HOME » NEWS » Sports » CRICKET GLENN MAXWELL CROWD CHEER AS INDIA FAN PROPOSES TO AUSTRALIAN GIRLFRIEND AT SCG DURING 2ND ODI ZP

Ind vs Aus: ಇತ್ತ ಜಿದ್ದಾಜಿದ್ದಿನ ಹೋರಾಟ: ಅತ್ತ ಪ್ರೇಮ ಪಕ್ಷಿಗಳ ಹಾರಾಟ..!

20ನೇ ಓವರ್​ನಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಕ್ರೀಸ್​ನಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದರು. ಇದೇ ವೇಳೆ ಸ್ಟೇಡಿಯಂನಲ್ಲಿ ಭಾರತೀಯ ಯುವಕನೊಬ್ಬ ಆಸ್ಟ್ರೇಲಿಯಾ ಯುವತಿಗೆ ಪ್ರಪೋಸ್ ಮಾಡಿದ್ದಾನೆ.

news18-kannada
Updated:November 29, 2020, 6:37 PM IST
Ind vs Aus: ಇತ್ತ ಜಿದ್ದಾಜಿದ್ದಿನ ಹೋರಾಟ: ಅತ್ತ ಪ್ರೇಮ ಪಕ್ಷಿಗಳ ಹಾರಾಟ..!
India fan proposes to Australian girlfriend
  • Share this:
ಇತ್ತ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದ್ದರೆ, ಅತ್ತ ಸ್ಟೇಡಿಯಂ ರೋಮ್ಯಾಂಟಿಕ್ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಹೌದು, ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ 2ನೇ ಏಕದಿನ ಪಂದ್ಯದ ವೇಳೆ ಯುವಕನೋರ್ವ ಪ್ರೇಮ ನಿವೇದನೆ ಮಾಡಿಕೊಂಡು ಗಮನ ಸೆಳೆದಿದ್ದಾರೆ.

20ನೇ ಓವರ್​ನಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಕ್ರೀಸ್​ನಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದರು. ಇದೇ ವೇಳೆ ಸ್ಟೇಡಿಯಂನಲ್ಲಿ ಭಾರತೀಯ ಯುವಕನೊಬ್ಬ ಆಸ್ಟ್ರೇಲಿಯಾ ಯುವತಿಗೆ ಪ್ರಪೋಸ್ ಮಾಡಿದ್ದಾನೆ. ಈ ಅಮೂಲ್ಯ ಕ್ಷಣಗಳನ್ನು ಕ್ಯಾಮೆರಾಮೆನ್ ಸೆರೆ ಹಿಡಿದಿದ್ದಾರೆ.

ಟೀಮ್ ಇಂಡಿಯಾ ಜರ್ಸಿ ತೊಟ್ಟಿದ್ದ ಯುವಕ ಪ್ರಪೋಸ್​ಗೆ ಯುವತಿ ಒಪ್ಪಿಗೆ ಸೂಚಿಸಿದ್ದು, ಇಬ್ಬರು ಗ್ಯಾಲರಿಯಲ್ಲಿ ಅಪ್ಪಿಕೊಂಡು ಸಂಭ್ರಮಿಸಿದರು. ಅಲ್ಲದೆ ಯುವಕ ಉಂಗುರ ತೊಡಿಸುವ ಮೂಲಕ ನೀನೇ ನನ್ನ ಬಾಳಸಂಗಾತಿ ಎಂಬುದನ್ನು ಸೂಚಿಸಿದ. ಈ ಎಲ್ಲಾ ದೃಶ್ಯಗಳು ಮೈದಾನದ ದೊಡ್ಡ ಪರದೆಯಲ್ಲಿ ಹಾಗೂ ಟಿವಿಯಲ್ಲೂ ಬಿತ್ತರವಾಗುತ್ತಿತ್ತು.


ಇದನ್ನು ಗಮನಿಸಿದ ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್ ಚಪ್ಪಾಳೆಯ ತಟ್ಟುವ ಮೂಲಕ ಸಂತಸ ಹಂಚಿಕೊಂಡರು. ಒಟ್ಟಿನಲ್ಲಿ ಯುವತಿಗೆ ಸರ್​ಪ್ರೈಸ್ ನೀಡಲು ಪಂದ್ಯದ ನಡುವೆ ಪ್ರಪೋಸ್ ನೀಡಿದ ಯುವಕನಿಗೆ, ಕ್ಯಾಮೆರಾಮೆನ್ ಬಿಗ್ ಸರ್​ಪ್ರೈಸ್ ನೀಡಿ ಯುವ ಪ್ರೇಮಿಗಳ ಖುಷಿ ಹೆಚ್ಚಿಸಿದರು.

ಇದನ್ನೂ ಓದಿ: ರಾಹುಲ್‌, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಹೆಸರಿಸಿದ ಗಂಗೂಲಿ..!
Published by: zahir
First published: November 29, 2020, 6:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading