HOME » NEWS » Sports » CRICKET GLENN MAXWELL IS MORE INTERESTED ABOUT GOLF THAN CRICKET DURING IPL VIRENDER SEHWAG ZP

Virender Sehwag: ಆತ ಉಚಿತವಾಗಿ ಸಿಗುತ್ತಿದ್ದ ಡ್ರಿಂಕ್ಸ್ ಎತ್ಕೊಂಡು ಹೋಗ್ತಿದ್ದ ಅಷ್ಟೇ: ಸ್ಟಾರ್ ಕ್ರಿಕೆಟಿಗನ ವಿರುದ್ಧ ವೀರು ಆಕ್ರೋಶ

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದರು. ಕೇವಲ 19 ಎಸೆತಗಳನ್ನು ಎದುರಿಸಿದ ಬಲಗೈ ದಾಂಡಿಗ 45 ರನ್ ಚಚ್ಚಿದ್ದರು. ಇದರಲ್ಲಿ 5 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್​ಗಳು ಮೂಡಿಬಂದಿತ್ತು

news18-kannada
Updated:December 9, 2020, 8:10 PM IST
Virender Sehwag: ಆತ ಉಚಿತವಾಗಿ ಸಿಗುತ್ತಿದ್ದ ಡ್ರಿಂಕ್ಸ್ ಎತ್ಕೊಂಡು ಹೋಗ್ತಿದ್ದ ಅಷ್ಟೇ: ಸ್ಟಾರ್ ಕ್ರಿಕೆಟಿಗನ ವಿರುದ್ಧ ವೀರು ಆಕ್ರೋಶ
Virender Sehwag
  • Share this:
ಗ್ಲೆನ್ ಮ್ಯಾಕ್ಸ್​ವೆಲ್...ಇಂಡಿಯನ್ ಪ್ರೀಮಿಯರ್ ಲೀಗ್​ 13ನೇ ಸೀಸನ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ 13 ಪಂದ್ಯಗಳನ್ನಾಡಿ ಗಳಿಸಿದ್ದು ಕೇವಲ 108 ರನ್​ಗಳು ಮಾತ್ರ. ಅದಕ್ಕಿಂತಲೂ ವಿಚಿತ್ರ ಎಂದರೆ ಈ ಬಾರಿಯ ಐಪಿಎಲ್​ನಲ್ಲಿ ಮ್ಯಾಕ್ಸ್​ವೆಲ್ ಬ್ಯಾಟ್​ನಿಂದ ಒಂದೇ ಒಂದು ಸಿಕ್ಸ್ ಸಿಡಿದಿರಲಿಲ್ಲ. ಇನ್ನು ಬೌಂಡರಿ ರೂಪದಲ್ಲಿ 9 ಫೋರ್ ಬಾರಿಸಿದ್ದರು. ಟೂರ್ನಿಯುದ್ದಕ್ಕೂ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾ ಆಟಗಾರ ಟೀಮ್ ಇಂಡಿಯಾ ವಿರುದ್ಧ ಆರ್ಭಟಿಸಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದರು. ಕೇವಲ 19 ಎಸೆತಗಳನ್ನು ಎದುರಿಸಿದ ಬಲಗೈ ದಾಂಡಿಗ 45 ರನ್ ಚಚ್ಚಿದ್ದರು. ಇದರಲ್ಲಿ 5 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್​ಗಳು ಮೂಡಿಬಂದಿತ್ತು. 2ನೇ ಪಂದ್ಯದಲ್ಲಿ 29 ಎಸೆತಗಳಲ್ಲಿ 4 ಸಿಕ್ಸರ್, 4 ಬೌಂಡರಿಗಳೊಂದಿಗೆ 63 ಸಿಡಿಸಿದ್ದರು. 3ನೇ ಏಕದಿನ ಪಂದ್ಯದಲ್ಲಿ 38 ಎಸೆತಗಳಲ್ಲಿ 59 ರನ್ ಬಾರಿಸಿದ್ದರು. ಇದಾದ ಬಳಿಕ ಟಿ20 ಸರಣಿಯಲ್ಲಿ 78 ರನ್ ಕಲೆಹಾಕಿದ್ದರು.

ಅತ್ತ ಐಪಿಎಲ್​ನಲ್ಲಿ ವೈಫಲ್ಯ, ಇತ್ತ ಆಸ್ಟ್ರೇಲಿಯಾ ಪರ ಅಬ್ಬರಿಸಿರುವ ಮ್ಯಾಕ್ಸ್​ವೆಲ್ ಅವರ ಪ್ರದರ್ಶನದ ಬಗ್ಗೆ ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಹರಿಹಾಯ್ದಿದ್ದಾರೆ. ಅಲ್ಲದೆ ಐಪಿಎಲ್​ನಲ್ಲಿ ಒಂದು ಪ್ರದರ್ಶನ ಅದರ ಬೆನ್ನಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮತ್ತೊಂದು ರೀತಿಯಲ್ಲಿ ಪ್ರದರ್ಶನ ನೀಡುತ್ತಿರುವುದಕ್ಕೆ ಕಾರಣವನ್ನು ವೀರು ತಿಳಿಸಿದ್ದಾರೆ.

ಐಪಿಎಲ್​ನಲ್ಲಿ ಮ್ಯಾಕ್ಸ್​ವೆಲ್ ಯಾವುದೇ ರೀತಿಯ ಒತ್ತಡವನ್ನು ತೆಗೆದುಕೊಳ್ಳಲು ಬಯಸಿರಲಿಲ್ಲ ಎಂದಿರುವ ಸೆಹ್ವಾಗ್, ಆತ ಕ್ರಿಕೆಟ್​ಗಿಂತ ಗಾಲ್ಫ್ ಆಡಲು ಹೆಚ್ಚು ಪ್ರಶಾಸ್ತ್ಯ ನೀಡಿದ್ದ. ಇದು ಆತನ ಪ್ರದರ್ಶನದ ಮೇಲೆ ಪರಿಣಾಮ ಬೀರಿತ್ತು. ಮ್ಯಾಕ್ಸ್​ವೆಲ್ ಐಪಿಎಲ್​ನಲ್ಲಿ ಕೇವಲ ಎಂಜಾಯ್ ಮಾಡಲು ಅಲ್ಲಿರುತ್ತಿದ್ದ. ಪಂದ್ಯದ ಸಂದರ್ಭದಲ್ಲಿ ಆತ ಎಲ್ಲವನ್ನೂ ಮಾಡುತ್ತಿದ್ದ. ಸುತ್ತಲೂ ಓಡಾಡುತ್ತಿದ್ದ. ಆಟಗಾರರನ್ನು ಉತ್ತೇಜಿಸುತ್ತಿದ್ದ. ನೃತ್ಯ ಮಾಡುತ್ತಿದ್ದ. ಆದರೆ ರನ್ ಮಾತ್ರ ಗಳಿಸುತ್ತಿರಲಿಲ್ಲ ಎಂದು ಸೆಹ್ವಾಗ್ ಆರೋಪಿಸಿದ್ದಾರೆ.

ಇನ್ನು ಪಂದ್ಯದ ಮುಗಿಯುತ್ತಿದ್ದಂತೆ ಆದಷ್ಟು ಬೇಗ ಉಚಿತವಾಗಿ ದೊರೆಯುವ ಡ್ರಿಂಕ್ಸ್‌ ತೆಗೆದುಕೊಳ್ಳುತ್ತಿದ್ದ. ಅದನ್ನು ರೂಮ್​ಗೆ ತೆಗೆದುಕೊಂಡು ಹೋಗಿ ಕುಡಿಯುತ್ತಿದ್ದ. ಇದು ಐಪಿಎಲ್​ ವೇಳೆ ಗ್ಲೆನ್ ಮ್ಯಾಕ್ಸ್​ವೆಲ್ ಮಾಡುತ್ತಿದ್ದ ಕೆಲಸ ಎಂದು ಸೆಹ್ವಾಗ್ ತಿಳಿಸಿದರು. ಅಲ್ಲದೆ ಆತ ಟೂರ್ನಿಯ ಕುರಿತು ಗಂಭೀರನಾಗಿದ್ದರೆ ಅದು ಪ್ರದರ್ಶನದಲ್ಲಿ ಕಾಣಿಸಬೇಕಿತ್ತು. ನನಗೆ ಆತ ಯಾವತ್ತೂ ಆಟವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾನೆ ಎಂದು ಅನಿಸಿರಲಿಲ್ಲ ಎಂದು ವೀರು ಹೇಳಿದರು. ಅಂದಹಾಗೆ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದಲ್ಲಿ ವಿರೇಂದ್ರ ಸೆಹ್ವಾಗ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಜೊತೆಯಾಗಿ ಆಡಿದ್ದರು. ಅಲ್ಲದೆ ವೀರು ತಂಡದ ಕೋಚ್ ಆಗಿದ್ದ ವೇಳೆಯೂ ಮ್ಯಾಕ್ಸಿ ಕಿಂಗ್ಸ್​ ಇಲೆವೆನ್ ತಂಡವನ್ನು ಪ್ರತಿನಿಧಿಸಿದ್ದರು.

ಇದನ್ನೂ ಓದಿ: 55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್​ಮನ್ ಮೇಲೆ ಕಣ್ಣಿಟ್ಟಿದೆ RCB..!
Published by: zahir
First published: December 9, 2020, 8:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories