news18-kannada Updated:December 12, 2020, 8:42 AM IST
ಯುವರಾಜ್ ಸಿಂಗ್
ವಿಶ್ವ ಕ್ರಿಕೆಟ್ನ ಶ್ರೇಷ್ಠ ಆಟಗಾರರ ಪೈಕಿ ಒಬ್ಬರಾದ ಯುವರಾಜ್ ಸಿಂಗ್ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 39ನೇ ವಸಂಕ್ಕೆ ಕಾಲಿಟ್ಟಿರುವ ಸಿಕ್ಸರ್ ಕಿಂಗ್ಗೆ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ. ಮೈದಾನದಲ್ಲಿ ಅತ್ಯಂತ ಚುರುಕಿನ ಫೀಲ್ಡಿಂಗ್, ಬ್ಯಾಟ್ ಹಿಡಿದು ಬಂದರೆ ಸಿಕ್ಸರ್ ಮೇಲೆ ಸಿಕ್ಸರ್, ಪಾರ್ಟ್ ಟೈಂ ಬೌಲರ್ ಆಗಿಯೂ ವಿಕೆಟ್ ಕೀಳುವ ಚಾಕಚಕ್ಯತೆ ಹೊಂದಿದ್ದರು ಯುವಿ. ಟೀಂ ಇಂಡಿಯಾ ಪಾಲಿಗೆ ದೊರೆತ ಪರಿಪೂರ್ಣ ಹಾಗೂ ಪರಿಪಕ್ವ ಆಲ್ರೌಂಡರ್ಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಕಂಡುಬರುವ ಹೆಸರು ಯುವರಾಜ್ ಸಿಂಗ್. ಯಾವುದೇ ಮೈದಾನವಾದರೂ ನಿರ್ಭೀತಿಯಿಂದ ಬ್ಯಾಟ್ ಬೀಸಬಲ್ಲ ಯುವಿ, ಫೀಲ್ಡಿಂಗ್ನಲ್ಲಿ ಟೀಂ ಇಂಡಿಯಾದ ಹಲವು ಹಾಲಿ ಆಟಗಾರರಿಗೆ ಮಾದರಿ.
ಟೀಂ ಇಂಡಿಯಾದಲ್ಲಿ ಅಕ್ಷರಶಃ ಅಬ್ಬರಿಸಿದ್ದ ಯುವರಾಜ್ ಸಿಂಗ್, ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ನಲ್ಲಿ ಮಾತ್ರ ಅಷ್ಟೊಂದು ಮಿಂಚು ಹರಿಸಿಲ್ಲ. 2019ರ ವಿಶ್ವಕಪ್ ಆಡುವ ಮಹದಾಸೆ ಹೊಂದಿದ್ದ 'ಪಂಜಾಬ್ ಕಾ ಪುತ್ತರ್', ಅದು ಈಡೇರದೆ ಎಲ್ಲ ಮಾದರಿಗೂ ವಿದಾಯ ಘೋಷಿಸಿದರು. ಮಹಾಮಾರಿ ಕ್ಯಾನ್ಸರ್ ಹಿಮ್ಮೆಟ್ಟಿಸಿ ಮರು ಹುಟ್ಟು ಪಡೆದ ಯುವಿ ನಂತರ ಮೈದಾನದಲ್ಲಿ ಕೊಂಚ ಮಂಕಾಗಿದ್ದರು. ಇದೇ ಕಾರಣದಿಂದ ತಂಡಕ್ಕೂ ಬೇಡವಾದರು.
Yuvraj Singh Birthday: ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಹೆಸರಿನಲ್ಲಿರುವ ವಿಶ್ವ ದಾಖಲೆಗಳಿವು..!
ಭಾರತದ ಪರ ಯುವರಾಜ್ ಸಿಂಗ್ 304 ಏಕದಿನ(8701 ರನ್), 58 ಟಿ-20(1177 ರನ್) ಹಾಗೂ 40 ಟೆಸ್ಟ್(1900 ರನ್) ಪಂದ್ಯವನ್ನಾಡಿದ್ದಾರೆ. ಭಾರತ ತಂಡಕ್ಕೆ 2011ರ ವಿಶ್ವಕಪ್ ಗೆಲುವು ಸೇರಿದಂತೆ ಹಲವು ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಇನ್ನೂ 2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆಲುವಿನ ರೂವಾರಿ ಯುವರಾಜ್ ಸಿಂಗ್ ಹುಟ್ಟುಹಬ್ಬದ ಸಂಭ್ರಮದ ಹೊತ್ತಲ್ಲಿ, ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು ಇಲ್ಲಿವೆ.
ಯುವರಾಜ್ ಸಿಂಗ್ನ ಅಪ್ಪ ಯೋಗರಾಜ್ ಸಿಂಗ್ ಭಾರತ ಕ್ರಿಕೆಟ್ ತಂಡದ ಮಾಜಿ ಫಾಸ್ಟ್ ಬೌಲರ್ ಮತ್ತು ಪಂಜಾಬಿ ಸಿನಿಮಾ ನಟರಾಗಿದ್ದರು.
ಸಚಿನ್ ತೆಂಡೂಲ್ಕರ್ ನಂತರ ಇಂಗ್ಲಿಷ್ ಕೌಂಟಿ ಯೋಕ್ಶೇರ್ ನಲ್ಲಿ ಸ್ಥಾನಗಿಟ್ಟಿಸಿದ ಭಾರತೀಯ ಕ್ರಿಕೆಟಿಗ2006ರಲ್ಲಿ ಭಾರತದಲ್ಲಿ ಎಕ್ಸ್ಬಾಕ್ಸ್ 360 ವೀಡಿಯೋ ಗೇಮ್ ಬಿಡುಗಡೆಯಾದಾಗ ಯುವರಾಜ್ ಸಿಂಗ್ ಮೈಕ್ರೋಸಾಫ್ಟ್ ಕಂಪನಿಯ ರಾಯಭಾರಿಯಾಗಿ ಆಯ್ಕೆಯಾಗಿದ್ದರು.
ರೋಲರ್ ಸ್ಕೇಟಿಂಗ್ನಲ್ಲಿ ಅತೀವ ಆಸಕ್ತಿ ಹೊಂದಿದ್ದ ಯುವಿ 14ರ ಹರೆಯದವರ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಆಗಿದ್ದರು.
Team India: 2020ರಲ್ಲಿ ಅತ್ಯಂತ ದುಬಾರಿ ಎನಿಸಿದ ಟೀಮ್ ಇಂಡಿಯಾ ಬೌಲರ್ ಇವರೇ..!
ಯುವರಾಜ್ ಸಿಂಗ್ 12ನೇ ಸಂಖ್ಯೆಯ ಜೆರ್ಸಿ ಧರಿಸುತ್ತಾರೆ. ಇದಕ್ಕೆ ಕಾರಣ ಏನು ಗೊತ್ತಾ? ಅವರು ಹುಟ್ಟಿದ ದಿನಾಂಕ ಮತ್ತು ತಿಂಗಳು 12!. 12 ಅವರ ಅದೃಷ್ಟ ಸಂಖ್ಯೆಯೂ ಹೌದು. ತನ್ನ ಮೊಣಕೈಗೆ ಕಪ್ಪು ದಾರವನ್ನು ಕಟ್ಟಿಕೊಂಡೇ ಯುವಿ ಮೈದಾನಕ್ಕಿಳಿಯುತ್ತಾರೆ.
ಬಾಲ್ಯದಿಂದಲೇ ಸಚಿನ್ ತೆಂಡೂಲ್ಕರ್ ಅಭಿಮಾನಿ ಈತ
ಚಂಡೀಗಢದ ಡಿಎವಿ ಶಾಲೆಯಲ್ಲಿ ಯುವಿ ಶಿಕ್ಷಣ ಪಡೆದಿದ್ದರು. ಕ್ಲಾಸ್ ರೂಂನ ಒಳಗೆ ಇರುವುದಕ್ಕಿಂತ ಹೆಚ್ಚು ಹೊತ್ತು ಈತ ಆಟದ ಮೈದಾನದಲ್ಲೇ ಇರುತ್ತಿದ್ದರು.
7ರ ಹರೆಯದಲ್ಲಿ ಸೈಕಲ್ ಬೇಕೆಂದು ಹಠ ಹಿಡಿದವನಿಗೆ ಅಮ್ಮ ಸೈಕಲ್ ಕೊಡಿಸಿದ್ದರು. ಆದರೆ ವೇಗವಾಗಿ ಸೈಕಲ್ ಓಡಿಸಿ ರಿಕ್ಷಾವೊಂದಕ್ಕೆ ಗುದ್ದಿದ್ದ ಯುವಿ ದೇಹಕ್ಕೆ 10 ಹೊಲಿಗೆಗಳನ್ನು ಹಾಕಬೇಕಾಗಿ ಬಂದಿತ್ತು.
ಬಾಲಿವುಡ್ ನ ಅನಿಮೇಟೆಡ್ ಸಿನಿಮಾ ಜಂಬೋದಲ್ಲಿ ಯುವಿ ಕಂಠದಾನ ಮಾಡಿದ್ದಾರೆ.
ಕ್ಯಾನ್ಸರ್ ಪೀಡಿತರಾಗಿ ಗುಣಮುಖ ಹೊಂದಿದ ನಂತರ ಯುವಿ you we can ಎಂಬ ಸಂಘಟನೆ ಜತೆಯಲ್ಲಿ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ.
Published by:
Vinay Bhat
First published:
December 12, 2020, 8:42 AM IST