ಇಂಗ್ಲೆಂಡ್​ನ ಹೊಸ ಮಾದರಿ ಕ್ರಿಕೆಟ್ ಟೂರ್ನಿಯನ್ನ ಕೋವಿಡ್​ಗೆ ಹೋಲಿಸಿದ ಜೋ ರೂಟ್ ಅಜ್ಜ

Hundred Ball Cricket- ಇಂಗ್ಲೆಂಡ್ನಲ್ಲಿ ಈಗ ಟಿ20ಗಿಂತಲೂ ಕಿರಿದಾದ ಚುಟುಕು ಕ್ರಿಕೆಟ್ವೊಂದರ ಪ್ರಯೋಗ ನಡೆದಿದೆ. ಈ ಟೂರ್ನಿಯನ್ನು ಜೋ ರೂಟ್ ತಾತ ಡಾನ್ ರೂಟ್ ಕಟುವಾಗಿ ಟೀಕಿಸಿದ್ಧಾರೆ.

ಜೋ ರೂಟ್

ಜೋ ರೂಟ್

 • Cricketnext
 • Last Updated :
 • Share this:
  ಲಂಡನ್: ಇಂಗ್ಲೆಂಡ್​ನಲ್ಲಿ ಈಗ ಹೊಸ ಮಾದರಿಯ ಕ್ರಿಕೆಟ್ ಪ್ರಯೋಗ ನಡೆದಿದೆ. ಟಿ20 ಕ್ರಿಕೆಟ್ ಪಂದ್ಯಕ್ಕಿಂತಲೂ ಬೇಗ ಮುಗಿಯುವ ಮತ್ತು ಹೊಸ ಪೀಳಿಗೆಯ ಯುವ ಸಮುದಾಯವನ್ನು ಆಕರ್ಷಿಸುವ ನಿಟ್ಟಿನಲ್ಲಿ 100 ಎಸೆತಗಳ ಟೂರ್ನಿ ಇದೇ ವರ್ಷ ಮೊದಲ ಬಾರಿಗೆ ನಡೆದಿದೆ. ದಿ ಹಂಡ್ರೆಡ್ ಎಂಬ ಫ್ರಾಂಚೈಸಿ ಈ ಕ್ರಿಕೆಟ್ ಟೂರ್ನಿ ನಡೆಸುವ ಹಕ್ಕು ಹೊಂದಿದೆ. ಟಿ20 ಕ್ರಿಕೆಟ್​ನಲ್ಲಿ ಒಂದು ಇನ್ನಿಂಗ್ಸಲ್ಲಿ 120 ಬಾಲ್ ಇದ್ದರೆ ದಿ ಹಂಡ್ರೆಡ್​ನಲ್ಲಿ 100 ಬಾಲ್ ಮಾತ್ರ. ಇಡೀ ಪಂದ್ಯ ಎರಡೂವರೆ ಗಂಟೆಗೆ ಮುಗಿದು ಹೋಗುತ್ತದೆ. ಈ ಸೂಪರ್ ಚುಟುಕು ಕ್ರಿಕೆಟ್​ನ ಪ್ರಯೋಗಕ್ಕೆ ಶಹಬ್ಬಾಸ್ ಎನ್ನುವವರು ಒಂದೆಡೆಯಾದರೆ ಹಿಡಿಶಾಪ ಹಾಕುವ ಕ್ರಿಕೆಟ್ ಪ್ರೇಮಿಗಳೂ ಹಲವರಿದ್ದಾರೆ. ಇಂಥವರ ಪೈಕಿ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಜೋ ರೂಟ್ ಅವರ ತಾತ ಡಾನ್ ರೂಟ್ ಕೂಡ ಒಬ್ಬರು.

  ಡಾನ್ ರೂಟ್ ಅವರು ದಿ ಹಂಡ್ರೆಡ್ ಟೂರ್ನಿಯನ್ನು ಕೋವಿಡ್-19 ವೈರಸ್​ಗೆ ಹೋಲಿಕೆ ಮಾಡಿದ್ದಾರೆ. ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್​ನ ಅಧಃಪತನಕ್ಕೆ ಇದು ಕಾರಣವಾಗುತ್ತಿದೆ ಎಂದೂ ಆತಂಕ ತೋಡಿಕೊಂಡಿದ್ದಾರೆ. “ದಿ ಹಂಡ್ರೆಡ್ ಈಗ ನಮ್ಮ ಜೊತೆ ಇದೆ. ಅದೇ ರೀತಿ ಕೋವಿಡ್ ಕೂಡ ನಮ್ಮ ಜೊತೆಯೇ ಇದೆ. ಕೋವಿಡ್​ಗೆ ಸ್ವಾಗತಿಸಿದಂತೆ ದಿ ಹಂಡ್ರೆಡ್​ಗೂ ಸ್ವಾಗತಿಸಬೇಕಿದೆ. ಕ್ರಿಕೆಟ್​ನ ಮೂಲಬೇರುಗಳನ್ನ ಪುಷ್ಟೀಕರಿಸಲು ಹೆಚ್ಚು ಫಂಡಿಂಗ್​ನ ಅಗತ್ಯತೆ ಇರುವ ಬಗ್ಗೆ ನಮಗೆ ಪಾಠ ಬೋಧಿಸಲಾಗುತ್ತಿದೆ” ಎಂದು ಡಾನ್ ರೂಟ್ ವ್ಯಂಗ್ಯ ಮಾಡಿದ್ದಾರೆ.

  “ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯು ಟೆಸ್ಟ್ ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ನ ಅಧಃಪತನಕ್ಕೆ ಕಾರಣವಾಗುತ್ತಿದೆ. ಮತ್ತೊಂದು ಸ್ವರೂಪದ ಚುಟುಕು ಕ್ರಿಕೆಟ್ ಇಂಗ್ಲೆಂಡ್​ಗೆ ಹಾನಿ ಮಾಡುತ್ತಿದೆ. ಮುಂದಡಿ ಇಡುತ್ತಾ ಕೆಳಗಿಳಿಯುವುದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಹೊಸ ಮಂತ್ರ ಎಂಬಂತಾಗಿದೆ. ಈ ನೀತಿಯ ಪರಿಣಾಮ ಏನು ಎಂಬುದನ್ನು ಈ ಟೆಸ್ಟ್ ಸರಣಿಯಲ್ಲಿ ನೋಡಬಹುದು” ಎಂದು ಜೋ ರೂಟ್ ಅವರ ಅಜ್ಜ ಹೇಳಿದ್ಧಾರೆ.

  “ಇಂಗ್ಲೆಂಡ್​ನಲ್ಲಿ ಚುಟುಕು ಕ್ರಿಕೆಟ್​ಗೂ ಟೆಸ್ಟ್ ಕ್ರಿಕೆಟ್​ಗೂ ಸಮತೋಲನ ತಪ್ಪಿದೆ. ಪ್ರತಿಯೊಂದು ಕ್ರೀಡೆಗೂ ಹಣಕಾಸು ಬಲ ಬೇಕು ಎಂಬುದು ಹೌದಾದರೂ ಹಣಕಾಸು ಅಗತ್ಯಗಳು ಹಾಗೂ ಆಟದ ಮಟ್ಟದ ಮಧ್ಯೆ ಸಮತೋಲನ ಸರಿಯಾಗಿದೆಯಾ? ಟೆಸ್ಟ್ ಕ್ರಿಕೆಟ್ ವಿಚಾರಕ್ಕೆ ಬಂದರೆ ನನ್ನ ಪ್ರಕಾರ ಸಮತೋಲನ ತಪ್ಪಿದೆ ಎಂದನಿಸುತ್ತದೆ” ಎಂದು ಡಾನ್ ರೂಟ್ ಅಭಿಪ್ರಾಯಪಟ್ಟಿದ್ಧಾರೆ.

  ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

  ಭಾರತದ ಇಂಗ್ಲೆಂಡ್ ಟೆಸ್ಟ್ ಪ್ರವಾಸದಲ್ಲಿ ಆಡಲಾದ ನಾಲ್ಕು ಪಂದ್ಯಗಳ ಪೈಕಿ ಭಾರತ 2ರಲ್ಲಿ ಗೆದ್ದರೆ ಇಂಗ್ಲೆಂಡ್ ಒಂದರಲ್ಲಿ ಜಯಿಸಿದೆ. ಕೊನೆಯ ಪಂದ್ಯವನ್ನು ಭಾರತ ಆಡಲಿಲ್ಲ. ಹೀಗಾಗಿ, ಅದು ಅನಿರ್ದಿಷ್ಟಾವಧಿಯರೆಗೆ ಮುಂದೂಡಿಕೆಯಾಗಿದೆ. ಈ ಟೆಸ್ಟ್ ಸರಣಿಯಲ್ಲಿ ಬಹುತೇಕ ಸಂದರ್ಭದಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಭಾರತ ಸೋತ ಒಂದೇ ಪಂದ್ಯವೂ ಕೂಡ ಬ್ಯಾಟಿಂಗ್ ಆಯ್ಕೆಯಲ್ಲಿ ಭಾರತದ ತಪ್ಪು ಲೆಕ್ಕಾಚಾರ ಆತಿಥೇಯರ ಗೆಲುವಿಗೆ ಸೋಪಾನ ಹಾಕಿಕೊಟ್ಟಿತ್ತು.

  ಈ ಟೆಸ್ಟ್ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೆಲವೇ ಇಂಗ್ಲೆಂಡ್ ಆಟಗಾರರಲ್ಲಿ ಜೋ ರೂಟ್ ಒಬ್ಬರು. ಮೂರು ಶತಕಗಳನ್ನ ಒಳಗೊಂಡಂತೆ 94 ರನ್ ಸರಾಸರಿಯಂತೆ ಅವರು 564 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಶತಕ ಭಾರಿಸಿದ ಏಕೈಕ ಬ್ಯಾಟ್ಸ್​ಮನ್ ಅವರು. ಇಡೀ ಸರಣಿಯಲ್ಲಿ ಭಾರತದ ಪಾಲಿಗೆ ಮಗ್ಗುಲಮುಳ್ಳಾಗಿದ್ದ ಏಕೈಕ ಬ್ಯಾಟ್ಸ್​ಮನ್ ಅವರು. ಭಾರತದ ವಿರುದ್ಧವಷ್ಟೇ ಅಲ್ಲ ಈ ವರ್ಷ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟುಗಾರರ ಪಟ್ಟಿಯಲ್ಲಿ ಅವರೇ ಅಗ್ರಸ್ಥಾನಿಗರಾಗಿದ್ದಾರೆ. 12 ಟೆಸ್ಟ್ ಪಂದ್ಯಗಳಿಂದ ಅವರು 66.13 ರನ್ ಸರಾಸರಿಯಂತೆ 1455 ರನ್ ಗಳಿಸಿದ್ದಾರೆ.
  Published by:Vijayasarthy SN
  First published: