GT20 Canada 2019: ಸ್ಫೋಟಕ ಬ್ಯಾಟಿಂಗ್ ಬೆನ್ನಲ್ಲೆ ಫೀಲ್ಡಿಂಗ್​ನಲ್ಲೂ ಮಿಂಚಿದ ಯುವಿ

ಬ್ರಂಪ್ಟನ್ ವೋಲ್ವ್ಸ್​​ ವಿರುದ್ಧದ ಪಂದ್ಯದಲ್ಲಿ ಯುವಿ ಬ್ಯಾಟಿಂಗ್-ಫೀಲ್ಡಿಂಗ್​ನಲ್ಲಿ ಭರ್ಜರಿ ಪ್ರದರ್ಶನ ತೋರಿದರು.

Vinay Bhat | news18
Updated:August 5, 2019, 2:53 PM IST
GT20 Canada 2019: ಸ್ಫೋಟಕ ಬ್ಯಾಟಿಂಗ್ ಬೆನ್ನಲ್ಲೆ ಫೀಲ್ಡಿಂಗ್​ನಲ್ಲೂ ಮಿಂಚಿದ ಯುವಿ
ಯುವರಾಜ್ ಸಿಂಗ್
  • News18
  • Last Updated: August 5, 2019, 2:53 PM IST
  • Share this:
ಬೆಂಗಳೂರು (ಆ. 05): ಜೂನ್ 10 ರಂದು ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಯುವರಾಜ್ ಸಿಂಗ್ ಅವರು ಮತ್ತೆ ಮೈದಾನಕ್ಕಿಳಿದು ಮಿಂಚು ಹರಿಸುತ್ತಿದ್ದಾರೆ.

ಕೆನಡಾ ಗ್ಲೋಬಾಲ್ ಟಿ-20 ಲೀಗ್​ನಲ್ಲಿ ಯುವಿ ಪಾಲ್ಗೊಂಡಿದ್ದು, ಟೊರಾಂಟೋ ನ್ಯಾಷನಲ್ಸ್​ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೆ ಬ್ಯಾಟಿಂಗ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸುದ್ದಿಯಾಗಿದ್ದ ಯುವಿ ಸದ್ಯ ಫೀಲ್ಡಿಂಗ್​ನಲ್ಲೂ ತಮ್ಮ ಕಮಾಲ್ ತೋರಿಸಿದ್ದಾರೆ.

ಬ್ರಂಪ್ಟನ್ ವೋಲ್ವ್ಸ್​​ ವಿರುದ್ಧದ ಪಂದ್ಯದಲ್ಲಿ ಯುವಿ ಬ್ಯಾಟಿಂಗ್-ಫೀಲ್ಡಿಂಗ್​ನಲ್ಲಿ ಭರ್ಜರಿ ಪ್ರದರ್ಶನ ತೋರಿದರು. ಬ್ರಂಪ್ಟನ್ ತಂಡದ ಆರಂಭಿಕ ಆಟಗಾರ ಲೆಂಡ್ ಸಿಮಾನ್ಸ್​ ಅವರ ಅದ್ಭುತ ಕ್ಯಾಚ್ ಹಿಡಿದು ಎದುರಾಳಿಗರಿಗೆ ದಂಗಾಗುವಂತೆ ಮಾಡಿದ್ದಾರೆ.

Rohit Sharma: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಒಡೆದ ರೋಹಿತ್; ಕೊಹ್ಲಿ-ಗೇಲ್ ದಾಖಲೆ ಉಡೀಸ್

 



ಇಷ್ಟೇ ಅಲ್ಲದೆ ಬ್ಯಾಟಿಂಗ್​ನಲ್ಲೂ ಮಿಂಚಿರುವ ಯುವಿ ಕೇವಲ 22 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿ 51 ರನ್ ಬಾರಿಸಿದ್ದಾರೆ.

First published:August 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading