ಭಾರತ ಕ್ರಿಕೆಟ್ ತಂಡದ ಭರವಸೆಯ ಯುವ ಬ್ಯಾಟ್ಸ್‌ಮನ್ ಕರ್ನಾಟಕದ ಹೆಮ್ಮೆಯ ಮನೀಶ್ ಪಾಂಡೆ ಇಂದು 31ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ 2015ರಲ್ಲಿ ಜಿಂಬಾಬ್ವೆ ವಿರುದ್ಧ ಆಡುವ ಮೂಲಕ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟಿ ಮನೀಶ್ ಪಾಂಡೆ ತಮ್ಮ ಕೆರಿಯರ್ ಹಲವಾರು ಏಳುಬೀಳುಗಳನ್ನು ಕಂಡಿದ್ದಾರೆ. ಆದರೆ, ಸತತ ಪರಿಶ್ರಮದಿಂದಾಗಿ ಕಳೆದ ವರ್ಷದಿಂದ ಟೀಂ ಇಂಡಿಯಾದ ಖಾಯಂ ಸದಸ್ಯನಾಗಿ ಮಿಂಚುತ್ತಿದ್ದಾರೆ. ಸೆಪ್ಟೆಂಬರ್ 10, 1989 ರಂದು ಜನಿಸಿದ ಮನೀಶ್, ಸದ್ಯ ಟೀಂ ಇಂಡಿಯಾದಲ್ಲಿ ಮಧ್ಯಮ ಕ್ರಮಾಂಕದ ಆಧಾರಸ್ತಂಭ. ಪಾಂಡೆ ಹುಟ್ಟುಹಬ್ಬದ ಪ್ರಯುಕ್ತ ಅವರ ಬಗ್ಗೆ ನಿಮಗೆ ತಿಳಿದಿರದ ಕೆಲ ಕುತೂಹಲಕಾರಿ ವಿಷಯಗಳು ಇಲ್ಲಿವೆ.
ಮನೀಶ್ ಪಾಂಡೆ ಹುಟ್ಟಿದ್ದು ಉತ್ತರಖಂಡ್ನ ನೈನಿಟಲ್ನಲ್ಲಿ. ಆದರೆ, ಪಾಂಡೆಗೆ 15 ವರ್ಷ ಇರುವಾಗ ಇವರ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತು. ಪಾಂಡೆ ತಂದೆ ಭಾರತೀಯ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಕೆಲ ವರ್ಷಗಳ ಬಳಿಕ ರಾಜಸ್ಥಾನಕ್ಕೆ ತೆರಳಿದರು. ಆದರೆ, ಪಾಂಡೆ ಕ್ರಿಕೆಟ್ ಕಲಿಯುವ ಆಸಕ್ತಿ ಹೊಂದಿದ್ದ ಕಾರಣ ಬೆಂಗಳೂರಿನಲ್ಲೆ ನೆಲೆ ಊರಿದರು.
Yuvraj Singh: ನಿವೃತ್ತಿ ಹಿಂಪಡೆದ ಯುವರಾಜ್ ಸಿಂಗ್: ಬಿಸಿಸಿಐಗೆ ಸಿಕ್ಸರ್ ಕಿಂಗ್ ಪತ್ರ
💪 Attacking batsman
⚡ Electric fielder
🤲🏻 One of the safest pairs of hands on the field
As we wish @im_manishpandey on his birthday, let's relive his fielding brilliance. 👏🎂
— BCCI (@BCCI) September 10, 2020
ಪಾಂಡೆ ರಾಜ್ಯ ಮಟ್ಟದ ಟೂರ್ನಮೆಂಟ್ನಲ್ಲಿ ಮೊದಲಿಗೆ ಮೈಸೂರು ಪರ ಆಡಿದರು. ಬಳಿಕ 2008ರ ಅಂಡರ್-19 ವಿಶ್ವಕಪ್ನಲ್ಲಿ ಆಡಿದ್ದು ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಐಪಿಎಲ್ನಲ್ಲಿ ಶತಕ ಸಿಡಿಸಿದ ಮೊಟ್ಟ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಪಾಂಡೆ ಹೆಸರಲ್ಲಿದೆ.
2009-10ರ ರಣಜಿ ಕ್ರಿಕೆಟ್ನಲ್ಲಿ ಮಿಂಚಿದ್ದ ಪಾಂಡೆ 882 ರನ್ ಕಲೆಹಾಕಿದ್ದರು. ಇದರಲ್ಲಿ 4 ಶತಕ ಹಾಗೂ 5 ಅರ್ಧಶತಕ ಬಾರಿಸಿದ್ದರು. 2015 ರಲ್ಲಿ ಜಿಂಬಾಬ್ವೆ ವಿರುದ್ಧ ಆಡುವ ಮೂಲಕ ಪಾಂಡೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲಿ 71 ರನ್ ಸಿಡಿಸಿ ಕೇದರ್ ಜಾಧವ್ ಜೊತೆ 144 ರನ್ಗಳ ಅಮೋಘ ಜೊತೆಯಾಟ ಆಡಿದರು.
Rohit Sharma: ಚಲಿಸುತ್ತಿದ್ದ ಬಸ್ ಮೇಲೆ ಬಿತ್ತು ಚೆಂಡು: ರೋಹಿತ್ ಶರ್ಮಾ ಸಿಡಿಸಿದ ಈ ಸಿಕ್ಸ್ ನೀವು ನೋಡಿದ್ರಾ?
Happy 31st birthday, @im_manishpandey! 🎂🧡#HappyBirthdayManish #OrangeArmy #KeepRising pic.twitter.com/fW2PwNQgB8
— SunRisers Hyderabad (@SunRisers) September 9, 2020
ಇನ್ನೂ ಕಳೆದ ವರ್ಷ ಮನೀಶ್ ಪಾಂಡೆ ತಮಿಳು ಚಿತ್ರರಂಗದ ನಟಿ, ಮಂಗಳೂರು ಬೆಡಗಿ ಆಶ್ರಿತಾ ಶೆಟ್ಟಿ ಅವರನ್ನು ವಿವಾಹವಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ