Harbhajan Singh- ಹರ್ಭಜನ್ ಛೇಡಿಸಿದ ಈ ಪಾಕಿಸ್ತಾನೀ ಪತ್ರಕರ್ತೆಗೆ ಸಿಕ್ತು ಸರಿಯಾದ ಉತ್ತರ

Pakistani lady vs Harbhajan Singh- ಮತ್ತೆ 4 ಸಿಕ್ಸರ್, ಹರ್ಭಜನ್ ನಿಂಗೆ ವಾಕ್ ಓವರ್ ಬೇಕಾ? ಎಂದು ಕೆಣಕಿದ ಪಾಕಿಸ್ತಾನೀ ಪತ್ರಕರ್ತೆಗೆ ಭಾರತದ ಭಜ್ಜಿ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ. ಆ ಜಟಾಪಟಿ ಏನು ಇಲ್ಲಿದೆ ನೋಡಿ…

ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್

  • Share this:
    ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಐತಿಹಾಸಿಕ ಗೆಲುವು ಪಡೆದ ಬಳಿಕ ಇಡೀ ಪಾಕಿಸ್ತಾನೀ ಕ್ರಿಕೆಟ್ ಪ್ರೇಮಿಗಳು ಟೀಮ್ ಇಂಡಿಯಾವನ್ನು ಛೇಡಿಸುವುದರಲ್ಲೇ ಮಗ್ನರಾಗಿದ್ಧಾರೆ. ಹರ್ಭಜನ್ ಸಿಂಗ್ ಹಾಗೂ ಪಾಕಿಸ್ತಾನೀಯರ ಮಧ್ಯೆ ಶುರುವಾಗಿರುವ ವಾಗ್ಯುದ್ಧ ಮುಗಿಯುವಂತೆಯೇ ತೋರುತ್ತಿಲ್ಲ. ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಆಮಿರ್ ಹರ್ಭಜನ್ ಮೇಲೆ ಎರಗಿ ಹೋಗಿದ್ದರು. ಅದರ ಬೆನ್ನಲ್ಲೇ ಪಾಕಿಸ್ತಾನೀ ಟ್ರೋಲ್​ಗಳು ಭಜ್ಜಿ ಮೇಲೆ ನಿರಂತರ ದಾಳಿ ಮಾಡುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಪಾಕಿಸ್ತಾನದ ಪತ್ರಕರ್ತೆ ಸುಮೇರಾ ಖಾನ್ ಎಂಬಾಕೆ ಭಜ್ಜಿಯನ್ನ ಛೇಡಿಸಿದ್ದಾಳೆ. ಇದಕ್ಕೆ ಹರ್ಭಜನ್ ಕೂಡ ಸರಿಯಾಗಿಯೇ ತಿರುಗೇಟು ಕೊಟ್ಟು ಬಾಯಿ ಮುಚ್ಚಿಸಿದ್ದಾರೆ.

    ನಿನ್ನೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಅಸಿಫ್ ಅಲಿ ಒಂದೇ ಓವರ್​ನಲ್ಲಿ 4 ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಆ 4 ಸಿಕ್ಸರ್ ಅನ್ನು ನೆನಪಿಸಿ ಹರ್ಭಜನ್ ಸಿಂಗ್ ಅವರನ್ನ ಸುಮೇರಾ ಖಾನ್ ಲೇವಡಿ ಮಾಡಿ ಪೋಸ್ಟ್ ಹಾಕಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಹರ್ಭಜನ್ ಸಿಂಗ್, “Keep Rolling your eyes, maybe you’ll find a brain back there” ಎಂದು ಹಾಕಿದ್ದರು. ಅಂದರೆ, ವಾಸ್ತವ ಸ್ಥಿತಿಗೆ ಬರುವಂತೆ ಆ ಪತ್ರಕರ್ತೆಗೆ ಭಜ್ಜಿ ತಿಳಿಸಿದ್ದರು. “ಇಷ್ಟು ಇಂಗ್ಲೀಷ್ ನಿಮಗೆ ಬರುತ್ತೆ ಅಂತ ಭಾವಿಸಿದ್ದೇನೆ. ಅರ್ಥ ಆಗಲಿಲ್ಲವೆಂದರೆ ಯಾರಾದರೂ ಆಕೆಗೆ ಉರ್ದುವಿನಲ್ಲೇ ಹಿಂದಿಯಲ್ಲೋ ಅರ್ಥ ವಿವರಿಸಿ” ಎಂದೂ ಹರ್ಭಜನ್ ಸಿಂಗ್ ಆ ಪಾಕ್ ಮಹಿಳೆಗೆ ಛೇಡಿಸಿದ್ದರು.


    ಈ ಸಂವಾದಕ್ಕೆ ಕೆಲ ಹೊತ್ತಿನ ಮುಂಚೆಯಷ್ಟೇ ಅವರಿಬ್ಬರ ಮಧ್ಯೆ ಮತ್ತೊಂದು ವಾಗ್ಯುದ್ಧ ಆಗಿತ್ತು. ಹರ್ಭಜನ್ ಸಿಂಗ್ ಈ ಹಿಂದೆ ಮೊಹಮ್ಮದ್ ಆಮೀರ್ ಅವರಿಗೆ ತಿರುಗೇಟು ಕೊಡಲು ತಾನು ಆತನ ಓವರ್​ನಲ್ಲಿ ಸಿಕ್ಸರ್ ಭಾರಿಸಿದ್ದ ವಿಡಿಯೋ ಕ್ಲಿಪ್ ಹಾಕಿದ್ದರು. ಈ ಕ್ಲಿಪ್ ಇಟ್ಟುಕೊಂಡು ಸುಮೇರಾ ಖಾನ್ ಹರ್ಭಜನ್ ಸಿಂಗ್ ಅವರನ್ನ ಟೀಕಿಸಿದ್ದರು.

    ಇದನ್ನೂ ಓದಿ: MS Dhoni- ಎಂಎಸ್ ಧೋನಿ ಕ್ಯಾಪ್ಟನ್ಸಿ ಬಿಟ್ಟಿದ್ದು ಯಾಕೆ? ನಿಜವಾದ ಕಾರಣ ಇದು

    “ನಿಮ್ಮ ಕೆಟ್ಟ ಕಮೆಂಟ್​ನಿಂದ ಇಡೀ ಸಿಖ್ ಸಮುದಾಯವೇ ನಾಚಿಕೆ ಪಡುವಂತಾಗಿದೆ” ಎಂದು ಲೇವಡಿ ಮಾಡಿದ್ದರು.

    ಇದಕ್ಕೆ ಗಂಭೀರವಾಗಿ ಪ್ರತಿಕ್ರಿಯಿಸಿದ್ದ ಹರ್ಭಜನ್ ಸಿಂಗ್, ಧರ್ಮವನ್ನು ಮಧ್ಯದಲ್ಲಿ ತಂದು ನಿಮ್ಮ ಡರ್ಟಿ ಗೇಮ್ ಆಟ ನಿಲ್ಲಿಸಿ. ನೀವು ಅಲ್ಲಿ ಖುಷಿಯಾಗಿರಿ. ನಾವು ಇಲ್ಲಿಯೇ ಖುಷಿಯಾಗಿದ್ದೇವೆ. ಮತ್ತೆ ಮಾತು ಮುಂದುವರಿಸುವುದು ಬೇಡ ಎಂದು ಫುಲ್ ಸ್ಟಾಪ್ ಹಾಕಿದ್ದರು.


    ಆದರೂ ಸುಮೇರಾ ಖಾನ್ ತಮ್ಮ ಚೇಷ್ಟೆ ನಿಲ್ಲಿಸದೇ ಅಸಿಫ್ ಆಲಿಯ ನಾಲ್ಕು ಸಿಕ್ಸರ್​ಗಳ ಓವರನ್ನ ಹರ್ಭಜನ್ ಸಿಂಗ್​ಗೆ ನೆನಪಿಸುವ ಕೆಲಸ ಮಾಡಿದ್ದಾರೆ.

    ಇದನ್ನೂ ಓದಿ: Afghani English- ಐದು ನಿಮಿಷದಲ್ಲಿ ಇಂಗ್ಲೀಷ್ ಖತಂ- ಅಫ್ಘಾನಿಸ್ತಾನ್ ಕ್ಯಾಪ್ಟನ್ ವಿಡಿಯೋ ವೈರಲ್

    ಅಷ್ಟಕ್ಕೂ ಈ ನಾಲ್ಕು ಸಿಕ್ಸರ್ ಪ್ರಸಂಗ ಹರ್ಭಜನ್ ಸಿಂಗ್ ಮತ್ತು ಮೊಹಮ್ಮದ್ ಆಮಿರ್ ವಾಗ್ಯುದ್ಧದ ವೇಳೆ ಕಂಡು ಬಂದಿತ್ತು. ಹರ್ಭಜನ್ ಸಿಂಗ್ ಅವರನ್ನ ಮೊಹಮ್ಮದ್ ಆಮಿರ್ ಕೆಣಕಿದಾಗ ಹರ್ಭಜನ್ ಅವರು ತಾನು ಆಮೀರ್ ಬೌಲಿಂಗ್​ನಲ್ಲಿ ಸಿಕ್ಸರ್ ಹೊಡೆದ ಕ್ಲಿಪ್ ಹಾಕಿದ್ದರು. ಅದಾದ ಬಳಿಕ ಪಾಕಿಸ್ತಾನದ ಬ್ಯಾಟುಗಾರರೊಬ್ಬರು ಹರ್ಭಜನ್ ಬೌಲಿಂಗ್​ನಲ್ಲಿ ಸತತ ನಾಲ್ಕು ಸಿಕ್ಸರ್ ಹೊಡೆದ ಕ್ಲಿಪ್ ಹಾಕಿ ಟ್ರೋಲ್ ಮಾಡಿದ್ದರು. ಇದು ಬಹಳ ವೈರಲ್ ಆಗಿತ್ತು. ಅದನ್ನೇ ಇಟ್ಟುಕೊಂಡು ಹರ್ಭಜನ್ ಸಿಂಗ್ ಅವರನ್ನ ಸುಮೇರಾ ಖಾನ್ ಛೇಡಿಸುವ ಕೆಲಸ ಮಾಡಿದ್ದಾರೆ.
    Published by:Vijayasarthy SN
    First published: