ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ; ಭಾರತ-ಆಫ್ರಿಕಾ ನಡುವೆ ಟಿ-20 ಸರಣಿ; ಎಲ್ಲಿ?, ಯಾವಾಗ; ಇಲ್ಲಿದೆ ಮಾಹಿತಿ

ಈ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸಂಸ್ಥೆಯ ನಿರ್ದೇಶಕ ಗ್ರೇಮ್‌ ಸ್ಮಿತ್‌ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಚರ್ಚೆ ನಡೆಸಿದ್ದಾರೆ. ಅಂತಿಮ ತೀರ್ಮಾನ ಆಗಸ್ಟ್​ ತಿಂಗಳ ಹೊತ್ತಿಗೆ ಹೊರಬೀಳಲಿದೆ.

ವಿರಾಟ್ ಕೊಹ್ಲಿ ಮತ್ತು ಕ್ವಿಂಟನ್ ಡಿಕಾಕ್.

ವಿರಾಟ್ ಕೊಹ್ಲಿ ಮತ್ತು ಕ್ವಿಂಟನ್ ಡಿಕಾಕ್.

 • Share this:
  ವಿಶ್ವದಲ್ಲಿ ಮಾರಕ ಕೊರೋನಾ ವೈರಸ್ ಕೊಂಚ ನಿಯಂತ್ರಣಕ್ಕೆ ಬರುತ್ತಿದೆ. ಭಾರತದಲ್ಲಿ ಲಾಕ್​ಡೌನ್ ಸಡಿಗೊಳಿಸಲಾಗಿದ್ದು ಒಂದೊಂದೆ ಚಟುವಟಿಕೆಗಳು ಪ್ರಾರಂಭವಾಗುತ್ತಿದೆ. ಅದರಂತೆ ಲಾಕ್​ಡೌನ್​ ನಾಲ್ಕರಲ್ಲಿ ಕ್ರಿಕೆಟ್ ಸ್ಟೇಡಿಯಂ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಆಟಗಾರರು ಮಾಸ್ಕ್ ಹಾಕಿಕೊಂಡು ಮೈದಾನಕ್ಕಿಳಿಯಬೇಕು, ಹೆಚ್ಚು ಜನ ಸೇರಿವಂತಿಲ್ಲ ಎಂಬ ನಿಯಮಾವಳಿ ಇದೆ.

  ಈ ಬೆಳವಣಿಗೆ ಬೆನ್ನಲ್ಲೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಟಿ-20 ಸರಣಿ ಆಯೋಜನೆಗೆ ಒಪ್ಪಂದವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಒಪ್ಪಿಗೆ ಸೂಚಿಸಿರುವುದಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಸಿಇಒ ಜಾಕ್ಸ್ ಫಾಲ್ ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ ಸರ್ಕಾರದ ಅನುಮತಿಯನ್ನು ಪಡೆಯಲು ಕಾಯಲಾಗುತ್ತಿದೆ.

  ಡೈನೋಸಾರ್ ಆದ್ರು ವಿರಾಟ್​ ಕೊಹ್ಲಿ; ಅನುಷ್ಕಾಶರ್ಮಾಗೆ ಬಂತು ಲೀಗಲ್ ನೋಟಿಸ್!

  ಕಳೆದ ಮಾರ್ಚ್​​ನಲ್ಲಿ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯವನ್ನು ಬಿಸಿಸಿಐ ಕೊರೋನಾ ವೈರಸ್​ನಿಂದಾಗಿ ರದ್ದುಗೊಳಿಸಿತ್ತು. ಸದ್ಯ 3 ಪಂದ್ಯಗಳ ಸರಣಿ ಆಗಸ್ಟ್‌ ಅಂತ್ಯಕ್ಕೆ ನಡೆಯುವ ಸಾಧ್ಯತೆ ಇದೆ. ಆದರೆ, ಏಕದಿನ ಸರಣಿಗೆ ಬದಲು ಟಿ-20 ಸರಣಿ ನಡೆಯುವ ನಿರೀಕ್ಷೆ ಇದೆ.

  ಈ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸಂಸ್ಥೆಯ ನಿರ್ದೇಶಕ ಗ್ರೇಮ್‌ ಸ್ಮಿತ್‌ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಚರ್ಚೆ ನಡೆಸಿದ್ದಾರೆ. ಅಂತಿಮ ತೀರ್ಮಾನ ಆಗಸ್ಟ್​ ತಿಂಗಳ ಹೊತ್ತಿಗೆ ಹೊರಬೀಳಲಿದೆ. ಈ ಸರಣಿಯನ್ನ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಸಬೇಕೋ ಅಥವಾ ಪ್ರೇಕ್ಷಕರಿದ್ದು ನಡೆಸಬೇಕೋ ಎಂಬ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದೆ.

  ಇನ್ನೂ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಯೋಜನೆಗಳನ್ನು ಹಿಡಿದಿಟ್ಟುಕೊಳ್ಳಲಾಗಿದೆ ಎಂದು ಬೋರ್ಡ್ ಆಫ್‌ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಅಧ್ಯಕ್ಷ ರಾಹುಲ್ ಜೋಹ್ರಿ ಹೇಳಿದ್ದಾರೆ.

  ಸೆಹ್ವಾಗ್‌ ದಾಖಲೆ ಮುರಿಯುವುದು ಯುವರಾಜ್ ಸಿಂಗ್ ಗುರಿಯಾಗಿತ್ತು..!

  ಆಡಲು ಬಂದ ಆಟಗಾರರು ಪ್ರ್ಯಾಕ್ಟೀಸ್ ಕೂಡ ಬದಿಗಿಟ್ಟು 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಇಲ್ಲಿ ಬದಲಾವಣೆಗೆ ಸಾಕಷ್ಟು ಸಾಧ್ಯತೆಗಳಿರುತ್ತವೆ. ಆದರೆ ನಮಗಿನ್ನೂ ಆಶಾಭಾವನೆಯಿದೆ. ಮಳೆಗಾಲದ ಬಳಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬ ನಿರೀಕ್ಷೆ ನಮ್ಮದು ಎಂದು ಜೋಹ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  First published: