Happy Diwali 2019: ಸಂಭ್ರಮದ ದೀಪಾವಳಿಗೆ ವಿದೇಶಿ ಕ್ರಿಕೆಟಿಗರ ಶುಭಹಾರೈಕೆ

ವಿದೇಶಿ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಭಾರತೀಯರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಅಲ್ಲದೆ ಸ್ಮಿತ್, ಗೇಲ್​​ಗೆ ಭಾರತದಲ್ಲೇ ಸಾಕಷ್ಟು ಅಭಿಮಾನಿಗಳಿದ್ದಾರೆ.

ಸ್ಟೀವ್ ಸ್ಮಿತ್, ಕ್ರಿಸ್ ಗೇಲ್ ಹಾಗೂ ಡೇವಿಡ್ ವಾರ್ನರ್

ಸ್ಟೀವ್ ಸ್ಮಿತ್, ಕ್ರಿಸ್ ಗೇಲ್ ಹಾಗೂ ಡೇವಿಡ್ ವಾರ್ನರ್

  • Share this:
ದೇಶದೆಲ್ಲೆಡೆ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆಮಾಡಿದೆ. ರಾತ್ರಿ ವೇಳೆ ಬಾನಂಗಳದಲ್ಲಿ ಬೆಳಕಿನ ಚಿತ್ತಾರ ಕಣ್ಣು ಕೋರೈಸುತ್ತದೆ. ದೀಪಾವಳಿ ಹಬ್ಬದ ವಿಶೇಷವಾಗಿ ರಂಗು ರಂಗಾದ ರಂಗೋಲಿ, ಹೂವಿನ ಅಲಂಕಾರ, ದೇವರಿಗೆ ನೈವೇದ್ಯ, ಪಟಾಕಿ ಹಚ್ಚುವುದು ಹೀಗೆ ವಿವಿಧ ಸಂಭ್ರಮಾಚರಣೆಯಲ್ಲಿ ಜನರು ಮುಳುಗಿದ್ದಾರೆ.

ಈ ನಡುವೆ ಕ್ರಿಕೆಟಿಗರು ಕೂಡ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ವಿಶೇಷ ಎಂದರೆ ವಿದೇಶಿ ಕ್ರಿಕೆಟಿಗರು ಭಾರತೀಯರಿಗೆ ದೀಪಾವಳಿಯ ವಿಶ್ ಮಾಡಿದ್ದಾರೆ. ಕ್ರಿಸ್ ಗೇಲ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಮೈಕಲ್ ಕ್ಲಾರ್ಕ್, ಡೇವಿಡ್ ವಾರ್ನರ್ ಸೇರಿದಂತೆ ಪ್ರಮುಖ ವಿದೇಶಿ ಕ್ರಿಕೆಟಿಗರು ಭಾರತೀಯರಿಗೆ ಶುಭಕೋರಿದ್ದಾರೆ.

ವಿದೇಶಿ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಭಾರತೀಯರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಅಲ್ಲದೆ ಸ್ಮಿತ್, ಗೇಲ್​​ಗೆ ಭಾರತದಲ್ಲೇ ಸಾಕಷ್ಟು ಅಭಿಮಾನಿಗಳಿದ್ದಾರೆ.

  
View this post on Instagram
 

Happy Diwali to all of my Indian friends out there


A post shared by Steve Smith (@steve_smith49) on


ಭಾರತದ ನನ್ನ ಎಲ್ಲ ಸ್ನೇಹಿತರಿಗೆ ದೀಪಾವಳಿ ಹಬ್ಬದ ಶುಭಾಶಯ ಎಂದು ಸ್ಮಿತ್ ಇನ್​ಸ್ಟಾಗ್ರಾಂ ಮೂಲಕ ವಿಶ್ ಮಾಡಿದ್ದಾರೆ. ಗೇಲ್ ಟ್ವಿಟ್ಟರ್​​ನಲ್ಲಿ ಶುಭಕೋರಿದ್ದಾರೆ. ಇವರಿಬ್ಬರ ವಿಶ್​ಗೆ ಭಾರತೀಯರು ಖುಷಿಯಾಗಿದ್ದು ಅನೇಕರು ಕಮೆಂಟ್ ಮಾಡಿ ಸಂತಸ ಸೂಚಿಸಿದ್ದಾರೆ. ಇನ್ನು ಟೀಂ ಇಂಡಿಯಾ ಕ್ರಿಕೆಟಿಗರು ಕೂಡ ವಿಶ್ ಮಾಡಿದ್ದಾರೆ.

  

 
View this post on Instagram
 

🙏🙏 Happy Diwali to all! @sunrisershyd


A post shared by David Warner (@davidwarner31) on
 
View this post on Instagram
 

Wishing you all a happy #Diwali 🎉 🥳


A post shared by Tom Moody (@tommoodycricket) on


 First published: