ಮೊಣಕಾಲಲ್ಲಿ ರಕ್ತ ಸುರಿಯುತ್ತಿದ್ದರೂ ಬ್ಯಾಟ್ ಬೀಸಿದ್ದ ವಾಟ್ಸನ್; ಅಸಲಿ ಕಥೆ ಬಿಚ್ಚಿಟ್ಟ ಬಜ್ಜಿ

ವಾಟ್ಸನ್​ ಬ್ಯಾಟ್​ ಬೀಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಕಾಲಿನ ಮೊಣಕಾಲ ಬಳಿ ರಕ್ತ ಬಂದಿದ್ದರಿಂದ ಹಳದಿ ಪ್ಯಾಂಟ್​ ಕೆಂಪಾಗಿದೆ. ಇದನ್ನು ನೋಡಿದ ಅನೇಕರು ವಾಟ್ಸನ್​ ಕ್ರೀಡಾ ಸ್ಫೂರ್ತಿಗೆ ತಲೆ ಬಾಗಿದ್ದಾರೆ.

ವೈರಲ್​ ಆದ ಶೇನ್​ ವಾಟ್ಸನ್​ ಫೋಟೋ

ವೈರಲ್​ ಆದ ಶೇನ್​ ವಾಟ್ಸನ್​ ಫೋಟೋ

  • News18
  • Last Updated :
  • Share this:
ಭಾನುವಾರ ನಡೆದ ಐಪಿಎಲ್​ ಫೈನಲ್​ನಲ್ಲಿ ರೋಹಿತ್​ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​​ ಗೆದ್ದು ಬೀಗಿತ್ತು. ಗೆಲುವಿನ ಸಮೀಪದಲ್ಲಿದ್ದ ಎಂಎಸ್​​ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​​ ಕೊನೆಯ ಓವರ್​ನಲ್ಲಿ ಎಡವಿತ್ತು. ಈ ಪಂದ್ಯದಲ್ಲಿ ಆಟಗಾರ ಶೇನ್​ ವಾಟ್ಸನ್​ ಅಬ್ಬರದ ಆಟವಾಡಿ ಸಿಎಸ್​ಕೆಯನ್ನು ಗೆಲುವಿನ ಸಮೀಪ ಕರೆತಂದಿದ್ದರು. ಆದರೆ, ಕೊನೆಯ್​ ಓವರ್​ನಲ್ಲಿ ರನ್​ಔಟ್​ ಆಗಿದ್ದು, ಸಿಎಸ್​ಕೆ ಸೋಲಿಗೆ ಕಾರಣವಾಗಿತ್ತು. ಅಚ್ಚರಿ ಎಂದರೆ, ಅವರ ಕಾಲಲ್ಲಿ ರಕ್ತ ಸುರಿಯುತ್ತಿದ್ದರೂ ಯಾರಿಗೂ ಹೇಳದೇ ಬ್ಯಾಟ್ ಬೀಸಿದ್ದರಂತೆ ವಾಟ್ಸನ್​. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಾಟ್ಸನ್​ ಬ್ಯಾಟ್​ ಬೀಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಮೊಣಕಾಲ ಬಳಿ ರಕ್ತ ಬಂದಿದ್ದರಿಂದ ಹಳದಿ ಇದ್ದ ಪ್ಯಾಂಟ್​ ಕೆಂಪಾಗಿದೆ. ಇದನ್ನು ನೋಡಿದ ಅನೇಕರು ವಾಟ್ಸನ್​ ಕ್ರೀಡಾ ಸ್ಫೂರ್ತಿಗೆ ತಲೆ ಬಾಗಿದ್ದಾರೆ. ಇನ್ನು ಅನೇಕರು ಇದೊಂದು ನಕಲಿ ಫೋಟೋ ಎಂದು ಜರಿದಿದ್ದರು. ಆದರೆ, ಇದಕ್ಕೆ ಸಿಎಸ್​ಕೆ ಆಟಗಾರ ಹರ್ಭಭಜನ್​ ಸಿಂಗ್​ ಸ್ಪಷ್ಟನೆ ನೀಡಿದ್ದಾರೆ. ನಿಜಕ್ಕೂ ಹೀಗಾಗಿದ್ದು ಹೌದು ಎಂದು ತಮ್ಮ ಇನ್ಸ್​​ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

“ವಾಟ್ಸನ್​ ಮೊಣಕಾಲಿನಲ್ಲಿ ರಕ್ತ ಬರುತ್ತಿರುವುದು ಕಾಣುತ್ತಿದೆಯಾ? ಆಟ ಮುಗಿದ ನಂತರ 6 ಸ್ಟಿಚ್​ಗಳನ್ನು ಹಾಕಲಾಗಿದೆ. ಡೈವ್​ ಮಾಡುವಾಗ ಪೆಟ್ಟಾಗಿದೆ. ಆದರೆ, ಈ ಬಗ್ಗೆ ಯಾರಿಗೂ ಹೇಳದೇ ಅವರು ಆಟವಾಡಿದ್ದಾರೆ. ಪಂದ್ಯವನ್ನು ಗೆಲುವಿನ ಸಮೀಪ ಕರೆ ತಂದಿದ್ದರು,” ಎಂದು ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಬಜ್ಜಿ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಐಪಿಎಲ್ 12ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 150 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಚೆನ್ನೈಗೆ ಫಾಫ್ ಡುಪ್ಲೆಸಿಸ್ ಸ್ಫೋಟಕ ಆರಂಭ ಒದಗಿಸಿದ್ದರು. 13 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸ್ ಸಿಡಿಸಿ ಡುಪ್ಲೆಸಿಸ್ 26 ರನ್​ಗೆ ನಿರ್ಗಮಿಸಿದ್ದರು. 2ನೇ ವಿಕೆಟ್​ಗೆ ವಾಟ್ಸನ್ ಜೊತೆಯಾದ ಸುರೇಶ್ ರೈನಾ ಉತ್ತಮ ಇನ್ನಿಂಗ್ಸ್ ಕಟ್ಟಲು ಮುಂದಾಗಿದ್ದರು.. ಆರಂಭಿಕ ಆಘಾತದಿಂದ ತಂಡವನ್ನು ಈ ಜೊಡಿ ಪಾರು ಮಾಡಿತ್ತು. ಅದರಲ್ಲೂ ವಾಟ್ಸನ್​ ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದಿದ್ದರು. ಉತ್ತಮ ಸಾತ್ ನೀಡುತ್ತಿದ್ದ ರೈನಾ 8 ರನ್​ ಗಳಿಸಿರುವಾಗ ರಾಹುಲ್ ಎಸೆತದಲ್ಲಿ ಎಲ್​​ಬಿ ಬಲೆಗೆ ಸಿಲುಕಿದರು. ಇದಾದ ಬೆನ್ನಲ್ಲೆ ಅಂಬಟಿ ರಾಯುಡು(1) ಅವರನ್ನು ಬುಮ್ರಾ ಪೆವಿಲಿಯನ್​ಗೆ ಅಟ್ಟಿದರು.

ಹೀಗೆ ದಿಢೀರ್ ಕುಸಿತ ಕಂಡ ತಂಡಕ್ಕೆ ವಾಟ್ಸನ್ ಹಾಗೂ ನಾಯಕ ಎಂಎಸ್ ಧೋನಿ ಆಸರೆಯಾಗುತ್ತಾರೆ ಎಂದು ನಂಬಲಾಗಿತ್ತು. ಆದರೆ ಇಶಾನ್ ಕಿಶನ್​​ರಿಂದ ರನೌಟ್​ಗೆ ಬಲಿಯಾದ ಧೋನಿ ಕೇವಲ 2 ರನ್​​ಗಳಿಸಿ ಹೊರ ನಡೆದರು. ದೊಡ್ಡ ವಿಕೆಟ್ ಕಳೆದುಕೊಂಡ ಚೆನ್ನೈಗೆ ಮತ್ತೆ ಗೆಲುವಿನ ರುಚಿ ನೀಡಿದ್ದು ವಾಟ್ಸನ್ ಹಾಗೂ ಡ್ವೇನ್ ಬ್ರಾವೋ.

ಮುಂಬೈ ಆಟಗಾರರು ಕೈಚೆಲ್ಲಿದ ಕ್ಯಾಚ್ ಅನ್ನು ಸರಿಯಾಗೇ ಉಪಯೋಗಿಸಿಕೊಂಡ ವಾಟ್ಸನ್, ಅಬ್ಬರದ ಬ್ಯಾಟಿಂಗ್ ನಡೆಸಿದರು. 59 ಬಾಲ್​ಗೆ ಬರೋಬ್ಬರಿ 80 ರನ್​ ಸಿಡಿಸಿದ ಅವರು ಕೊನೆಯ ಓವರ್​ನಲ್ಲಿ ರನ್​ಔಟ್​ಗೆ ಬಲಿಯಾದರು. ಪರಿಣಾಮ ಗೆಲ್ಲಬಹುದಾಗಿದ್ದ ಪಂದ್ಯವನ್ನು ಚೆನ್ನೈ ಕೈಚೆಲ್ಲಿತ್ತು.
First published: