ಅಂತರಾಷ್ಟ್ರೀಯ ಕ್ರಿಕೆಟ್​ಗೆ ಟೀಂ ಇಂಡಿಯಾದ ಸ್ಟಾರ್ ಆಟಗಾರ ನಿವೃತ್ತಿ?

ಭಜ್ಜಿ ಇಂಗ್ಲೆಂಡ್​ನಲ್ಲಿ ನಡೆಯಲಿರುವ 100 ಎಸೆತಗಳ ಕ್ರಿಕೆಟ್ ಟೂರ್ನಮೆಂಟ್​ನಲ್ಲಿ ಭಾಗವಹಿಸುವ ಇಂಗಿತ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಸದ್ಯದಲ್ಲೆ ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ಟರ್ಮಿನೇಟರ್ ಹಿಂದೆ ಸರಿಯಲಿದ್ದಾರೆ.

Vinay Bhat | news18-kannada
Updated:October 4, 2019, 12:10 PM IST
ಅಂತರಾಷ್ಟ್ರೀಯ ಕ್ರಿಕೆಟ್​ಗೆ ಟೀಂ ಇಂಡಿಯಾದ ಸ್ಟಾರ್ ಆಟಗಾರ ನಿವೃತ್ತಿ?
ಹರ್ಭಜನ್ ಸಿಂಗ್
  • Share this:
ಬೆಂಗಳೂರು (ಅ. 04): ಟೀಂ ಇಂಡಿಯಾದಿಂದ ಒಮ್ಮೆ ಹೊರಬಿದ್ದ ಬಳಿಕ ಮತ್ತೆ ತಂಡದಲ್ಲಿ ಸ್ಥಾನ ಪಡೆಯವುದು ದೂರದ ಮಾತು. ಹೀಗೆ ತಂಡದಲ್ಲಿ ಪುನಃ ಸ್ಥಾನ ಪಡೆಯಲು ವಿಫಲವಾಗಿ ನಿವೃತ್ತಿ ನೀಡಿದ ಆಟಗಾರರು ಅನೇಕರಿದ್ದಾರೆ. ಇತ್ತೀಚೆಗಷ್ಟೆ ಯುವರಾಜ್ ಸಿಂಗ್ ಕೂಡ ಇದೇ ಹಾದಿಯಲ್ಲಿ ನಡೆದರು. ಈ ಸಾಲಿಗೆ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ ಸೇರುವ ಲಕ್ಷಣ ಗೋಚರಿಸುತ್ತಿದೆ.

ಒಂದು ಕಾಲದಲ್ಲಿ ಟಿಂ ಇಂಡಿಯಾದ ಖಾಯಂ ಸದಸ್ಯನಾಗಿದ್ದ ಹರ್ಭಜನ್ ಸಿಂಗ್ ಈಗ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಷ್ಟೆ ಕಾಣಿಸಿಕೊಳ್ಳುತ್ತಿದ್ದಾರೆ. 2016 ರಲ್ಲಿ ಟೀಂ ಇಂಡಿಯಾ ಪರ ಇವರು ಕೊನೆಯ ಟಿ-20 ಪಂದ್ಯವನ್ನಾಡಿದ್ದರು. ಏಕದಿನ ಹಾಗೂ ಟೆಸ್ಟ್​ ಕೊನೆಯದಾಗಿ ಆಡಿದ್ದು 2015 ರಲ್ಲಿ. ಆ ಬಳಿಕ ಭಜ್ಜಿಗೆ ಅವಕಾಶ ಸಿಗಲಿಲ್ಲ.

Harbhajan Singh risks international retirement by entering The Hundred player draft
ಹರ್ಭಜನ್ ಸಿಂಗ್


39 ವರ್ಷ ಪ್ರಾಯದ ಹರ್ಭಜನ್ ಇನ್ನು ಟೀಂ ಇಂಡಿಯಾದಲ್ಲಿ ಆಡುವುದು ಅನುಮಾನ. ಹೀಗಾಗಿ ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ನೀಡುವತ್ತ ಗಮನ ಹರಿಸಿದ್ದಾರೆ ಎನ್ನಲಾಗಿದೆ.

ಅಲ್ಲದೆ ಇಂಗ್ಲೆಂಡ್​ನಲ್ಲಿ 2020 ರಲ್ಲಿ ನಡೆಯಲಿರುವ 'ದಿ ಹಂಡ್ರೆಡ್' ಕ್ರಿಕೆಟ್ ಟೂರ್ನಿಯಲ್ಲಿ ಹರ್ಭಜನ್ ಹೆಸರು ನಮೋದಿಸಲಾಗಿದೆ. ಏಕೈಕ ಭಾರತೀಯ ಆಟಗಾರ ಹೆಸರು ಮಾತ್ರ ಈ ಲೀಗ್​ಗೆ ಆಯ್ಕೆಯಾಗಿದ್ದು, ಹರ್ಭಜನ್​ಗೆ 1 ಲಕ್ಷ ಮೂಲಬೆಲೆ ನಿಗದಿ ಪಡಿಸಲಾಗಿದೆ.

ಬಿಸಿಸಿಐ ನಿಯಮದ ಪ್ರಕಾರ ಅಂತರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ನೀಡುವ ಮುನ್ನ ಭಾರತದ ಯಾವುದೇ ಕ್ರಿಕೆಟ್ ಆಟಗಾರರು ಇತರೆ ವಿದೇಶಿ ಲೀಗ್​ನಲ್ಲಿ ಪಾಲ್ಗೊಳ್ಳುವಂತಿಲ್ಲ. ಹೀಗಾಗಿ ಇತ್ತೀಚೆಗೆ ಯುವರಾಜ್ ವಿದಾಯ ಹೇಳಿ ಕೆನಡಾ ಗ್ಲೋಬಲ್ ಟಿ-20 ಲೀಗ್​ನಲ್ಲಿ ಆಡಿದ್ದರು.

ಸದ್ಯ ಭಜ್ಜಿ ಕೂಡ ಇಂಗ್ಲೆಂಡ್​ನಲ್ಲಿ ನಡೆಯಲಿರುವ 100 ಎಸೆತಗಳ ಕ್ರಿಕೆಟ್ ಟೂರ್ನಮೆಂಟ್​ನಲ್ಲಿ ಭಾಗವಹಿಸುವ ಇಂಗಿತ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಸದ್ಯದಲ್ಲೆ ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ಟರ್ಮಿನೇಟರ್ ಹಿಂದೆ ಸರಿಯಲಿದ್ದಾರೆ.ಏನಿದು 'ದಿ ಹಂಡ್ರೆಡ್?':

ಈ ಟೂರ್ನಮೆಂಟ್​ನಲ್ಲಿ ಇಂಗ್ಲೆಂಡ್​ನ ಎಂಟು ನಗರ ಪ್ರದೇಶದ ತಂಡಗಳು ಭಾಗವಹಿಸಲಿವೆ. ಪ್ರತಿ ಇನಿಂಗ್ಸ್‌ಗೆ 100 ಎಸೆತಗಳು ಇರುತ್ತವೆ. ಪ್ರತಿ 10 ಎಸೆತಗಳಿಗೆ ಎಂಡ್ ಅನ್ನು ಬದಲಿಸಲಾಗುತ್ತದೆ.

ಬೌಲರ್‌ಗಳು 5 ಅಥವಾ 10 ಸತತ ಎಸೆತಗಳನ್ನು ಎಸೆಯಬಹುದು. ಪಂದ್ಯದಲ್ಲಿ ಬೌಲರ್‌ವೊಬ್ಬ ಗರಿಷ್ಠ 20 ಎಸೆತಗಳನ್ನು ಎಸೆಯಲು ಅವಕಾಶವಿದೆ. ಪ್ರತಿ ತಂಡಕ್ಕೆ 25 ಎಸೆತಗಳ ಪವರ್‌ಪ್ಲೇ ಕೂಡ ಇದ್ದು ಎರಡೂವರೆ ನಿಮಿಷಗಳ ಟೈಮ್ ಔಟ್ ತೆಗೆದುಕೊಳ್ಳಬಹುದು.

ಈಗಾಗಲೇ ಈ ಟೂರ್ನಮೆಂಟ್​ನಲ್ಲಿ ಭಾಗವಿಸುವುದಾಗಿ ಬೆನ್ ಸ್ಟೋಕ್ಸ್​, ಜೋಫ್ರಾ ಆರ್ಚೆರ್, ಜಾಸ್ ಬಟ್ಲರ್ ಸೇರಿ ಪ್ರಮುಖ ಸ್ಟಾರ್ ಆಟಗಾರರು ಸಹಿ ಮಾಡಿದ್ದಾರೆ. 2020ರ ಜುಲೈನಲ್ಲಿ ದಿ ಹಂಡ್ರೆಡ್ ಟೂರ್ನಿಮೆಂಟ್ ಆರಂಭವಾಗಲಿದೆ.

First published:October 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading