• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • ಘಟನೆ ಕಳೆದು ಹೋಗಿರಬಹುದು, ಮರೆಯಲು ಸಾಧ್ಯವಿಲ್ಲ; 26/11 ಹುತಾತ್ಮರನ್ನು ಸ್ಮರಿಸಿದ ಕೊಹ್ಲಿ!

ಘಟನೆ ಕಳೆದು ಹೋಗಿರಬಹುದು, ಮರೆಯಲು ಸಾಧ್ಯವಿಲ್ಲ; 26/11 ಹುತಾತ್ಮರನ್ನು ಸ್ಮರಿಸಿದ ಕೊಹ್ಲಿ!

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

11 ವರ್ಷಗಳ ಹಿಂದೆ ನಡೆದ ಈ ದಾಳಿಯನ್ನು ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಎಂದು ಪರಿಗಣಿಸಲಾಗಿದೆ. ಮುಂಬೈ ನಗರಯನ್ನು ಭಯೋತ್ಪಾದಕರು ಎರಡು ದಿನಗಳ ಕಾಲ ಅಕ್ಷರಶಃ ಹಿಡಿತಕ್ಕೆ ತೆಗೆದುಕೊಂಡಿದ್ದರು.

 • Share this:

  ಬೆಂಗಳೂರು (ನ. 26): ಅದು 26 ನವೆಂಬರ್ 2008. ಭಾರತದ ಪಾಲಿಗೆ ಕರಾಳ ದಿನ. ಪಾಕಿಸ್ತಾನದ ಹತ್ತು ಉಗ್ರರು ಸಮುದ್ರ ಮಾರ್ಗದ ಮೂಲಕ ಭಾರತ ದೇಶದೊಳಗೆ ನುಸುಳಿದ್ದರು. ವಾಣಿಜ್ಯ ನಗರಿ ಮುಂಬೈಯ 7 ಕಡೆ ದಾಳಿ ನಡೆಸಿ, ಸುಮಾರು 166 ಜನರನ್ನು ಬಲಿ ತೆಗೆದು ರೌದ್ರನರ್ತನ ಮೆರೆದಿದ್ದರು. ಉಗ್ರರ ಆರ್ಭಟವನ್ನು ಕೆಚ್ಚೆದೆಯಿಂದ ಎದುರಿಸಿದ ಅನೇಕ ಭದ್ರತಾ ಸಿಬ್ಬಂದಿಗಳು ಹುತಾತ್ಮರಾದರು.

  ಇನ್ನು ಹಲವರು ಗಾಯಗೊಂಡರು. ಅನೀರಿಕ್ಷಿತವಾಗಿ ಭಾರತದ ಮೇಲಾದ ಈ ಗಾಯಕ್ಕೆ ಇಂದಿಗೆ 11 ವರ್ಷ. ಎಲ್ಲೆಡೆಯಿಂದ ಭದ್ರತಾ ಸಿಬ್ಬಂದಿಗಳ ಶೌರ್ಯಕ್ಕೆ ಗೌರವ ಸಲ್ಲಿಸಲಾಗುತ್ತಿದೆ.

  IPL2020: ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಸೇಲ್ ಆದ ಟಾಪ್ 5 ಆಟಗಾರರು ಯಾರು ಗೊತ್ತಾ?

  ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಇತರೆ ಆಟಗಾರರು ಮುಂಬೈ ದಾಳಿಯ ಕರಾಳ ದಿನವನ್ನು ನೆನಪಿಸಿ ದಾಳಿಯಲ್ಲಿ ಮಡಿದ ಹುತಾತ್ಮರನ್ನು ಸ್ಮರಿಸಿದ್ದಾರೆ.

  ಕೊಹ್ಲಿ ಅವರು ತಮ್ಮ ಸಂದೇಶದಲ್ಲಿ, "26/11 ಘಟನೆ ಕಳೆದು ಹೋಗಿರಬಹುದು. ಆದರೆ ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ಟ್ವೀಟ್ ಮಾಡಿ ಹುತಾತ್ಮರಿಗೆ ಶ್ರದ್ದಾಂಜಲಿ ಅರ್ಪಿಸಿದ್ದಾರೆ.

     ಉಳಿದ ಐಪಿಎಲ್ ತಂಡದಲ್ಲಿ ಊರಿನ ಹೆಸರಿದೆ, ಆರ್​ಸಿಬಿ ತಂಡದಲ್ಲಿ ಯಾಕಿಲ್ಲ?; ನಿಲ್ಲದ ಅಭಿಮಾನಿಗಳ ಕಿಚ್ಚು!

  11 ವರ್ಷಗಳ ಹಿಂದೆ ನಡೆದ ಈ ದಾಳಿಯನ್ನು ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಎಂದು ಪರಿಗಣಿಸಲಾಗಿದೆ. ಮುಂಬೈ ನಗರಯನ್ನು ಭಯೋತ್ಪಾದಕರು ಎರಡು ದಿನಗಳ ಕಾಲ ಅಕ್ಷರಶಃ ಹಿಡಿತಕ್ಕೆ ತೆಗೆದುಕೊಂಡಿದ್ದರು.

  ಸಾರ್ವಜನಿಕ ಸ್ಥಳ ಮತ್ತು ತಾಜ್​ ಹೋಟೆಲ್ ಕೇಂದ್ರವಾಗಿಸಿ ದಾಳಿ ನಡೆಸಿದ್ದಉಗ್ರರ ಅಟ್ಟಹಾಸಕ್ಕೆ ಸುಮಾರು 166 ಮಂದಿ ಅಸುನೀಗಿದ್ದರು. ಅಲ್ಲದೆ 300 ಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದರು.

   

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು