ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ನಡೆಯುತ್ತಾ ಅಥವಾ ಇಲ್ಲವಾ ಎಂಬಂಥ ಗೊಂದಲ ಆಟಗಾರರಲ್ಲಿ ಹಾಗೂ ಕ್ರಿಕೆಟ್ ಅಭಿಮಾನಿಗಳಲ್ಲಿ ದಿನ ಕಳೆದಂತೆ ಹೆಚ್ಚಾಗುತ್ತದೆ. ಕೊರೋನಾ ನಡುವೆ ದೇಶದಲ್ಲಿ ಐಪಿಎಲ್ ನಡೆಯಲಿದೆಯಾ? ಈ ಪ್ರಶ್ನೆಗೆ ಇನ್ನೂ ಕೂಡ ಸ್ಷಷ್ಟ ಉತ್ತರ ದೊರಕಿಲ್ಲ. ಆದರೆ ಐಪಿಎಲ್ ಅನ್ನು ಆಯೋಜಿಸುವುದಂತು ಖಂಡಿತ ಎಂದು ಈಗಾಗಲೇ ಬಿಸಿಸಿಐ ಹೇಳಿಕೆ ನೀಡಿದೆ.
ಬಿಸಿಸಿಐ ಕೂಡ ಇದೀಗ ಟೂರ್ನಿ ಆಯೋಜಿಸಲು ಒಂದೊಂದೇ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಹೀಗಿರುವಾಗಲೇ ಈ ವರ್ಷ ನಡೆಯಬೇಕಿರುವ ಐಸಿಸಿ ಟಿ-20 ವಿಶ್ವಕಪ್ ಮೂಂದೂಡಿಕೆ ಖಚಿತವಾಗಿದೆ. ಅಧಿಕೃತ ಘೋಷಣೆಯಷ್ಟೆ ಬಾಕಿಯಿದೆ ಎಂದು ತಿಳಿದುಬಂದಿದೆ. ಹೀಗಾಗಿ ಐಪಿಎಲ್ ಹಾದಿ ಸುಗಮವಾಗಿದೆ.
Sachin Tendulkar: ಕ್ರಿಕೆಟ್ ದೇವರು ಎನಿಸಿಕೊಂಡ ಸಚಿನ್ಗೆ ಮೈದಾನದಲ್ಲಿ ಕಾಡುತ್ತಿತ್ತು ಈ ವೀಕ್ನೆಸ್!
ಆದರೆ, ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಹಾವಳಿ ಏರುತ್ತಲೇ ಇದೆ. ಈ ಕಾರಣಕ್ಕೆ ಈ ಬಾರಿಯ ಐಪಿಎಲ್ ಅನ್ನು ಯುಎಇ ಅಥವಾ ಶ್ರೀಲಂಕಾದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೆ ಟಿ-20 ವಿಶ್ವಕಪ್ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಟೆಲಿ-ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಗಿತ್ತು. ಆದರೆ, ಯಾವುದೇ ನಿರ್ಧಾರ ಕೈಗೊಳ್ಳದೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಐಸಿಸಿ ನಿರ್ಧರಿತ್ತು.
ಇನ್ನೂ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ-20 ವಿಶ್ವಕಪ್ 2022ಕ್ಕೆ ಮುಂದೂಡಲ್ಪಡಲಿದೆ. ಮುಂದಿನ ವರ್ಷ ಭಾರತ ಟಿ-20 ವಿಶ್ವಕಪ್ಗೆ ಆತಿಥ್ಯ ವಹಿಸಲಿದೆ. ಇಲ್ಲಿ ಲಭಿಸಿದ ಅವಕಾಶದಲ್ಲಿ ಐಪಿಎಲ್ ಪಂದ್ಯಾ ವಳಿಯನ್ನು ಆಡಿಸುವುದು ಬಿಸಿಸಿಐ ಯೋಜನೆ.
ಹೀನಾಯವಾಗಿ ಸೋತ ಬಳಿಕ ಭಾರತೀಯ ಆಟಗಾರರು ನಮ್ಮಲ್ಲಿ ಕ್ಷಮೆ ಕೇಳಿದ್ದರು: ಅಫ್ರಿದಿ ಶಾಕಿಂಗ್ ಹೇಳಿಕೆ
ಈ ನಡುವೆ ವಿಶ್ವಕಪ್ ಆಯೋಜನೆಯ ಬಗ್ಗೆ ಐಸಿಸಿ ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡುತ್ತಿದೆ. ವಿಶ್ವಕಪ್ ಆಯೋಜನೆ ಮಾಡುವ ನಿರ್ಧಾರದ ಬಗ್ಗೆ ಐಸಿಸಿ ಅಂತಿಮ ನಿಲುವನ್ನು ಹಂಚಿಕೊಳ್ಳದಿರುವುದು ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಐಸಿಸಿ ನಿರ್ಧಾರಕ್ಕೆ ಕಾಯದೆ ಮುಂದುವರಿಯಲು ಬಿಸಿಸಿಐ ಮುಂದಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ