Glenn McGrath: ವಿರಾಟ್ ಕೊಹ್ಲಿಯ ಸ್ಥಾನ ತುಂಬಲಿರುವ ಆಟಗಾರನನ್ನು ಹೆಸರಿಸಿದ ಆಸೀಸ್ ಮಾಜಿ ವೇಗಿ ಮೆಕ್​ಗ್ರಾಥ್

ಭಾರತ ತಂಡವನ್ನು ಉಪನಾಯಕ ಅಂಜಿಕ್ಯ ರಹಾನೆ ಮುನ್ನಡೆಸಲಿದ್ದಾರೆ. ಇದಾಗ್ಯೂ, ಕೊಹ್ಲಿಯ ಅನುಪಸ್ಥಿತಿಯಲ್ಲಿ ಅವರ ಜಾಗವನ್ನು ತುಂಬಲಿರುವ ಆಟಗಾರ ಯಾರು ಎಂಬ ಚರ್ಚೆಗಳು ಶುರುವಾಗಿವೆ. ಏಕೆಂದರೆ ರೋಹಿತ್ ಶರ್ಮಾ ತಂಡವನ್ನು ಕೂಡಿಕೊಳ್ಳಲು ಇನ್ನು ಸಮಯ ತೆಗೆದುಕೊಳ್ಳಲಿದೆ.

Glenn McGrath

Glenn McGrath

 • Share this:
  ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋಲನುಭವಿಸಿದೆ. ಆಸ್ಟ್ರೇಲಿಯಾ ಬೌಲರುಗಳ ಕರಾರುವಾಕ್ ದಾಳಿ ಮುಂದೆ ಮಂಡಿಯೂರಿದ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ಕೇವಲ 36 ರನ್​ಗಳಿಗೆ ಇನಿಂಗ್ಸ್ ಅಂತ್ಯಗೊಳಿಸುವ ಮೂಲಕ ಹೀನಾಯ ಪ್ರದರ್ಶನ ನೀಡಿತ್ತು. ಇದೀಗ ಎರಡನೇ ಟೆಸ್ಟ್​ನಲ್ಲಿ ಗೆಲ್ಲುವ ಮೂಲಕ ಸಮಬಲ ಸಾಧಿಸಲು ಟೀಮ್ ಇಂಡಿಯಾ ಆಟಗಾರರು ಭರ್ಜರಿ ತಯಾರಿಯಲ್ಲಿದ್ದಾರೆ. ಆದರೆ ಮುಂದಿನ ಮೂರು ಪಂದ್ಯಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿ ಕಾಡಲಿದೆ. ಪತ್ನಿ ಅನುಷ್ಕಾ ಅವರ ಹೆರಿಗೆ ಸಮಯ ಹತ್ತಿರಲಿದ್ದು, ಹೀಗಾಗಿ ಶೀಘ್ರದಲ್ಲೇ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಲಿದ್ದಾರೆ.

  ಅತ್ತ ಭಾರತ ತಂಡವನ್ನು ಉಪನಾಯಕ ಅಂಜಿಕ್ಯ ರಹಾನೆ ಮುನ್ನಡೆಸಲಿದ್ದಾರೆ. ಇದಾಗ್ಯೂ, ಕೊಹ್ಲಿಯ ಅನುಪಸ್ಥಿತಿಯಲ್ಲಿ ಅವರ ಜಾಗವನ್ನು ತುಂಬಲಿರುವ ಆಟಗಾರ ಯಾರು ಎಂಬ ಚರ್ಚೆಗಳು ಶುರುವಾಗಿವೆ. ಏಕೆಂದರೆ ರೋಹಿತ್ ಶರ್ಮಾ ತಂಡವನ್ನು ಕೂಡಿಕೊಳ್ಳಲು ಇನ್ನು ಸಮಯ ತೆಗೆದುಕೊಳ್ಳಲಿದೆ. ಏಕೆಂದರೆ ಆಸ್ಟ್ರೇಲಿಯಾದ ಕೊರೋನಾ ನಿಯಮದ ಪ್ರಕಾರ 2 ವಾರಗಳ ಕಾಲ ಕ್ವಾರಂಟೈನ್​ನಲ್ಲಿರಬೇಕು. ಈ ಅವಧಿ ಮುಗಿಯುವಷ್ಟರಲ್ಲಿ 2ನೇ ಟೆಸ್ಟ್ ಶುರುವಾಗಲಿದೆ. ಹೀಗಾಗಿ ಮೂರನೇ ಟೆಸ್ಟ್​ಗೆ ಹಿಟ್​ಮ್ಯಾನ್ ಲಭ್ಯವಿರಲಿದ್ದಾರೆ.

  ಹಾಗಾಗಿ ಕೊಹ್ಲಿ ಸ್ಥಾನ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆ ಜೋರಾಗಿ ಕೇಳಿ ಬರುತ್ತಿದ್ದು, ಆಸ್ಟ್ರೇಲಿಯಾ ಮಾಜಿ ವೇಗಿ ಗ್ಲೆನ್ ಮೆಕ್​ಗ್ರಾಥ್ ಪ್ರಸ್ತುತ ತಂಡದಲ್ಲಿರುವ ಸ್ಟಾರ್ ಆಟಗಾರೊಬ್ಬರನ್ನು ಹೆಸರಿಸಿದ್ದಾರೆ. ಹೌದು, 26 ರಿಂದ ಶುರುವಾಗುವ ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯದಲ್ಲಿ ಕೊಹ್ಲಿ ಅವರ ಸ್ಥಾನವನ್ನು ಕೆಎಲ್ ರಾಹುಲ್ ಅವರಿಗೆ ಸಿಗಲಿದೆ ಎಂದಿದ್ದಾರೆ. ಕೆಎಲ್ ರಾಹುಲ್ ಹೊರತಾಗಿ ಶುಭ್​ಮನ್ ಗಿಲ್ ಅವರಿಗೆ ಚಾನ್ಸ್ ನೀಡಬಹುದು. ಇವರಿಬ್ಬರಲ್ಲಿ ಒಬ್ಬರಂತು 2ನೇ ಟೆಸ್ಟ್​ನಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಮೆಕ್​ಗ್ರಾಥ್ ಹೇಳಿದ್ದಾರೆ.

  ಇನ್ನು ಮೊದಲ ಟೆಸ್ಟ್​ನಲ್ಲಿ ಸಂಪೂರ್ಣ ವಿಫಲರಾದ ಪೃಥ್ವಿ ಶಾ ಅವರನ್ನು ಮುಂದಿನ ಪಂದ್ಯಗಳಿಂದ ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಅವರ ಸ್ಥಾನದಲ್ಲಿ ಶುಭ್​ಮನ್ ಗಿಲ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಬಹುದು. ಅತ್ತ ಕೆಎಲ್ ರಾಹುಲ್ ಅವರು ವಿರಾಟ್ ಕೊಹ್ಲಿ ಸ್ಥಾನದಲ್ಲಿ ಅವಕಾಶ ಪಡೆಯಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
  Published by:zahir
  First published: