IND vs SA: ದ. ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ; ಕಮ್​ಬ್ಯಾಕ್ ಮಾಡಿದ 3 ಸ್ಟಾರ್ ಆಟಗಾರರು!

India squad for South Africa ODI series: ಮಾರ್ಚ್ 12 ರಂದು ಧರ್ಮಶಾಲದ ಹಿಮಾಚಲ ಪ್ರದೇಶ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದರೆ, ಮಾರ್ಚ್ 15 ರಂದು ಲಕ್ನೋದಲ್ಲಿ ಎರಡನೇ ಪಂದ್ಯ ಆಯೋಜಿಸಲಾಗಿದೆ.

ಹೀಗಾಗಿ ಮೊದಲ ಏಕದಿನಕ್ಕೆ ಟೀಂ ಇಂಡಿಯಾ ಪರ ಯಾರು ಕಣಕ್ಕಿಳಿಯಬಹುದು ಎಂದು ಕುತೂಹಲ. ಸಂಭಾವ್ಯಪಟ್ಟಿ ನೋಡುವುದಾದರೆ…

ಹೀಗಾಗಿ ಮೊದಲ ಏಕದಿನಕ್ಕೆ ಟೀಂ ಇಂಡಿಯಾ ಪರ ಯಾರು ಕಣಕ್ಕಿಳಿಯಬಹುದು ಎಂದು ಕುತೂಹಲ. ಸಂಭಾವ್ಯಪಟ್ಟಿ ನೋಡುವುದಾದರೆ…

  • Share this:
ಬೆಂಗಳೂರು (ಮಾ. 08): ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಪ್ರಕಟವಾಗಿದೆ. ಸುನೀಲ್ ಜೋಶಿ ನೇತೃತ್ವದ ನೂತನ ಬಿಸಿಸಿಐ ಆಯ್ಕೆ ಸಮಿತಿ 15 ಮಂದಿ ಸದಸ್ಯರ ಟೀಂ ಇಂಡಿಯಾವನ್ನು ಹೆಸರಿಸಿದೆ.

Rohit Sharma rested, Hardik Pandya and Shikhar Dhawan return as India announce squad for South Africa ODI series
ಹಾರ್ದಿಕ್ ಪಾಂಡ್ಯ, ಶಿಖರ್ ಧವನ್ ಹಾಗೂ ಭುವನೇಶ್ವರ್ ಕುಮಾರ್.


ಇಂಜಿರಿಯಿಂದಾಗಿ ಭಾರತ ತಂಡದಿಂದ ಹೊರಗುಳಿದಿದ್ದ ಆರಂಭಿಕ ಆಟಗಾರ ಶಿಖರ್ ಧವನ್, ವೇಗಿ ಭುವನೇಶ್ವರ್ ಕುಮಾರ್ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಮ್​ಬ್ಯಾಕ್ ಮಾಡಿದ್ದಾರೆ. ಉಪ ನಾಯಕ ರೋಹಿತ್ ಶರ್ಮಾ ಇಂಜುರಿಯಿಂದ ಗುಣಮುಖರಾಗದ ಕಾರಣ ಇವರಿಗೆ ವಿಶ್ರಾಂತಿ ನೀಡಲಾಗಿದೆ.

Women’s T20 World Cup Final: ಚೊಚ್ಚಲ ವಿಶ್ವಕಪ್ ಗೆಲ್ಲುವ ಭಾರತ ಮಹಿಳೆಯರ ಕನಸು ಭಗ್ನ; 5ನೇ ಬಾರಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾ

ಇನ್ನೂ ನಾಯಕ ವಿರಾಟ್ ಕೊಹ್ಲಿ ಕೂಡ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ಕೊಹ್ಲಿಯೇ ತಂಡವನ್ನು ಕ್ಯಾಪ್ಟನ್ ಮುನ್ನಡೆಸುತ್ತಿದ್ದಾರೆ. ಜೊತೆಗೆ ಪೃಥ್ವಿ ಶಾ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರಿಸರ್ವ್ ಓಪನರ್​ ಆಗಿ ಶುಭ್ಮನ್ ಗಿಲ್ ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

 ಉಳಿದಂತೆ ಕೆ. ಎಲ್ ರಾಹುಲ್, ಮನೀಶ್ ಪಾಂಡೆ, ರಿಷಭ್ ಪಂತ್, ಯಜುವೇಂದ್ರ ಚಹಾಲ್ ತಂಡದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ತವರಿನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ.

ಸಚಿನ್-ಸೆಹ್ವಾಗ್ ಸ್ಫೋಟಕ ಬ್ಯಾಟಿಂಗ್ ನೋಡಲು ವಾಂಖೆಡೆಯಲ್ಲಿ ಸೇರಿದ್ದ ಪ್ರೇಕ್ಷಕರೆಷ್ಟು ಗೊತ್ತಾ?

ಮಾರ್ಚ್ 12 ರಂದು ಧರ್ಮಶಾಲದ ಹಿಮಾಚಲ ಪ್ರದೇಶ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದರೆ, ಮಾರ್ಚ್ 15 ರಂದು ಲಕ್ನೋದಲ್ಲಿ ಎರಡನೇ ಪಂದ್ಯ ಆಯೋಜಿಸಲಾಗಿದೆ. ಅಂತಿಮ ಮೂರನೇ ಏಕದಿನ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಾರ್ಚ್ 18 ರಂದು ನಡೆಯಲಿದೆ.

15 ಸದಸ್ಯರ ಭಾರತ ತಂಡ: ಶಿಖರ್ ಧವನ್, ಪೃಥ್ವಿ ಶಾ, ವಿರಾಟ್ ಕೊಹ್ಲಿ (ನಾಯಕ), ಕೆ ಎಲ್ ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್- ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಾಲ್, ಜಸ್​ಪ್ರೀತ್ ಬುಮ್ರಾ, ನವ್​ದೀಪ್ ಸೈನಿ, ಕುಲ್ದೀಪ್ ಯಾದವ್, ಶುಭ್ಮನ್ ಗಿಲ್.

First published: