Virat Kohli: ವಿರಾಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಅಭಿಮಾನಿಗಳ ಸಮ್ಮುಖದಲ್ಲಿ 100ನೇ ಟೆಸ್ಟ್ ಪಂದ್ಯ

Virat 100th Test Match: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮೂರುವರೆ ವರ್ಷಗಳ ಕಾಲ (42 ತಿಂಗಳು) ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಸತತ ನಂ.1 ಸ್ಥಾನ ಕಾಯ್ದುಕೊಳ್ಳುವ ಮೂಲಕ ರೆಡ್‌ ಬಾಲ್‌ ಕ್ರಿಕೆಟ್‌ನ ಸಾಮ್ರಾಟನಾಗಿ ಮೆರೆದಾಡಿತ್ತು. 2016ರ ಅಕ್ಟೋಬರ್ ‌ನಿಂದ 2020ರ ಮಾರ್ಚ್‌ ಆರಂಭದವರೆಗೆ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತ್ತು. 

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Share this:
  ಇಂಡಿಯಾದ ರನ್‌ ಮಷಿನ್‌ (Run Machine).. ಕ್ರೇಜ್ ಕಾ ಬಾಪ್ ವಿರಾಟ್‌ ಕೊಹ್ಲಿ (Virat Kohli) ಜನಕ್ಕೆ ಎಂಟ್ರಿ ಕೊಟ್ರೆ ಅಭಿಮಾನಿಗಳು (Fans) ಫುಲ್ ಖುಷ್.. ಟೆಸ್ಟ್ ಕ್ರಿಕೆಟ್ (Test Cricket) ಇಷ್ಟ ಪಡದವರಿಗೂ ಟೆಸ್ಟ್ ಕ್ರಿಕೆಟ್ ಇಷ್ಟ ಪಡುವಂತೆ ಮಾಡಿದ್ದು ಕಿಂಗ್ ಕೊಹ್ಲಿ (King Kohli).. ಇಂಥಹ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ, ತಮ್ಮ ವೃತ್ತಿ ಜೀವನದಲ್ಲಿ 100ನೇ ಟೆಸ್ಟ್ ಪಂದ್ಯ ಆಡುವ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಆದ್ರೆ ವಿರಾಟ್ ಕೊಹ್ಲಿ ಅವರ ಈ ಇತಿಹಾಸಿಕ (Historical) ಪಂದ್ಯವನ್ನ ಪ್ರೇಕ್ಷಕರಿಗೆ ಅವಕಾಶ ನೀಡದೆ ನಡೆಸಲು ಬಿಸಿಸಿಐ (BCCI) ತೀರ್ಮಾನ ಮಾಡಿತ್ತು.. ಇದರಿಂದ ಕೊಹ್ಲಿ 100ನೇ ಟೆಸ್ಟ್‌ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸದ ಬಿಸಿಸಿಐ ನಿರ್ಧಾರದ ಬಗ್ಗೆ ಅಭಿಮಾನಿಗಳು ಸೇರಿ ಕ್ರಿಕೆಟ್ ಆಟಗಾರರು ವಿರೋಧ ವ್ಯಕ್ತ ಪಡಿಸಿದ್ರು.. ಆದ್ರೆ ಈಗ ವಿರಾಟ್ ಅಭಿಮಾನಿಗಳಿಗೆ ಬಿಸಿಸಿಐ ಸಿಹಿ ಸುದ್ದಿ ನೀಡಿದೆ.

  ಕೊಹ್ಲಿ 100ನೇ ಟೆಸ್ಟ್ ಪಂದ್ಯಕ್ಕೆ ಸಿಕ್ತು ಅಭಿಮಾನಿಗಳಿಗೆ ಅವಕಾಶ

  ಅಭಿಮಾನಿಗಳು ವಿರಾಟ್​ ಕೊಹ್ಲಿ ಅವರ ಐತಿಹಾಸಿಕ 100ನೇ ಟೆಸ್ಟ್​ ಪಂದ್ಯವನ್ನು ಕಣ್ತುಂಬಿಕೊಳ್ಳಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ . ಈ ಟೆಸ್ಟ್​ ಪಂದ್ಯವನ್ನು ಸ್ಟೇಡಿಯಂನ ಶೇ. 50ರಷ್ಟು ಪ್ರೇಕ್ಷಕರ ಸಮ್ಮುಖದಲ್ಲಿ ಆಯೋಜಿಸಲಾಗುವುದು ಎಂದು ಪಂಜಾಬ್ ಕ್ರಿಕೆಟ್​ ಅಸೋಸಿಯೇಷನ್​ ಖಚಿತಪಡಿಸಿದೆ.

  ಇದನ್ನೂ ಓದಿ: ಕ್ರಿಕೆಟ್‌ ಚೆಂಡು ತಿನ್ನುತ್ತಾರಂತೆ ರೋಹಿತ್ ಶರ್ಮಾ! ಇದೇನು ‘ಹಿಟ್‌‘ ಮ್ಯಾನ್ ಅವಾಂತರ?

  ಇನ್ನು ನಾನು ನಿಜವಾಗಿಯೂ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್‌ ಪಂದ್ಯವನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದೇನೆ. ನಮ್ಮ ಚಾಂಪಿಯನ್ ಕ್ರಿಕೆಟಿಗನಿಗೆ ಈ ಸಂದರ್ಭದಲ್ಲಿ ನಾನು ಶುಭ ಹಾರೈಸುತ್ತೇನೆ. ಇದು ಅಭಿಮಾನಿಗಳಿಗೆ ಆನಂದಿಸುವ ಸಂದರ್ಭವಾಗಿದೆ.

  ವಿರಾಟ್ ಕೊಹ್ಲಿ ಮುಂದಿನ ಹಲವು ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸುತ್ತಾ ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರಿಸಲಿ" ಎಂದು ಜಯ್ ಶಾ ವಿರಾಟ್ ಕೊಹ್ಲಿಗೆ ಶುಭಹಾರೈಸಿದ್ದಾರೆ.

  ಬಿಸಿಸಿಐ ವಿರುದ್ಧ ಸಿಡಿದೆದ್ದಿದ್ದ ಕೊಹ್ಲಿ ಫ್ಯಾನ್ಸ್

  ಇನ್ನು ಈ ಮೊದಲು, ಬಿಸಿಸಿಐ ಈ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡಿರಲಿಲ್ಲ. ಇದಕ್ಕೆ ಕೊರೋನಾ ಸೋಂಕು ಮತ್ತು ಪಂಜಾಬ್ ಚುನಾವಣೆಯ ಮತಗಳ ಎಣಿಕೆ ಕಾರಣವೆಂದು ಉಲ್ಲೇಖಿಸಲಾಗಿತ್ತು. ಆದರೆ ಇದಕ್ಕೂ ಮೊದಲು, ಧರ್ಮಶಾಲಾದಲ್ಲಿ ನಡೆದ ಎರಡೂ ಟಿ20 ಮತ್ತು ನಂತರ ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ಗೆ ಪ್ರೇಕ್ಷಕರಿಗೆ ಬರಲು ಅವಕಾಶ ನೀಡಲಾಯಿತು.

  ಬಿಸಿಸಿಐನ ಈ ನಡೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ 100ನೇ ಟೆಸ್ಟ್ ಪಂದ್ಯವಾಡುತ್ತಿರುವ ಕೊಹ್ಲಿ ವಿಶೇಷ ಪಂದ್ಯವನ್ನು ಸ್ಟೇಡಿಯಂನಲ್ಲೇ ವೀಕ್ಷಿಸಲು ಅನುವು ಮಾಡಿಕೊಡಬೇಕೆಂದು ಸಾಮಾಜಿಕ ಜಾಲತಾಣಗಳ ಮೂಲಕ ಒತ್ತಾಯಿಸಲಾಗಿತ್ತು.

  ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಗೆ ಎಂಟ್ರಿಕೊಟ್ಟು ಮೂರು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡ್ರು. 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಮೈಕಾದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ಸರಣಿಗೆ ಸಚಿನ್ ತೆಂಡುಲ್ಕರ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.

  ಆದ್ರೆ ವಿರಾಟ್ ಮೂರು ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 76 ರನ್. ಹೀಗಾಗಿ ಮುಂದಿನ ಇಂಗ್ಲೆಂಡ್ ಸರಣಿಗೆ ಟೆಸ್ಟ್ ತಂಡದಿಂದ ಹೊರಬೀಳಬೇಕಾಯ್ತು. ತವರಿನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ವಿರಾಟ್ ಮತ್ತೆ ತಂಡದಲ್ಲಿ ಸ್ಥಾನ ಪಡೆದುಕೊಂಡ್ರು. ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದಿದ್ದ ಈ ಸರಣಿಯ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎರಡು ಇನಿಂಗ್ಸ್ ಗಳಲ್ಲೂ ಅರ್ಧಶತಕ ದಾಖಲಿಸಿದ್ದರು.

  99 ಪಂದ್ಯ...7962 ರನ್‌...

  ನಾಯಕನಾಗಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದ್ದರು.2014-15ರ ಋತುವಿನಲ್ಲಿ ಎಂಎಸ್ ಧೋನಿ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಹಠಾತ್ ಆಗಿ ರಾಜೀನಾಮೆ ನೀಡಿದ ಬಳಿಕ, ಆಸ್ಟ್ರೇಲಿಯಾ ಪ್ರವಾಸದ ಸರಣಿಯಲ್ಲಿಯೇ ಪೂರ್ಣ ಪ್ರಮಾಣದ ಟೆಸ್ಟ್ ತಂಡದ ನಾಯಕರಾಗಿ ನೇಮಕವಾಗಿದ್ದ ವಿರಾಟ್ ಕೊಹ್ಲಿ, ಈವರೆಗೂ ಅಡಿದ 68 ಪಂದ್ಯಗಳಿಂದ 40 ಗೆಲುವು ದಾಖಲಿಸಿದ ಶ್ರೇಯ ಹೊಂದಿದ್ದಾರೆ.

  ಆ ಮೂಲಕ ಗೆಲುವುಗಳ ಲೆಕ್ಕಾಚಾರದಲ್ಲಿ ಭಾರತೀಯ ಕ್ರಿಕೆಟ್ ನ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನ್ನುವ ಶ್ರೇಯ ಇವರದಾಗಿದೆ.  ವಿದೇಶಿ ಮತ್ತು ತವರಿನಲ್ಲಿ ಟೀಮ್ ಇಂಡಿಯಾ ಅಪ್ರತಿಮ ಸಾಧನೆ ಮಾಡಿತ್ತು.

  ಅಷ್ಟೇ ಅಲ್ಲ, ವಿರಾಟ್ ಸಾರಥ್ಯದಲ್ಲಿ ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗವನ್ನು ಬಲಪಡಿಸಿದ್ದರು. .ಇನ್ನು 2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ವಿರಾಟ್ 99 ಪಂದ್ಯಗಳಿಂದ 7962 ರನ್‌ಗಳನ್ನು ಗಳಿಸಿದ್ದಾರೆ.

  ಕೊಹ್ಲಿ ನಾಯಕತ್ವದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿಸಿದ್ದ
  ಟೀಂ ಇಂಡಿಯಾ

  ಇನ್ನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮೂರುವರೆ ವರ್ಷಗಳ ಕಾಲ(42 ತಿಂಗಳು) ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಸತತ ನಂ.1 ಸ್ಥಾನ ಕಾಯ್ದುಕೊಳ್ಳುವ ಮೂಲಕ ರೆಡ್‌ ಬಾಲ್‌ ಕ್ರಿಕೆಟ್‌ನ ಸಾಮ್ರಾಟನಾಗಿ ಮೆರೆದಾಡಿತ್ತು. 2016ರ ಅಕ್ಟೋಬರ್‌ನಿಂದ 2020ರ ಮಾರ್ಚ್‌ ಆರಂಭದವರೆಗೆ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತ್ತು.

  ಇದನ್ನೂ ಓದಿ: WWE ರೋಚಕ ಕದನ; ವಿಶ್ವದ ಭಯಾನಕ ಮನುಷ್ಯ ಮಾರ್ಟಿನ್ ಫೋರ್ಡ್ vs The Rock ಮುಖಾಮುಖಿ ಹೋರಾಟ!

  ಇದುವರೆಗೂ 100 ಟೆಸ್ಟ್ ಪಂದ್ಯ ಆಡಿದ ಭಾರತೀಯರು

  ಮೊಹಾಲಿಯಲ್ಲಿ ನಡೆಯುವ ಟೆಸ್ಟ್ ಪಂದ್ಯದ ಮೂಲಕ 100 ಟೆಸ್ಟ್‌ಗಳನ್ನು ಆಡಿದ 11 ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ಸಚಿನ್ ತೆಂಡೂಲ್ಕರ್ (200), ರಾಹುಲ್ ದ್ರಾವಿಡ್ (163), ವಿವಿಎಸ್ ಲಕ್ಷ್ಮಣ್ (134), ಅನಿಲ್ ಕುಂಬ್ಳೆ (132), ಕಪಿಲ್ ದೇವ್ (131), ಸುನಿಲ್ ಗವಾಸ್ಕರ್ (125),,ದಿಲೀಪ್ ವೆಂಗ್‌ಸರ್ಕರ್ (116), ಸೌರವ್ ಗಂಗೂಲಿ (113), ಇಶಾಂತ್ ಶರ್ಮಾ (105), ಹರ್ಭಜನ್ ಸಿಂಗ್ (103), ಮತ್ತು ವೀರೇಂದ್ರ ಸೆಹ್ವಾಗ್ (103) ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
  Published by:ranjumbkgowda1 ranjumbkgowda1
  First published: