ಗಿಲ್ ಅಜೇಯ 204; ವಿಹಾರಿ ಜೊತೆಗೆ ದಾಖಲೆಯ ಜೊತೆಯಾಟ; ವಿಂಡೀಸ್​ಗೆ 373 ಟಾರ್ಗೆಟ್

ಗಿಲ್ 250 ಎಸೆತಗಳಲ್ಲಿ 19 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ಅಜೇಯ 204 ರನ್ ಬಾರಿಸಿದರೆ, ವಿಹಾರಿ 219 ಎಸೆತಗಳಲ್ಲಿ 118 ರನ್ ಗಳಿಸಿದರು.

Vinay Bhat | news18
Updated:August 9, 2019, 9:29 AM IST
ಗಿಲ್ ಅಜೇಯ 204; ವಿಹಾರಿ ಜೊತೆಗೆ ದಾಖಲೆಯ ಜೊತೆಯಾಟ; ವಿಂಡೀಸ್​ಗೆ 373 ಟಾರ್ಗೆಟ್
ಶುಭ್ಮನ್ ಗಿಲ್
Vinay Bhat | news18
Updated: August 9, 2019, 9:29 AM IST
ಬೆಂಗಳೂರು (ಆ. 09): ಟೀಂ ಇಂಡಿಯಾ ಜೊತೆಗೆ ಭಾರತ ಎ ತಂಡ ಕೂಡ ಕೆರಿಬಿಯನ್ ಪ್ರವಾಸದಲ್ಲಿದ್ದು ವೆಸ್ಟ್​ ಇಂಡೀಸ್ ಎ ತಂಡದ ವಿರುದ್ಧ ಮೂರನೇ ಅನಧಿಕೃತ ಟೆಸ್ಟ್​ ಪಂದ್ಯವನ್ನು ಆಡುತ್ತಿದೆ.

ಟಾಸ್ ಸೋತು ಬ್ಯಾಟಿಂಗ್​ ಆರಂಭಿಸಿದ ಭಾರತ ಎ ಮೊದಲ ಇನ್ನಿಂಗ್ಸ್​ನಲ್ಲಿ ವೃದ್ದಿಮನ್ ಸಾಹ ಅವರ 62 ಹಾಗೂ ನಾಯಕ ಹನುಮ ವಿಹಾರಿ 55 ರನ್​ ಕಲೆಹಾಕಿದ ಪರಿಣಾಮ 67.5 ಓವರ್​ಗಳಲ್ಲಿ ಕೇವಲ 201 ರನ್​ಗೆ ಆಲೌಟ್ ಆಯಿತು. ಇತ್ತ ವಿಂಡೀಸ್ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಕೃಷ್ಣಪ್ಪ ಗೌತಮ್ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 194 ರನ್​ಗೆ ಸರ್ಪಪತನ ಕಂಡಿತು. ಗೌತಮ್ 6 ವಿಕೆಟ್ ಕಿತ್ತು ಮಿಂಚಿದರು.

7 ರನ್​ಗಳ ಮುನ್ನಡೆಯೊಂದಿಗೆ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆದಿಕೊಂಡಿಲ್ಲ. ಪ್ರಿಯಾಂಕ ಪಂಚಲ್(3), ಅಭಿಮನ್ಯು ಈಶ್ವರನ್(6), ಮಯಾಂಕ್ ಅಗರ್ವಾಲ್(5) ಹಾಗೂ ಶಹ್ಬಾಜ್ ನದೀಮ್(13) ಬೇಗನೆ ಔಟ್ ಆದರು. ಆದರೆ, 5ನೇ ವಿಕೆಟ್​ಗೆ ಜೊತೆಯಾದ ಶುಭ್ಮನ್ ಗಿಲ್ ಹಾಗೂ ಹನುಮ ವಿಹಾರಿ ಎಚ್ಚರಿಕೆಯಿಂದ ಇನ್ನಿಂಗ್ಸ್​ ಕಟ್ಟಿದರು.

IND vs WI: ಮೊದಲ ಏಕದಿನ ಮಳೆಗೆ ಆಹುತಿ; ಬೇಸರ ವ್ಯಕ್ತ ಪಡಿಸಿದ ಕೊಹ್ಲಿ

ದಾಖಲೆಯ ಜೊತೆಯಾಟ ಆಡಿದ ಇವರಿಬ್ಬರು ಶತಕ ಸಿಡಿಸಿ ಮಿಂಚಿದರು. ಅದರಲ್ಲು ಆಕ್ರಮಣಕಾರಿ ಆಟ ಪ್ರದರ್ಶಿಸಿದ ಗಿಲ್ ದ್ವಿಶಕ ಬಾರಿಸಿದರು. ವಿಕೆಟ್ ಕೈಚೆಲ್ಲದಂತೆ ಕಾಪಾಡಿಕೊಂಡ ಇವರಿಬ್ಬರು ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. 3ನೇ ದಿನದಾಟ ಅಂತ್ಯವಾಗುತ್ತೆ ಎಂಬೊಂತ್ತಿದೆ ಡಿಕ್ಲೇರ್ ಘೋಷಿಸಿದ ಭಾರತ ಎ 90 ಓವರ್​ಗೆ 4 ವಿಕೆಟ್ ಕಳೆದುಕೊಂಡು 365 ರನ್ ಕಲೆಹಾಕಿತು.

ಗಿಲ್ 250 ಎಸೆತಗಳಲ್ಲಿ 19 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ಅಜೇಯ 204 ರನ್ ಬಾರಿಸಿದರೆ, ವಿಹಾರಿ 219 ಎಸೆತಗಳಲ್ಲಿ 118 ರನ್ ಗಳಿಸಿದರು. ಅಲ್ಲದೆ ಇವರಿಬ್ಬರು ಬರೋಬ್ಬರಿ 315 ರನ್​ಗಳ ಜೊತೆಯಾಟ ಆಡಿದರು.

373 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ವಿಂಡೀಸ್ 3ನೇ ದಿನದಾಟದ ಅಂತ್ಯದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 37 ರನ್ ಕಲೆಹಾಕಿದೆ. ಇಂದು ಕೊನೆಯ ದಿನದಾಟ ಬಾಕಿಉಳಿದಿದ್ದು, ವೆಸ್ಟ್​ ಇಂಡೀಸ್ ಎ ತಂಡಕ್ಕೆ ಗೆಲುವು ಸಾಧಿಸಲು 336 ರನ್​ಗಳ ಅವಶ್ಯಕತೆಯಿದೆ.
Loading...

First published:August 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...