ವಿದೇಶಿ ಟಿ-20 ಪಂದ್ಯದಲ್ಲಿ ಮಿಂಚುತ್ತಿರುವ ಯುವಿ; ಗಳಿಸಿದ ರನ್ ಎಷ್ಟು ಗೊತ್ತಾ?

ಎಡ್ಮಾಂಟನ್ ರಾಯಲ್ಸ್​ ವಿರುದ್ಧ ಅಬ್ಬರಿಸಿದ ಯುವಿ 21 ಎಸೆತಗಳಲ್ಲಿ 35 ರನ್ ಚಚ್ಚಿದರು ಇದರಲ್ಲಿ 3 ಬೌಂಡರಿ ಹಾಗೂ 3 ಅಮೋಘ ಸಿಕ್ಸ್​ಗಳು ಸೇರಿದ್ದವು.

ಯುವರಾಜ್ ಸಿಂಗ್

ಯುವರಾಜ್ ಸಿಂಗ್

  • News18
  • Last Updated :
  • Share this:
ಬೆಂಗಳೂರು (ಜು. 30): ಜೂನ್ 10 ರಂದು ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಯುವರಾಜ್ ಸಿಂಗ್ ಅವರು ಮತ್ತೆ ಮೈದಾನಕ್ಕಿಳಿದು ಮಿಂಚು ಹರಿಸುತ್ತಿದ್ದಾರೆ. ಈ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್​ ಅನ್ನು ಭರ್ಜರಿ ಆಗಿ ಆರಂಭಿಸಿದ್ದಾರೆ.

ಕೆನಡಾ ಗ್ಲೋಬಾಲ್ ಟಿ-20 ಲೀಗ್​ನಲ್ಲಿ ಯುವಿ ಪಾಲ್ಗೊಂಡಿದ್ದು, ಟೊರಾಂಟೋ ನ್ಯಾಷನಲ್ಸ್​ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಆಡಿರುವ ಮೂರು ಪಂದ್ಯಗಳಲ್ಲಿ ಸಿಕ್ಸರ್ ಕಿಂಗ್ 94 ರನ್ ಬಾರಿಸಿದ್ದಾರೆ.

Global T20 Canada: Yuvraj Singh shines with bat again for Toronto Nationals
ಟೊರಾಂಟೋ ನ್ಯಾಷನಲ್ಸ್ ತಂಡವನ್ನು ನಾಯಕ ಯುವರಾಜ್ ಸಿಂಗ್


ಕೊಹ್ಲಿ ನಾಯಕನಾಗಿ ಮುಂದುವರೆಯಲು ಅರ್ಹರೇ?; ಗವಾಸ್ಕರ್ ಪ್ರಶ್ನೆಗೆ ಮಂಜ್ರೇಕರ್ ಗರಂ

ಮೊದಲ ಪಂದ್ಯದಲ್ಲಿ ವ್ಯಾಂಕೋವರ್ ನೈಟ್ಸ್​ ವಿರುದ್ಧ ಯುವಿ ಅಷ್ಟೇನು ಉತ್ತಮವಾಗಿ ಪ್ರದರ್ಶನ ನೀಡಿಲ್ಲ. 27 ಎಸೆತಗಳಲ್ಲಿ ಕೇವಲ 14 ರನ್ ಗಳಿಸಿ ನಾಟೌಟ್ ಆಗಿದ್ದರು, ಔಟ್ ಎಂದು ಬಾವಿಸಿ ಮೈದಾನ ತೊರೆದರು. ಎರಡನೇ ಪಂದ್ಯದಲ್ಲಿ ಎಡ್ಮಾಂಟನ್ ರಾಯಲ್ಸ್​ ವಿರುದ್ಧ ಅಬ್ಬರಿಸಿದ ಯುವಿ 21 ಎಸೆತಗಳಲ್ಲಿ 35 ರನ್ ಚಚ್ಚಿದರು. ಇದರಲ್ಲಿ 3 ಬೌಂಡರಿ ಹಾಗೂ 3 ಅಮೋಘ ಸಿಕ್ಸ್​ಗಳು ಸೇರಿದ್ದವು. ಮೂರನೇ ಪಂದ್ಯದಲ್ಲೂ ಬ್ಯಾಟ್ ಬೀಸಿದ ಯುವರಾಜ್ ಕೇವಲ 26 ಎಸೆತಗಳಲ್ಲಿ 45 ರನ್ ಬಾರಿಸಿದ್ದಾರೆ. ಇದರಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್​​ಗಳಿ ಸೇರಿವೆ. ಜೊತೆಗೆ 2 ಓವರ್ ಬೌಲಿಂಗ್ ಮಾಡಿ 1 ವಿಕೆಟ್ ಕೂಡ ಪಡೆದಿದ್ದಾರೆ.

 ಈ ಮೂಲಕ ಯುವರಾಜ್ ಒಟ್ಟು 3 ಪಂದ್ಯಗಳಲ್ಲಿ 94 ರನ್ ಕಲೆಹಾಕಿ ಫಾರ್ಮ್​ಗೆ ಬಂದಿದ್ದಾರೆ. ಅಲ್ಲದೆ ತಮ್ಮ ಹಳೆ ಖದರ್​ಗೆ ಮರಳಿದ್ದಾರೆ.

First published: