವಧಿಯಲ್ಲಿ ಅವರು ಆಡಿದ ಮೊದಲ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ನಿರಂತರವಾಗಿ ಆಡಿದ ಅವರು ತಮ್ಮ ತಂಡ ಪ್ರಶಸ್ತಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಒಳ್ಳೆಯ ಫಾರ್ಮ್ ಕಂಡುಕೊಂಡಿರುವ ಪಾಂಡ್ಯ ಸದ್ಯ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿಲ್ಲ. ಮಾರ್ಚ್ ತಿಂಗಳವರೆಗೂ ಅವರು ಯಾವುದೇ ಪಂದ್ಯವಾಡುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ, ಇನ್ನೂ ಮೂರು ತಿಂಗಳು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಾ ತಮ್ಮ ಗಾಯದ ಸಮಸ್ಯೆಯನ್ನೂ ನಿವಾರಿಸಿಕೊಳ್ಳಲು ಪಾಂಡ್ಯಗೆ ಒಳ್ಳೆಯ ಅವಕಾಶ ಸಿಕ್ಕಿದೆ.
ಇದನ್ನೂ ಓದಿ: Shane Warne: ಆತ ರಾಕ್ಸ್ಟಾರ್, ಅವನು ಕೂಡ ಟೀಮ್ ಇಂಡಿಯಾದಲ್ಲಿ ಇರಬೇಕಿತ್ತು..!
ಸರ್ಬಿಯಾ ಮೂಲದ ಡ್ಯಾನ್ಸರ್ ಮತ್ತು ನರ್ತಕಿ ನಟಾಶಾ ಸ್ಟಾನ್ಕೋವಿಚ್ ಅವರೊಂದಿಗೆ ಹಾರ್ದಿಕ್ ಪಾಂಡ್ಯ ಇದೇ ಜನವರಿ 1ರಂದು ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಜುಲೈ 30ರಂದು ಗಂಡು ಮಗು ಆಗಿದೆ.
Published by:
Vijayasarthy SN
First published:
December 17, 2020, 11:08 AM IST