HOME » NEWS » Sports » CRICKET GOOGLE MARKS START OF UEFA EURO 2020 EUROPEAN FOOTBALL CHAMPION WITH COLOURFUL DOODLE HG

UEFA EURO 2020 ಆರಂಭಕ್ಕೆ ವಿಶೇಷ ಡೂಡಲ್​ ರಚಿಸಿ ಗೌರವ ಸೂಚಿಸಿದ ಗೂಗಲ್​!

Google Doodle: ಇತಿಹಾಸದಲ್ಲೇ ಮೊದಲ ಬಾರಿಗೆ 51 ಪಂದ್ಯಗಳು ಯುರೋಪಿನಾದ್ಯಂತ ಅತಿಥೇಯ ನಗರದಲ್ಲಿ ನಡೆಯಲಿದೆ. ಟರ್ಕಿ ಮತ್ತು ಇಟಲಿ ತಂಡದೊಂದಿಗೆ ಸ್ಟೇಡಿಯೊ ಒಲಿಂಪಿಕೊದಲ್ಲಿ ಪಂದ್ಯ ಪ್ರಾರಂಭವಾಗಲಿದೆ.

news18-kannada
Updated:June 11, 2021, 11:51 AM IST
UEFA EURO 2020 ಆರಂಭಕ್ಕೆ ವಿಶೇಷ ಡೂಡಲ್​ ರಚಿಸಿ ಗೌರವ ಸೂಚಿಸಿದ ಗೂಗಲ್​!
Doodle
  • Share this:
ಗೂಗಲ್​ ಪ್ರತಿ ಬಾರಿ ವಿಶೇಷ ದಿನವನ್ನು ಗುರುತಿಸಿ ತನ್ನ ಡೂಡಲ್​ನಲ್ಲಿ ಪ್ರಕಟಿಸುತ್ತದೆ ಮತ್ತು ಆ ಮೂಲಕ ಗೌರವ ಸೂಚಿಸುತ್ತದೆ. ಅದರಂತೆ ಇದೀಗ ಯುರೋಪಿಯನ್​ ಫುಟ್​ಬಾಲ್​ ಚಾಂಪಿಯನ್ 2020​ ಆರಂಭವನ್ನು ಗೂಗಲ್​ ಗುರುತಿಸುವ ಮೂಲಕ ವಿಶೇಷ ಡೂಡಲ್​ ರಚಿಸಿ ಪ್ರಕಟಿಸಿದೆ.

ಫುಟ್​ಬಾಲ್​ ಪ್ರಿಯರಿಗಾಗಿ 1960ರಿಂದ  ಈ ಟೂರ್ನಮೆಂಟ್​ ಆರಂಭವಾಯಿತು. ಈ ವರ್ಷ ಇತಿಹಾಸದಲ್ಲೇ ಮೊದಲ ಬಾರಿಗೆ 51 ಪಂದ್ಯಗಳು ಯುರೋಪಿನಾದ್ಯಂತ ಅತಿಥೇಯ ನಗರದಲ್ಲಿ ನಡೆಯಲಿದೆ. ಟರ್ಕಿ ಮತ್ತು ಇಟಲಿ ತಂಡದೊಂದಿಗೆ ಸ್ಟೇಡಿಯೊ ಒಲಿಂಪಿಕೊದಲ್ಲಿ ಪಂದ್ಯ ಪ್ರಾರಂಭವಾಗಲಿದೆ.

UEFA EURO 2020 ಪಂದ್ಯ 11 ಯೂನಿಯನ್​ ಯುರೋಪಿಯನ್​ ಫುಟ್​ಬಾಲ್​ ಅಸೋಸಿಯೇಶನ್​ ಗಳ ಜತೆಗೆ  11 ನಗರಗಳಲ್ಲಿ ನಡೆಯಲಿದೆ. ಜೂನ್​ 12 ರಿಂದ ಜುಲೈ 12ರವರೆಗೆ ಪಂದ್ಯ ನಡೆಯಲಿದೆ.

ಯುರೊ 2020 ಚಾಂಪಿಯನ್​​ ಶಿಪ್ ನಾಳೆಯಿಂದ ಪ್ರಾರಂಭವಾಗಲಿದೆ. ಈ ಬಾರಿ ಜರ್ಮನ್​ ಮತ್ತು ಸ್ಪೇನ್​ ಸ್ಪರ್ಧೆಯಲ್ಲಿ ಅಂತ್ಯಂತ ಯಶಸ್ವಿ ತಂಡಗಳಾಗಿದ್ದರೆ, ಹಾಲಿ ಚಾಂಪಿಯನ್​ ಪೋರ್ಚುಗಲ್​ ತಂಡದ ಜೊತೆಗೆ ಫ್ರಾನ್ಸ್​ ಕೂಡ ಅನೇಕರ ನೆಚ್ಚಿನ ತಂಡವಾಗಿದೆ. ಬೆಲ್ಜಿಯಂ ಮತ್ತು ಇಂಗ್ಲೆಂಡ್​ ತಂಡ ಯುರೋಪಿಯನ್​ ಚಾಂಪಿಯನ್​ಶಿಪ್​ ಪಡೆಯಲು ಪ್ರಬಲ ಸ್ಪರ್ಧಿಗಳಾಗಿ ಗುರಿತಿಸಿಕೊಂಡಿವೆ. ಅಂತೆಯೇ ಇಟಲಿ ಮತ್ತ ನೆದರ್​ಲ್ಯಾಂಡ್ ತಂಡವನ್ನು ‘ಡಾರ್ಕ್​ ಹಾರ್ಸ್​’ ಎಂದು ಕರೆಯುತ್ತಿದ್ದಾರೆ.

ಭಾರತದಲ್ಲೂ ಅನೇಕ ಫುಟ್​ಬಾಲ್ ಪ್ರಿಯರಿದ್ದಾರೆ. ಕೊರೊನಾದಿಂದಾಘಿ ಐಪಿಎಲ್​ ರದ್ದಾಯಿತು. ಐಪಿಎಲ್​ ವೀಕ್ಷಿಸುತ್ತಿದ್ದ ಜನರಿಗೆ ಕೊರೊನಾ ತಣ್ಣೀರೆರೆಚಿತು. ಆದರೀಗ ಜನರ ಕುತೂಹಲ UEFA EURO 2020 ಮೇಲೆ ಹುಟ್ಟಿಕೊಂಡಿದೆ.
Published by: Harshith AS
First published: June 11, 2021, 11:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories