Akash Chopra on Virat Kohli: ಏಕದಿನ ನಾಯಕತ್ವಕ್ಕೂ ವಿರಾಟ್ ಗುಡ್‌ ಬೈ?: ಕಿಂಗ್ ಕೊಹ್ಲಿ ಬಗ್ಗೆ ಆಕಾಶ್ ಚೋಪ್ರಾ ಹೇಳಿದ್ದೇನು?

T20ಯಲ್ಲಿ ಆಡಿದ ಏಳರಿಂದ ಒಂಬತ್ತು ಮಂದಿ ಏಕದಿನ ಪಂದ್ಯದಲ್ಲಿ ಇರುತ್ತಾರೆ. ಹೀಗಾಗಿ ಎರಡು ಶೈಲಿಯ ಪಂದ್ಯಕ್ಕೂ ಒಬ್ಬರೇ ನಾಯಕ ಇದ್ದರೆ ಉತ್ತಮ. ಹೀಗಾಗಿ ವಿರಾಟ್ ಕೊಹ್ಲಿ ದೀರ್ಘಾವಧಿ ದೃಷ್ಟಿಯಲ್ಲಿ ತಂಡದ ನಾಯಕರಾಗಿ ಉಳಿಯುವುದಿಲ್ಲ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.

ಆಕಾಶ ಚೋಪ್ರ.

ಆಕಾಶ ಚೋಪ್ರ.

 • Share this:
  ವಿರಾಟ್ ಕೊಹ್ಲಿ (Virat Kohli) ಭಾರತೀಯ ಟಿ 20 (India T20 Team) ತಂಡದ ನಾಯಕತ್ವ ತೊರೆಯಲು ನಿರ್ಧರಿಸಿ ದ್ದಾರೆ. ಮುಂದಿನ ತಿಂಗಳು ಯುಎಇ (UAE) ಮತ್ತು ಓಮಾನ್ (Oman) ನಲ್ಲಿ ನಡೆಯಲಿರುವ ಐಸಿಸಿ T20 ವಿಶ್ವಕಪ್ ನಂತರ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಟಿ-ಟ್ವೆಂಟಿ ನಾಯಕತ್ವ ತ್ಯಜಿಸುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಸ್ವತಹ ಟ್ವೀಟ್ ಮಾಡಿದ್ದ ಕೊಹ್ಲಿ, ಇದು ನಿಸ್ವಾರ್ಥದ ನಿರ್ಧಾರ ಅಂತ ಹೇಳಿದ್ರು. ಈ ಸುದ್ದಿ ಕ್ರೀಡಾಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತು. ಯಾಕಾಗಿ ಈ ದಿಢೀರ್ ನಿರ್ಧಾರ ಕೈಗೊಂಡಿದ್ದಾರೆ ಎಂದು ಕೊಹ್ಲಿ ಅಭಿಮಾನಿಗಳು ಕಂಗಾಲಾಗಿದ್ದರು. ಇದೀಗ T-20 ನಾಯಕತ್ವ ದಿಂದ ಕೆಳಗಿಳಿದ ನಂತರ ವಿರಾಟ್ ಕೊಹ್ಲಿ, ಮುಂದೆ ಏಕದಿನ ನಾಯಕತ್ವಕ್ಕೂ ಗುಡ್ ಬೈ ಹೇಳ್ತಾರಾ? ಅನ್ನೋ ಪ್ರಶ್ನೆ ಮೂಡಿದೆ. ದೀರ್ಘಾವಧಿಯ ದೃಷ್ಟಿಯಲ್ಲಿ, ವಿರಾಟ್ ಕೊಹ್ಲಿ ಏಕದಿನ (Odi Team) ನಾಯಕನಾಗಿ ಉಳಿಯುವುದಿಲ್ಲ ಅಂತ ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ (Akash Chopra) ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ವಿರಾಟ್ ಕೊಹ್ಲಿಯನ್ನು ಏಕದಿನ ಮತ್ತು ಟೆಸ್ಟ್ ನಾಯಕನಾಗಿ ಮತ್ತು ರೋಹಿತ್ ಶರ್ಮಾ ಟಿ 20 ನಾಯಕನಾಗಿ ಬಳಸುವ ಪ್ಲ್ಯಾನ್ ವರ್ಕೌಟ್ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಬ್ಬ ಆಟಗಾರ ಏಕದಿನ ಮತ್ತು ಟಿ-20 ತಂಡಗಳನ್ನು ಮುನ್ನಡೆಸಿದ್ದರೇ Split Captaincy ಅತ್ಯುತ್ತಮವಾಗಿ ಕಾರ್ಯ ನಿರ್ವಹಿ ಸುತ್ತದೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ. T-20 ಹಾಗೂ ಏಕದಿನ ಪಂದ್ಯ ಎರಡಕ್ಕೂ ಒಬ್ಬರೇ ನಾಯಕರಾಗಿದ್ದರೆ ಪಂದ್ಯ ಗೆಲ್ಲುವುದು ಸುಲಭ. ಎರಡು ಶೈಲಿಯ ಪಂದ್ಯದಲ್ಲೂ ವೈಟ್ ಬಾಲ್ ಬಳಸುವುದರಿಂದ ಎರಡಕ್ಕೂ ಒಬ್ಬರೇ ಕ್ಯಾಪ್ಟನ್ ಆದ್ರೆ ಉತ್ತಮ ಎಂಬ ಅಭಿಪ್ರಾಯ ತಿಳಿಸಿದ್ದಾರೆ.

  ಇನ್ನು ಟೆಸ್ಟ್ ನಲ್ಲಿ ಕೆಂಪು ಬಣ್ಣದ ಬಾಲ್ ಬಳಸಲಾಗುತ್ತದೆ. ಹೀಗಾಗಿ ಟೆಸ್ಟ್ ಗೆ ಒಬ್ಬ ನಾಯಕ, T - 20 ಹಾಗೂ ಏಕದಿನ ಪಂದ್ಯಕ್ಕೆ ಒಬ್ಬ ನಾಯಕನಿದ್ದರೆ ಉತ್ತಮ. ಆದರೆ ಟೆಸ್ಟ್ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಮುಂದುವರೆಯುತ್ತಾರೆ ಎಂಬುವುದನ್ನು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಿಳಿಸಿದ್ದಾರೆ.

  "ಏಕದಿನ ಹಾಗೂ ಟಿ-ಟ್ವೆಂಟಿ ಪಂದ್ಯಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ, ಎರಡು ಶೈಲಿಯ ಪಂದ್ಯದಲ್ಲೂ ತಂಡದ ಆಟಗಾರರು ಒಂದೇ ಪ್ಲ್ಯಾನ್ ನಲ್ಲಿ ಆಡುತ್ತಿರುತ್ತಾರೆ. T-20ಯಲ್ಲಿ ಮಾಡುವ ಗೇಮ್ ಪ್ಲ್ಯಾನ್, ಏಕದಿನ ಪಂದ್ಯದಲ್ಲಿ ಹೆಚ್ಚಿನ ಸಮಯದವರೆಗೂ ಮುಂದುವ ರಿಸಬೇಕಾಗುತ್ತದೆ. ಟಿ-ಟ್ವೆಂಟಿಯಲ್ಲಿ ಆಡುವ ಬಹುತೇಕ ಆಟಗಾರರು ಏಕದಿನ ತಂಡದಲ್ಲೂ ಇರುತ್ತಾರೆ.

  ಇದನ್ನೂ ಓದಿ: IPL 2021| ದ್ವಿತಿಯಾರ್ಧದಲ್ಲಿ ರಾಜಸ್ತಾನ ರಾಯಲ್ಸ್​ ತಂಡ ಮತ್ತೆ ಗೆಲುವಿನ ಲಯಕ್ಕೆ ಮರಳಲಿದೆ; ತಬ್ರೇಜ್ ಶಮ್ಸಿ

  ಅದರಲ್ಲೂ ಭಾರತ ತಂಡದಲ್ಲಿ ಟಿ-ಟ್ವೆಂಟಿಯಲ್ಲಿ ಆಡಿದ ಏಳರಿಂದ ಒಂಬತ್ತು ಮಂದಿ ಏಕದಿನ ಪಂದ್ಯದಲ್ಲಿ ಇರುತ್ತಾರೆ. ಹೀಗಾಗಿ ಎರಡು ಶೈಲಿಯ ಪಂದ್ಯಕ್ಕೂ ಒಬ್ಬರೇ ನಾಯಕ ಇದ್ದರೆ ಉತ್ತಮ. ಹೀಗಾಗಿ ವಿರಾಟ್ ಕೊಹ್ಲಿ ದೀರ್ಘಾವಧಿ ದೃಷ್ಟಿಯಲ್ಲಿ ತಂಡದ ನಾಯಕರಾಗಿ ಉಳಿಯುತ್ತಾರೆ ಅಂತ ನನಗೆ ಅನ್ನಿಸುವುದಿಲ್ಲ" ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.

  ಇದನ್ನೂ ಓದಿ: Chetana kohli: ಯಾರಿದು ಚೇತನಾ ಕೊಹ್ಲಿ? ಕೊಹ್ಲಿ ಫ್ಯಾಮಿಲಿಗೆ ಏನು ಸಂಬಂಧ? ಇಲ್ಲಿದೆ ಮಾಹಿತಿ

  ಇತ್ತ ವಿರಾಟ್ ಕೊಹ್ಲಿ ಭಾರತ ಏಕದಿನ ತಂಡದ ಉಪನಾಯಕನ ಸ್ಥಾನದಿಂದ ರೋಹಿತ್‌ ಶರ್ಮಾ ಅವರನ್ನು ಕೈಬಿಡುವಂತೆ ಬಿಸಿಸಿಐ ಆಯ್ಕೆ ಸಮಿತಿ ಮುಂದ ಪ್ರಸ್ತಾಪವಿರಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.. ಹಿಟ್ ಮ್ಯಾನ್( Hit Man) ರೋಹಿತ್‌ ಬದಲು ಕನ್ನಡಿಗ ಕೆ.ಎಲ್‌.ರಾಹುಲ್‌ರನ್ನು ಉಪನಾಯಕ ನನ್ನಾಗಿ ನೇಮಿಸಬೇಕು ಎಂದು ಕೊಹ್ಲಿ ಕೇಳಿದ್ದಾರೆ ಎನ್ನಲಾಗಿದೆ.

  (ವರದಿ: ವಾಸುದೇವ ಎಂ)
  Published by:MAshok Kumar
  First published: