HOME » NEWS » Sports » CRICKET HAPPY NEW YEAR 2021 THIS 2021 YEAR IS A FESTIVAL FOR INDIAN CRICKET FANS VB

ಈ ವರ್ಷ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ..!

ಐಪಿಎಲ್ ಮುಗಿದ ಬಳಿಕ ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್​ಗೆ ಭಾರತ ಆತಿಥ್ಯವಹಿಸಲಿದೆ. 16 ದೇಶಗಳು ಪಾಲ್ಗೊಳ್ಳುವ ಈ ಟೂರ್ನಿ 2021 ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ನಡೆಯಲಿದೆ.

news18-kannada
Updated:January 1, 2021, 10:05 AM IST
ಈ ವರ್ಷ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ..!
Team India
  • Share this:
2021 ವರ್ಷದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬರಪೂರ ಮನೋರಂಜನೆ ಸಿಗಲಿದೆ. ಈ ವರ್ಷ ಭಾರತದಲ್ಲಿ ಟಿ-20 ಪಂದ್ಯಗಳ ಮಳೆಯೇ ಸುರಿಯಲಿದ್ದು, ರೋಚಕ ಕದನಕ್ಕೆ ಸಾಕ್ಷಿಯಾಗಲಿದೆ. ಭಾರತ ಕ್ರಿಕೆಟ್ ತಂಡ ಸದ್ಯ ಕಾಂಗರೂಗಳ ನಾಡಿನಲ್ಲಿ ಬೀಡುಬಿಟ್ಟಿದೆ. ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿ ಆಡುತ್ತಿದ್ದು, ಸದ್ಯ ಎರಡು ಪಂದ್ಯ ಮುಗಿದಿವೆ. ಜನವರಿ 19ಕ್ಕೆ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಮುಕ್ತಾಯಗೊಳಿಸಲಿದೆ. ಬಳಿಕ ಟೀಂ ಇಂಡಿಯಾ ತವರಿಗೆ ಹಿಂತಿರುಗಲಿದ್ದು ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಜ್ಜಾಗಬೇಕಿದೆ.

ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಬರೋಬ್ಬರಿ ಐದು ಟಿ-20, 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ. ಈ ಬಗ್ಗೆ ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ಇದಾದ ಬಳಿಕ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಪ್ರಾರಂಭವಾಗಲಿದೆ. ಕೊರೋನಾ ವೈರಸ್ ಕಾರಣ ಐಪಿಎಲ್ 2020 ಅನ್ನು ಪ್ರೇಕ್ಷಕರಿಲ್ಲದೆ ದೂರದ ಯುಎಇನಲ್ಲಿ ಬಿಸಿಸಿಐ ನಡೆಸಿ ಯಶಸ್ವಿಯಾಗಿತ್ತು. ಆದರೆ, ಮುಂದಿನ ಸೀಸನ್ ಅನ್ನು ಭಾರತದಲ್ಲೇ ಆಯೋಜನೆ ಮಾಡಲು ಬಿಸಿಸಿಐ ಸಜ್ಜು ಮಾಡುತ್ತಿದೆ.

S Sreesanth: ಅಭ್ಯಾಸ ಪಂದ್ಯದಲ್ಲಿ ಕೋಪಗೊಂಡ ಶ್ರೀಶಾಂತ್: ಎದುರಾಳಿ ಬ್ಯಾಟ್ಸ್​ಮನ್​ಗೆ ಮಾಡಿದ್ದೇನು ನೋಡಿ

“ಈ ಹೊತ್ತಿಗೆ ಕೊರೋನಾ ಲಸಿಕೆ ಕಂಡು ಹಿಡಿಯಬಹುದು. ಹೀಗಾಗಿ ಮುಂದಿನ ಐಪಿಎಲ್ ಅನ್ನು ಭಾರತದಲ್ಲೇ ನಡೆಸಲು ಬಯಸಿರುವುದಾಗಿ” ಸೌರವ್ ಗಂಗೂಲಿ ಹೇಳಿಕೊಂಡಿದ್ದಾರೆ.

ಐಪಿಎಲ್ ಮುಗಿದ ಬಳಿಕ ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್​ಗೆ ಭಾರತ ಆತಿಥ್ಯವಹಿಸಲಿದೆ. 16 ದೇಶಗಳು ಪಾಲ್ಗೊಳ್ಳುವ ಈ ಟೂರ್ನಿ 2021 ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ನಡೆಯಲಿದೆ. ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಜೊತೆಗೆ ಹೊಸ ಅರ್ಹ ತಂಡಗಳಾಗಿ ಪಪುವಾ ನ್ಯೂಗಿನಿ ನಮೀಬಿಯಾ, ನೆದರ್ಲ್ಯಾಂಡ್ಸ್, ಓಮನ್ ಮತ್ತು ಸ್ಕಾಟ್ಲೆಂಡ್ ತಂಡಗಳು ಕೂಡ ಇದರಲ್ಲಿ ಪಾಲ್ಗೊಳ್ಳಲಿದೆ.

ICC Test Rankings: ಕೇನ್ ವಿಲಿಯಮ್ಸನ್​ಗೆ ನಂಬರ್ 1 ಪಟ್ಟ: ಭರ್ಜರಿ ಏರಿಕೆ ಕಂಡ ಅಜಿಂಕ್ಯಾ ರಹಾನೆಹೀಗೆ ಈ ವರ್ಷ ಭಾರತದಲ್ಲಿ ಕ್ರಿಕೆಟ್ ಹಬ್ಬವೇ ನಡೆಯಲಿದೆ. ಅದರಲ್ಲೂ ಹೊಡಿಬಡಿ ಟೂರ್ನಿ ಎಂದೇ ಕರೆಯಲಾಗುವ ಟಿ-20 ಪಂದ್ಯಗಳು ಅತಿ ಹೆಚ್ಚು ನಡೆಯಲಿದೆ. ಭಾರತ ನೆಲದಲ್ಲಿ ಕ್ರಿಕೆಟ್ ಇಲ್ಲದೆ, ಮೈದಾನಕ್ಕೆ ಹೋಗಿ ಕ್ರಿಕೆಟ್ ನೋಡಲಾಗಿದೆ ಕಂಗಾಲಾಗಿರುವ ಅಭಿಮಾನಿಗಳು ಈ ಹೈವೋಲ್ಟೇಜ್ ಕದನ ವೀಕ್ಷಿಸಲು ಕಾದುಕುಳಿತಿದ್ದಾರೆ.
Published by: Vinay Bhat
First published: January 1, 2021, 10:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories