ಬೆಂಗಳೂರು (ಜು. 30): ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಾಲ್ ಟಿ-20 ಲೀಗ್ನಲ್ಲಿ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಆರ್ಭಟಿಸುತ್ತಿದ್ದಾರೆ.
ವ್ಯಾಂಕೋವರ್ ನೈಟ್ಸ್ ತಂಡದ ನಾಯಕನಾಗಿರುವ ಗೇಲ್ ನಿನ್ನೆ ನಡೆದ ಮೊಂಟ್ರೆಲ್ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಎದುರಾಳಿ ಬೌಲರ್ಗಳ ಮೈಚಳಿ ಬಿಡಿಸಿದ ಗೇಲ್ ಕೇವಲ 54 ಎಸೆತಗಳಲ್ಲಿ 7 ಬೌಂಡರಿ ಹಾಗೂ ಬರೋಬ್ಬರಿ 12 ಸಿಕ್ಸರ್ ಸಿಡಿಸಿ ಅಜೇಯ 122 ರನ್ ಚಚ್ಚಿದರು. ಇದು ಗೇಲ್ ಬ್ಯಾಟ್ನಿಂದ ಸಿಡಿದ 22ನೇ ಟಿ-20 ಶತಕವಾಗಿದೆ.
ಟೀಂ ಇಂಡಿಯಾದ ವಿಂಡೀಸ್ ಪ್ರವಾಸ; ಯಾವಾಗ?, ಸಮಯ? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಇವರ ಜೊತೆಗೆ ಬ್ಯಾಟ್ ಬೀಸಿದ ಟಾಬಿಸ್ ವಿಸೀ 19 ಎಸೆತಗಳಲ್ಲಿ 51 ರನ್ ಬಾರಿಸಿದರೆ, ದ. ಆಫ್ರಿಕಾದ ವಂಡರ್ ಡಸ್ಸೆನ್ 25 ಎಸೆತಗಳಲ್ಲಿ 56 ರನ್ ಸಿಡಿಸಿದರು. ಇದರ ಪರಿಣಾಮ ತಂಡ 20 ಓವರ್ಗೆ 3 ವಿಕೆಟ್ ಕಳೆದುಕೊಂಡು ಬರೋಬ್ಬರಿ 276 ರನ್ ಕಲೆಹಾಕಿತು. ಇದು
ಟಿ-20 ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಮೊತ್ತವಾಗಿದೆ.
ಆದರೆ, ಈ ಗುರಿಯನ್ನು ಬೆನ್ನಟ್ಟಲು ಮೊಂಟ್ರೆಲ್ ಟೈಗರ್ಸ್ ತಂಡಕ್ಕೆ ಭಾಗ್ಯವೇ ಸಿಗಲಿಲ್ಲ. ವ್ಯಾಂಕೋವರ್ ನೈಟ್ಸ್ ತಂಡದ ಇನ್ನಿಂಗ್ಸ್ ಕೊನೆಯಾದಾಗ ಜೋರಾಗಿ ಮಳೆ ಸುರಿದಿದ್ದು, ವರುಣನ ಕಾಟದಿಂದ ಕೊನೆಯದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ