• Home
 • »
 • News
 • »
 • sports
 • »
 • HBD Harbhajan Singh: ಹುಟ್ಟುಹಬ್ಬದ ಸಂಭ್ರಮದಲ್ಲಿ ಹರ್ಭಜನ್​ ಸಿಂಗ್​; ಟೀಂ ಇಂಡಿಯಾ ಆಟಗಾರಿಂದ ಶುಭಾಶಯಗಳ ಸುರಿಮಳೆ

HBD Harbhajan Singh: ಹುಟ್ಟುಹಬ್ಬದ ಸಂಭ್ರಮದಲ್ಲಿ ಹರ್ಭಜನ್​ ಸಿಂಗ್​; ಟೀಂ ಇಂಡಿಯಾ ಆಟಗಾರಿಂದ ಶುಭಾಶಯಗಳ ಸುರಿಮಳೆ

ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್

Harbhajan Singh Bithday: ಹರ್ಭಜನ್ ಸಿಂಗ್ ಆಪ್ತಮಿತ್ರ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಬರ್ತ್​ಡೇ ಬಾಯ್​ಗೆ ದೂಸ್ರಾ ಎಸೆದಿದ್ದಾರೆ. ಇದು ನಿನ್ನ 40ನೇ ಹುಟ್ಟುಹಬ್ಬನಾ ಅಥವಾ 47ನೇ ವರ್ಷದ ಹುಟ್ಟುಹಬ್ಬನಾ ಅಂತ ಟ್ವೀಟ್ ಮಾಡಿ, ಭಜ್ಜಿ ಕಾಲೆಳೆದಿದ್ದಾರೆ.

 • Share this:

  ಟೀಂ ಇಂಡಿಯಾದ ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಇಂದು 40ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಭಜ್ಜಿ ಹುಟ್ಟುಹಬ್ಬಕ್ಕೆ ಶುಭಾಷಯಗಳ ಸುರಿಮಳೆ ಹರಿದು ಬರುತ್ತಿದ್ದು, ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್​ ತೆಂಡೂಲ್ಕರ್​, ವಿರೇಂದ್ರ ಸೆಹ್ವಾಗ್, ಗೌತಮ್​ ಗಂಭೀರ್​, ಟೀಂ ಇಂಡಿಯಾದ​ ನಾಯಕ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಯಜುವೇಂದ್ರ ಚಾಹಲ್​ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ.


  ಮತ್ತೊಂದೆಡೆ ಹರ್ಭಜನ್ ಸಿಂಗ್ ಆಪ್ತಮಿತ್ರ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಬರ್ತ್​ಡೇ ಬಾಯ್​ಗೆ ದೂಸ್ರಾ ಎಸೆದಿದ್ದಾರೆ. ಇದು ನಿನ್ನ 40ನೇ ಹುಟ್ಟುಹಬ್ಬನಾ ಅಥವಾ 47ನೇ ವರ್ಷದ ಹುಟ್ಟುಹಬ್ಬನಾ ಅಂತ ಟ್ವೀಟ್ ಮಾಡಿ, ಭಜ್ಜಿ ಕಾಲೆಳೆದಿದ್ದಾರೆ.


  ಹರ್ಭಜನ್ ಭಾರತ ತಂಡದ ಜರ್ಸಿ ತೊಟ್ಟು 2016ರಲ್ಲಿ ಢಾಕಾದಲ್ಲಿ ಯುಎಇ ವಿರುದ್ಧ ತಮ್ಮ ಅಂತಿಮ ಟಿ20 ಪಂದ್ಯ ಆಡಿದ್ದರು. 2011ರಲ್ಲಿ ಭಾರತ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದ ಭಜ್ಜಿ 103 ಟೆಸ್ಟ್, 236 ಏಕದಿನ ಪಂದ್ಯ ಮತ್ತು 28 ಟಿ20 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದಾರೆ.


  ಹರ್ಭಜನ್​​ ಸಿಂಗ್​ ಹುಟ್ಟುಹಬ್ಬಕ್ಕೆ ಶುಭಕೋರಿದ ಖ್ಯಾತ ಕ್ರಿಕೆಟಿಗರು:


  Published by:Harshith AS
  First published: