ದ್ರಾವಿಡ್​ಗೆ ಬಿಸಿಸಿಐ ನೋಟಿಸ್; 'ಭಾರತೀಯ ಕ್ರಿಕೆಟ್ ಅನ್ನು ಆ ದೇವರೇ ಕಾಪಾಡಬೇಕು' ಎಂದ ಗಂಗೂಲಿ

ದ್ರಾವಿಡ್​ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಬಿಸಿಸಿಐಗೆ ದೂರು ನೀಡಲಾಗಿದೆ. ಸದ್ಯ ಈ ಬಗ್ಗೆ ಉತ್ತರಿಸಲು ದ್ರಾವಿಡ್​ಗೆ ಎರಡು ವಾರಗಳ ಕಾಲಾವಧಿ ನೀಡಲಾಗಿದೆ.

ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ

ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ

  • News18
  • Last Updated :
  • Share this:
ಬೆಂಗಳೂರು (ಆ. 07): ಟೀಂ ಇಂಡಿಯಾ ಮಾಜಿ ನಾಯಕ, ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ಹಾಲಿ ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ವಿರುದ್ಧ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಹಿತಾಸಕ್ತಿ ಸಂಘರ್ಷ ಉಲ್ಲಂಘನೆ ಮಾಡಿದ್ದಾರೆಂದು ನೋಟೀಸ್‌ ಜಾರಿ ಮಾಡಿದೆ.

ಮಧ್ಯಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಸದಸ್ಯ ಸಂಜೀವ್​ ಗುಪ್ತಾ ಹಾಗೂ ಬಿಸಿಸಿಐನ ಒಂಬುಡ್ಸ್‌ಮನ್‌ ಹಾಗೂ ಎಥಿಕ್ಸ್‌ ಆಫಿಸರ್‌ ಆಗಿರುವ ಡಿ.ಕೆ ಜೈನ್‌ ಅವರು ನೀಡಿರುವ ದೂರಿನ ಆಧಾರದ ಮೇರೆಗೆ ನೋಟೀಸ್‌ ನೀಡಲಾಗಿದೆ.

ಕಳೆದ ತಿಂಗಳಷ್ಟೆ ದ್ರಾವಿಡ್​ರನ್ನು ನ್ಯಾಷನಲ್​ ಕ್ರಿಕೆಟ್​ ಆಕಾಡೆಮಿಗೆ ಮುಖ್ಯಸ್ಥರನ್ನಾಗಿ ಬಿಸಿಸಿಐ ನೇಮಕ ಮಾಡಿತ್ತು. ಆದರೆ, ದ್ರಾವಿಡ್ ಐಪಿಎಲ್​ ಪ್ರಾಂಚೈಸಿಯಾದ ಚೆನ್ನೈ ಸೂಪರ್ ಕಿಂಗ್ಸ್​​ ಮಾಲೀಕತ್ವ ಹೊಂದಿರುವ ಇಂಡಿಯನ್​ ಸಿಮೆಂಟ್​​ ಸಮೂಹದ ಉಪಾಧ್ಯಕ್ಷರಾಗಿದ್ದಾರೆ. ಆದ್ದರಿಂದ ದ್ರಾವಿಡ್​ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಬಿಸಿಸಿಐಗೆ ದೂರು ನೀಡಲಾಗಿದೆ. ಸದ್ಯ ಈ ಬಗ್ಗೆ ಉತ್ತರಿಸಲು ದ್ರಾವಿಡ್​ಗೆ ಎರಡು ವಾರಗಳ ಕಾಲಾವಧಿ ನೀಡಲಾಗಿದೆ.

India Vs West Indies: ಧೋನಿ ದಾಖಲೆ ಮುರಿದ ಪಂತ್; ದೀಪಕ್ ಚಹಾರ್ ನೂತನ ಸಾಧನೆ

ಈ ಹಿಂದೆ ಇದೇ ವಿಚಾರವಾಗಿ ಗಂಗೂಲಿ, ಲಕ್ಷಣ್ ಹಾಗೂ ಸಚಿನ್​ ಅವರಿಗೆ ಬಿಸಿಸಿಐ ವಾರ್ನಿಂಗ್ ಮಾಡಿತ್ತು. ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆ ಅಥವಾ ಜವಾಬ್ದಾರಿ ನಿರ್ವಹಿಸುವಂತಿಲ್ಲ. ಸ್ವಹಿತಾಸಕ್ತಿ ನಿಯಮ ಎಲ್ಲರಿಗೂ ಒಂದೇ, ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ಬಿಸಿಸಿಐ ಹೇಳಿತ್ತು.

 ಸದ್ಯ ದ್ರಾವಿಡ್​ಗೂ ನೋಟೀಸ್ ಜಾರಿಗೊಳಿಸಿರುವುದರಿಂದ ಗಂಗೂಲಿ ಹಾಗೂ ಹರ್ಭಜನ್ ಸಿಂಗ್ ಬಿಸಿಸಿಐ ವಿರುದ್ಧ ಕಿಡಿ ಕಾರಿದ್ದಾರೆ. ಬಿಸಿಸಿಐ ಕ್ರಮದ ವಿರುದ್ಧ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿರುವ ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್ ಅನ್ನು ಆ ದೇವರೇ ಕಾಪಾಡಬೇಕು. ಭಾರತೀಯ ಕ್ರಿಕೆಟ್‌ನಲ್ಲಿ ಇದೊಂದು ಹೊಸ ಫ್ಯಾಶನ್. ತಾವೂ ಸುದ್ದಿಯಾಗಲೂ ಇದೊಂದು ಮಾರ್ಗವಾಗಿ ಬೆಳೆಯುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಇನ್ನು ಹರ್ಭಜನ್ ಕೂಡ ಬೇಸರ ವ್ಯಕ್ತ ಪಡಿಸಿದ್ದು, ಇದು ಯಾವದಾರಿ ಹಿಡಿಯುತ್ತದೊ ತಿಳಿಯುತ್ತಿಲ್ಲ. ದ್ರಾವಿಡ್ ಲೆಜೆಂಡ್. ಅಂತಹ ವ್ಯಕ್ತಿಗೆ ನೋಟೀಸ್ ನೀಡುವ ಮೂಲಕ ಬಿಸಿಸಿಐ ಅವಮಾನ ಮಾಡುತ್ತಿದೆ. ಈಗ ನಿಜವಾಗಿಯು ಭಾರತೀಯ ಕ್ರಿಕೆಟ್ ಅನ್ನು ಆ ದೇವರೇ ಕಾಪಾಡಬೇಕು ಎಂದು ಹೇಳಿದ್ದಾರೆ.

 First published: