Neeraj Chopra ಡ್ಯಾನ್ಸಿಂಗ್ ಮೂವ್ಸ್ ಗೆ ಫ್ಯಾನ್ಸ್ ಫುಲ್ ಖುಷ್ - ಮದುವೆ ಮೆರವಣಿಗೆಯಿಂದ ಪಾರ್ಟಿ ಡ್ಯಾನ್ಸ್ ವಿಡಿಯೋ ವೈರಲ್

Neeraj Chopra Video Viral: ಈಗ ಖಾಸಗಿ ವಾಹಿನಿಗಳು ತಮ್ಮ ರಿಯಾಲಿಟಿ ಶೋಗಳಿಗೆ ನೀರಜ್ ಚೋಪ್ರಾ ಸೇರಿದಂತೆ ಒಲಿಂಪಿಕ್ಸ್ ಆಟಗಾರರನ್ನು ವಿಶೇಷ ಅತಿಥಿಗಳನ್ನಾಗಿ ಅಹ್ವಾನಿಸುತ್ತಿವೆ. ಇತ್ತೀಚೆಗೆ ಡ್ಯಾನ್ಸಿಂಗ್ ರಿಯಾಲಿಟಿ ಶೋದಲ್ಲಿ ಭಾಗಿಯಾಗಿದ್ದ ನೀರಜ್ ಚೋಪ್ರಾ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸಳೆದಿದ್ದಾರೆ.

Neeraj Chopra-Remo Dsouza

Neeraj Chopra-Remo Dsouza

  • Share this:
    ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ವರ್ಣ ಗೆದ್ದ ನೀರಜ್ ಚೋಪ್ರಾ ಇತಿಹಾಸ ಬರೆಯುವ ಮೂಲಕ ಭಾರತೀಯರು ಹೆಮ್ಮೆಪಡುವಂತೆ ಮಾಡಿದ್ದಾರೆ. ಜಾವೆಲಿನ್ ಥ್ರೋ ಕಿಲಾಡಿ ನೀರಜ್ ಚೋಪ್ರಾರನ್ನ ಸರ್ಕಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸನ್ಮಾನಿಸಿ ಗೌರವ ಸಲ್ಲಿಸುತ್ತಿವೆ. ಈಗ ಖಾಸಗಿ ವಾಹಿನಿಗಳು ತಮ್ಮ ರಿಯಾಲಿಟಿ ಶೋಗಳಿಗೆ ನೀರಜ್ ಚೋಪ್ರಾ ಸೇರಿದಂತೆ ಒಲಿಂಪಿಕ್ಸ್ ಆಟಗಾರರನ್ನು ವಿಶೇಷ ಅತಿಥಿಗಳನ್ನಾಗಿ ಅಹ್ವಾನಿಸುತ್ತಿವೆ. ಇತ್ತೀಚೆಗೆ ಡ್ಯಾನ್ಸಿಂಗ್ ರಿಯಾಲಿಟಿ ಶೋದಲ್ಲಿ ಭಾಗಿಯಾಗಿದ್ದ ನೀರಜ್ ಚೋಪ್ರಾ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸಳೆದಿದ್ದಾರೆ.

    ರಾಘವ್ ಜೊತೆ ಬಿಂದಾಸ್ ಡ್ಯಾನ್ಸ್:

    ಡ್ಯಾನ್ಸಿಂಗ್ ಶೋನ ನಿರೂಪಕ ಡ್ಯಾನ್ಸರ್ ರಾಘವ್ ಜುಯಾಲ್ ಜೊತೆ ನೀರಜ್ ವಿವಿಧ ಫಾರ್ಮ್ ಗಳಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ವೇದಿಕೆ ಮೇಲೆ ಚಿನ್ನದ ಪದಕ ಗೆದ್ದಾಗ ಮಾಡುವ ಡ್ಯಾನ್ಸ್ ಸೇರಿದಂತೆ ಮದುವೆ ಮೆರವಣಿಗೆ, ಪಾರ್ಟಿಗಳಲ್ಲಿಯ ಮಾಡುವ ಸ್ಟೆಪ್ಸ್ ಹಾಕಿದ್ದಾರೆ ನೀರಜ್ ಚೋಪ್ರಾ.

    ಕಾರ್ಯಕ್ರಮದ ತೀರ್ಪುಗಾರ ನೃತ್ಯ ಸಂಯೋಜಕ ರೆಮೋ ಡಿಸೋಜಾ ಸಹ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ರೆಮೋ ಡಿಸೋಜಾ ಜೊತೆ ಸ್ಟೈಲ್ ಆಗಿ ವಾಕ್ ಮಾಡೋದನ್ನು ಕಾಣಬಹುದಾಗಿದೆ. 23 ವರ್ಷದ ನೀರಜ್ ಚೋಪ್ರಾ ಮನೆ ಕದ ತಟ್ಟಿರುವ ಬಾಲಿವುಡ್ ನಿರ್ದೇಶಕರು ಆಫರ್ ಗಳನ್ನು ನೀಡುತ್ತಿದ್ದಾರೆ. ಆದ್ರೆ ನೀರಜ್ ಚೋಪ್ರಾ ತಾನು ಕ್ರೀಡೆಯಲ್ಲಿಯೇ ಮುಂದುವರಿಯುತ್ತೇನೆ ಎಂದು ಹೇಳಿದ್ದಾರೆ.

    ತಂದೆ-ತಾಯಿ ಕನಸು ನನಸು ಮಾಡಿದ ನೀರಜ್:

    ನೀರಜ್ ಚೋಪ್ರಾ ತಂದೆ-ತಾಯಿಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದುಕೊಂಡ ಹೋಗಿದ್ದರ ಬಗ್ಗೆ ಕೆಲ ದಿನಗಳ ಹಿಂದೆ ಸಂತಸ ಹಂಚಿಕೊಂಡಿದ್ದರು. ಪೋಷಕರ ಜೊತೆಯಲ್ಲಿ ವಿಮಾನದಲ್ಲಿಯ ಕುಳಿತಿರುವ ಫೋಟೋ ಹಂಚಿಕೊಂಡಿದ್ದ ನೀರಜ್ ಚೋಪ್ರಾ, ಈ ಎರಡೂ ಚಿತ್ರಗಳನ್ನು ಸೇವ್ ಮಾಡಿಕೊಳ್ಳಿ. ನಿಮಗೆ ಬೇಸರವಾದಗ ಒಮ್ಮೆ ಈ ಫೋಟೋಗಳನ್ನು ನೋಡಿ. ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬೇಕೆಂಬ ಸ್ಫೂರ್ತಿ ನಿಮಗೆ ಸಿಗುತ್ತೆ ಎಂದು ಬರೆದುಕೊಂಡಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.










    View this post on Instagram






    A post shared by Remo Dsouza (@remodsouza)






    ಕನ್ನಡಿಗ ಕಾಶೀನಾಥ್ ಅವರಿಂದ ಟ್ರೈನಿಂಗ್:

    ಉತ್ತರ ಕನ್ನಡದ ಶಿರಸಿ ಕಾಶೀನಾಥ್ ನಾಯ್ಕ್ ಅವರಿಂದ ನೀರಜ್ ಚೋಪ್ರಾ ಆರಂಭದ ದಿನಗಳಲ್ಲಿ ತರಬೇತಿ ಪಡೆದುಕೊಂಡಿದ್ದರು. 2015-17ರವರೆಗೆ ಪಟಿಯಾಲಾದ ಸೇನಾ ಕ್ರೀಡಾ ಸಂಕೀರ್ಣದಲ್ಲಿ ನೀರಜ್ ಚೋಪ್ರಾಗೆ ಕಾಶೀನಾತ್ ತರಬೇತಿ ನೀಡಿದ್ದರು. ನೀರಜ್ ಚಿನ್ನದ ಪದಕಕ್ಕೆ ಕೊರಳೊಡ್ಡುತ್ತಿದ್ದಂತೆ ಕಾಶೀನಾಥ್ ಅವರ ಹೆಸರು ಪ್ರಚಲಿತಕ್ಕೆ ಬಂದಿತ್ತು. ಆದ್ರೆ ಕೆಲವರು ಪ್ರಚಾರಕ್ಕಾಗಿ ಕಾಶೀನಾಥ್ ಸುಳ್ಳು ಹೇಳುತ್ತಿದ್ದಾರೆ ಎಂದು ಸಹ ಆರೋಪಿಸಿದ್ದರು.

    ಆದ್ರೆ ಕೆಲ ದಿನಗಳ ಬಳಿಕ ನೀರಜ್ ಚೋಪ್ರಾ ಅವರೇ ನೇವರಾಗಿ ಕಾಶೀನಾಥ್ ನಿವಾಸಕ್ಕೆ ತೆರಳಿ ಭೇಟಿಯಾಗುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ನೀರಜ್ ಚೋಪ್ರಾ ಗೆಲುವಿನ ಹಿಂದೆ ಕನ್ನಡಿಗನ ಕೈ ಚಳಕ ಹಿನ್ನೆಲೆ ಕರ್ನಾಟಕ ಸರ್ಕಾರ ಕಾಶೀನಾಥ್ ನಾಯ್ಕ್ ಅವರಿಗೆ 10 ಲಕ್ಷ ರೂ. ನೀಡಿ ಗೌರವಿಸಿತ್ತು.

    ವರದಿ: ಮಹ್ಮದ್​ ರಫೀಕ್​ ಕೆ
    Published by:Harshith AS
    First published: