Glenn Phillips: ಅದ್ಭುತ..ಅತ್ಯಾಧ್ಭುತ...ಕ್ರಿಕೆಟ್ ಅಂಗಳದಲ್ಲಿ ಮತ್ತೊಂದು ಮಿಂಚಿನ ಕ್ಯಾಚ್..!

ಪ್ರಸ್ತುತ ವಿಟಾಲಿಟಿ ಬ್ಲಾಸ್ಟ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿರುವ ಗ್ಲೆನ್ ಪಿಲಿಪ್ಸ್ 10 ಪಂದ್ಯಗಳಲ್ಲಿ 423 ರನ್ ಬಾರಿಸಿದ್ದಾರೆ. ಹೀಗಾಗಿ ಐಪಿಎಲ್​ನ ಬದಲಿ ಆಟಗಾರನಾಗಿ ಯಾವುದಾದರೂ ತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.

Glenn Phillips

Glenn Phillips

  • Share this:
    ಒಂದೆಡೆ ಟೀಮ್ ಇಂಡಿಯಾ ಆಟಗಾರ್ತಿ ಹರ್ಲೀನ್ ಡಿಯೋಲ್ ಹಿಡಿದ ಅತ್ಯಾಧ್ಭುತ ಕ್ಯಾಚ್​ ವಿಡಿಯೋ ವೈರಲ್ ಆಗುತ್ತಿದ್ದರೆ, ಮತ್ತೊಂದೆಡೆ ಅದನ್ನೂ ಮೀರಿಸುವ ಮತ್ತೊಂದು ಅಧ್ಭುತ ಕ್ಯಾಚ್ ಹಿಡಿದು ಮಿಂಚಿದ್ದಾರೆ ಗ್ಲೆನ್ ಪಿಲಿಪ್ಸ್. ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟಿ20 ವಿಟಾಲಿಟಿ ಬ್ಲಾಸ್ಟ್ ಟೂರ್ನಿಯಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಕ್ರಿಕೆಟಿಗ ಇಂತಹದೊಂದು ಮಿಂಚಿನ ಕ್ಯಾಚ್ ಹಿಡಿದಿದ್ದಾರೆ.

    ಗ್ಲೌಸ್​ಸ್ಟೆರ್​ಶೈರ್ ಹಾಗೂ ಮಿಡಲ್ಸ್​ಎಕ್ಸ್ ನಡುವಣ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗ್ಲೌಸ್​ಸ್ಟೆರ್ ತಂಡವು ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿತು. ಈ ಸವಾಲಿನ ಗುರಿ ಪಡೆದ ಮಿಡಲ್ಸ್​ಎಕ್ಸ್ ತಂಡಕ್ಕೆ ಆರಂಭದಲ್ಲೇ ಗ್ಲೆನ್ ಪಿಲಿಪ್ಸ್ ಆಘಾತ ನೀಡಿದ್ದರು. ಮೂರನೇ ಓವರ್​ನ 4ನೇ ಏಸೆತದಲ್ಲಿ ಆರಂಭಿಕ ಆಟಗಾರ ಸ್ಟೀವ್ ಎಸ್ಕಿನಾಜಿ ಭರ್ಜರಿ ಹೊಡೆತ ಬಾರಿಸಿದ್ದರು. ಇನ್ನೇನು ಚೆಂಡು ಫ್ಲಾಟ್ ಸಿಕ್ಸ್ ಆಗಲಿದೆ ಎನ್ನುವಷ್ಟರಲ್ಲಿ ಬ್ಯಾಕ್​ವರ್ಡ್ ಪಾಯಿಂಟ್​ನಿಂದ ಓಡಿ ಬಂದ ಪಿಲಿಪ್ಸ್ ಮಿಂಚಿನ ಡೈವ್ ಹೊಡೆದು ಅತ್ಯಾಧ್ಬುತವಾಗಿ ಕ್ಯಾಚ್ ಹಿಡಿದರು. ಗ್ಲೆನ್ ಪಿಲಿಪ್ಸ್ ಅವರ ಈ ಮಿಂಚಿನ ಡೈವಿಂಗ್ ಕ್ಯಾಮೆರಾ ಕಣ್ಣಿನಲ್ಲೂ ಸ್ಪಷ್ಟವಾಗಿ ಗೋಚರಿಸಿರಲಿಲ್ಲ ಅಂದರೆ ಎಂತಹ ವೇಗದ ಡೈವಿಂಗ್ ಎಂದು ಊಹಿಸಬಹುದು.








    View this post on Instagram






    A post shared by cricketiga (@cricketiga_)






    ಇನ್ನು ಈ ಪಂದ್ಯದಲ್ಲಿ 171 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಮಿಡಲ್ಸ್​ಎಕ್ಸ್ ತಂಡ 20 ಓವರ್​​ನಲ್ಲಿ 8 ವಿಕೆಟ್ ಕಳೆದುಕೊಂಡು 161 ರನ್ ಗಳಿಸಲಷ್ಟೆ ಶಕ್ತವಾಯಿತು. ಇದರೊಂದಿಗೆ ಗ್ಲೌಸ್​ಸ್ಟೆರ್​ಶೈರ್ 10 ರನ್​ಗಳ ಜಯ ಸಾಧಿಸಿತು. ಇನ್ನು ಪ್ರಸ್ತುತ ವಿಟಾಲಿಟಿ ಬ್ಲಾಸ್ಟ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿರುವ ಗ್ಲೆನ್ ಪಿಲಿಪ್ಸ್ 10 ಪಂದ್ಯಗಳಲ್ಲಿ 423 ರನ್ ಬಾರಿಸಿದ್ದಾರೆ. ಹೀಗಾಗಿ ಐಪಿಎಲ್​ನ ಬದಲಿ ಆಟಗಾರನಾಗಿ ಯಾವುದಾದರೂ ತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.





    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
    Published by:zahir
    First published: