ಬುಧವಾರ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರು. ಅಲ್ಲಿಗೆ 2003 ರ ವಿಶ್ವಕಪ್ನಲ್ಲಿ ಪಾಲ್ಗೊಂಡ ಭಾರತದ ಬಹುತೇಕ ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದಂತಾಗಿದೆ. ಸೌರವ್ ಗಂಗೂಲಿ ಮುನ್ನಡೆಸಿದ್ದ 2003ರ ವಿಶ್ವಕಪ್ ತಂಡದಲ್ಲಿ ಪಾರ್ಥಿವ್ ಪಟೇಲ್ ಸ್ಥಾನ ಪಡೆದಿದ್ದರು. ಆದರೆ ಎಲ್ಲಾ ಪಂದ್ಯಗಳಲ್ಲೂ ರಾಹುಲ್ ದ್ರಾವಿಡ್ ವಿಕೆಟ್ ಕೀಪಿಂಗ್ ಮಾಡಿದ್ದರಿಂದ, ಪಾರ್ಥಿವ್ಗೆ ಆಡುವ ಅವಕಾಶ ದೊರೆತಿರಲಿಲ್ಲ. ಇದೀಗ ಅವರು ಕೂಡ ನಿವೃತ್ತಿ ಘೋಷಿಸಿದ್ದಾರೆ. ಅಲ್ಲಿಗೆ 2003ರ ರನ್ನರ್ ಅಪ್ ತಂಡದ ಎಲ್ಲಾ ಆಟಗಾರರು ನಿವೃತ್ತಿ ಘೋಷಿಸಿದ್ದಾರೆ ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಏಕೆಂದರೆ ಓರ್ವ ಆಟಗಾರ ಮಾತ್ರ ಇನ್ನು ಸಹ ನಿವೃತ್ತಿ ನೀಡಿಲ್ಲ.
ಹೌದು, 2003 ವಿಶ್ವಕಪ್ ತಂಡದ ಆಟಗಾರನಾಗಿದ್ದ ಹರ್ಭಜನ್ ಸಿಂಗ್ ಇನ್ನು ಸಹ ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿಲ್ಲ. ಟೀಮ್ ಇಂಡಿಯಾದಿಂದ ಹೊರಬಿದ್ದರೂ ಭಜ್ಜಿ ಇನ್ನೂ ಸಹ ನಿವೃತ್ತಿಯನ್ನು ಘೋಷಿಸಿಲ್ಲ. ಭಾರತ ಪರ 2015 ರಲ್ಲಿ ಕೊನೆಯ ಬಾರಿ ಏಕದಿನ ಪಂದ್ಯ, ಹಾಗೂ 2016 ರಲ್ಲಿ ಟಿ20 ಪಂದ್ಯವನ್ನಾಡಿರುವ ಹರ್ಭಜನ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ ಹೆಸರನ್ನು ಮುಂದುವರೆಸಿರುವುದು ವಿಶೇಷ.
ಟೀಮ್ ಇಂಡಿಯಾ ಪರ 236 ಏಕದಿನ ಪಂದ್ಯಗಳ ಮೂಲಕ 269 ವಿಕೆಟ್, 28 ಟಿ20 ಪಂದ್ಯಗಳಿಂದ 25 ವಿಕೆಟ್ ಕಬಳಿಸಿರುವ ಹರ್ಭಜನ್ ಸಿಂಗ್, 103 ಟೆಸ್ಟ್ ಪಂದ್ಯಗಳಿಂದ 417 ವಿಕೆಟ್ ಕಬಳಿಸಿದ್ದಾರೆ. ಇದೀಗ ಪಾರ್ಥಿವ್ ಪಟೇಲ್ ನಿವೃತ್ತಿಯೊಂದಿಗೆ ಭಜ್ಜಿಯ ನಿವೃತ್ತಿ ಮತ್ತೊಮ್ಮೆ ಚರ್ಚೆಯಾಗಿದೆ. ಅಷ್ಟೇ ಅಲ್ಲದೆ ಐಪಿಎಲ್ನಲ್ಲೂ ನಿವೃತ್ತಿ ನೀಡಿಲ್ಲ ಎಂಬುದು ವಿಶೇಷ. ಹೀಗಾಗಿ ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ 40 ವರ್ಷದ ಹರ್ಭಜನ್ ಸಿಂಗ್ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
2003ರ ಭಾರತ ವಿಶ್ವಕಪ್ ತಂಡ ಹೀಗಿತ್ತು: ಸೌರವ್ ಗಂಗೂಲಿ (ನಾಯಕ), ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಕೈಫ್, ಯುವರಾಜ್ ಸಿಂಗ್, ವಿರೇಂದ್ರ ಸೆಹ್ವಾಗ್, ಜಹೀರ್ ಖಾನ್, ಅನಿಲ್ ಕುಂಬ್ಳೆ, ದಿನೇಶ್ ಮೊಗಿಯಾ, ಆಶಿಷ್ ನೆಹ್ರಾ, ಪಾರ್ಥೀವ್ ಪಟೇಲ್, ಹರ್ಭಜನ್ ಸಿಂಗ್, ಜಾವಗಲ್ ಶ್ರೀನಾಥ್, ಅಜಿತ್ ಅಗರ್ಕರ್, ಸಂಜಯ್ ಬಂಗಾರ್
ಇದನ್ನೂ ಓದಿ: ICC T20 Rankings: ನೂತನ ಟಿ20 ರ್ಯಾಕಿಂಗ್ ಪ್ರಕಟ: ಟಾಪ್ 10 ಪಟ್ಟಿಯಲ್ಲಿ ಇಬ್ಬರು ಭಾರತೀಯರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ