PUBG: ಟೀಂ ಇಂಡಿಯಾ ಸ್ಟಾರ್​​ ಆಟಗಾರರ ಜೊತೆ ಪಬ್​ಜಿ ಆಡುವ ಸುವರ್ಣವಕಾಶ; ಅತ್ಯುತ್ತಮ ಪ್ಲೇಯರ್​​ಗೆ ಒನ್ ಪ್ಲಸ್ ಮೊಬೈಲ್

Oneplus: ಟೀಂ ಇಂಡಿಯಾದ ಆಟಗಾರರಾದ ಕೆ.ಎಲ್​​ ರಾಹುಲ್​, ಶ್ರೇಯಸ್​​​​ ಐಯ್ಯರ್​​, ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂದಾನ ಮತ್ತು ಯಜುವೇಂದ್ರ ಚಾಹಲ್​​ ಪಬ್​ಜಿ ಟೂನ್​ಮೆಂಟ್​ನಲ್ಲಿ ಭಾಗವಹಿಸಲಿದ್ದಾರೆ.

news18-kannada
Updated:May 22, 2020, 1:51 PM IST
PUBG: ಟೀಂ ಇಂಡಿಯಾ ಸ್ಟಾರ್​​ ಆಟಗಾರರ ಜೊತೆ ಪಬ್​ಜಿ ಆಡುವ ಸುವರ್ಣವಕಾಶ; ಅತ್ಯುತ್ತಮ ಪ್ಲೇಯರ್​​ಗೆ ಒನ್ ಪ್ಲಸ್ ಮೊಬೈಲ್
ಪಜ್​ಜಿ ಟೂರ್ನಮೆಂಟ್
  • Share this:
ಒನ್​​ಪ್ಲಸ್​ ಸ್ಮಾರ್ಟ್​ಫೋನ್ ಸಂಸ್ಥೆ​ ಭಾರತದಲ್ಲಿ ಪಜ್​ಜಿ ಟೂರ್ನಮೆಂಟ್​ ಆಯೋಜಿಸಿದೆ. ಎಸ್​ಪೋರ್ಟ್​​ ಸಹಯೋಗದೊಂದಿಗೆ ಈ ಟೂರ್ನ್​ಮೆಂಟ್​​​ ನಡೆಸುತ್ತಿದೆ. ಟೀಂ ಇಂಡಿಯಾ ಆಟಗಾರರು ಈ ಟೂರ್ನ​ಮೆಂಟ್​ನಲ್ಲಿ ಭಾಗವಹಿಸಲಿದ್ದು, ಪ್ರೋ ಗೇಮರ್​ಗಳ ಜೊತೆ ಟೂರ್ನ್​ಮೆಂಟ್​ನಲ್ಲಿ ಆಡಲಿದ್ದಾರೆ.

ಪಬ್​​ಜಿ ಟೂರ್ನ್​ಮೆಂಟ್​ಗೆ ಭಾಗವಹಿಸಲು ನೋಂದಣಿಯನ್ನು ತೆರೆಯಲಾಗಿದೆ. ಆ ಮೂಲಕ ರಿಜಿಸ್ಟ್ರೇಶನ್​ ಮಾಡಬಹುದಾಗಿದೆ. ಮೇ 22 ರಂದು 12 ಗಂಟೆಯಿಂದ ನೋಂದಣಿ ಮಾಡಲು ಅವಕಾಶ ಕಲ್ಪಿಸಿದೆ.

ಇನ್ನು ಟೂರ್ನ್​ಮೆಂಟ್​​ನಲ್ಲಿ ಭಾಗವಹಿಸುವವರು ಪ್ರತಿಯಲ್ಲಿ ಕೇಳಿರುವ ಕೆಲವು ಮಾಹಿತಿಗಳನ್ನು ಭರ್ತಿ ಮಾಡಬೇಕೆಂದು ತಿಳಿಸಿದೆ. ಜೊತೆಗೆ ರೆಡ್​ ಕೇಬಲ್​​​​ ಕ್ಲಬ್​ ಮೆಂಬರ್​ಶಿಪ್​​ ನಂಬರ್​​, ಪಬ್​ಜಿ ಮೊಬೈಲ್​ ನಿಕ್​ನೇಮ್​,  ಪಜ್​​ಬಿ ಮೊಬೈಲ್​​ ಕ್ಯಾರೆಕ್ಟರ್​​​ ಐಡಿ ಮತ್ತು ಟೂರ್ನಮೆಂಟ್​​ನಲ್ಲಿ ಭಾಗವಹಿಸುತ್ತಿರುವ ಉದ್ದೇಶವನ್ನು ಅದರಲ್ಲಿ ತಿಳಿಸಬೇಕಾಗಿದೆ.

ಒನ್​ಪ್ಲಸ್​ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಟೂರ್ನಮೆಂಟ್​​ ಜೂನ್​​​ 2 ರಂದು ಸಂಜೆ 6 ಗಂಟೆಗೆ ಪ್ರಾರಂಭವಾಗುತ್ತದೆ. ಪ್ರತಿ ಪಂದ್ಯದಲ್ಲಿ ಅತ್ಯುತ್ತಮ ಆಟಗಾರ ಎಂದು ಎನಿಸಿಕೊಂಡವನಿಗೆ ಒನ್​ಪ್ಲಸ್​​​ 8 ಪ್ರೊ ಸ್ಮಾರ್ಟ್​ಫೋನ್​​ ಉಡುಗೊರೆಯಗಿ ಸಿಗಲಿದೆ.

ಪ್ರತಿ ಟೂರ್ನ್​ಮೆಂಟ್​​ನಲ್ಲಿ ಮೂರು ಪಂದ್ಯಗಳು ನಡೆಯುತ್ತದೆ. ಜೊತೆಗೆ ಪ್ರೊ ಗೇಮರ್​ಗಳಾದ ಡೈನಮೊ ಮತ್ತು ಅಹಾಸ್​ ಚನ್ನಾ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಫ್ನಾಟಿಕ್​​ ಸದಸ್ಯರುಗಳಾದ ಸ್ಕಾಟ್​​, ಓವೈಸ್​, ನಿಕ್ಸನ್​​, ಆಶ್​, ಫ್ರಾಂಕಿ ಮತ್ತು ರೊನಾಂಕ್​ಗಳು ಟೂರ್ನ್​ಮೆಂಟ್​ನಲ್ಲಿ ಭಾಗವಸಲಿದ್ದಾರೆ.

ಜೊತೆಗೆ ಟೀಂ ಇಂಡಿಯಾದ ಆಟಗಾರರಾದ ಕೆ.ಎಲ್​​ ರಾಹುಲ್​, ಶ್ರೇಯಸ್​​​​ ಐಯ್ಯರ್​​, ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂದಾನ ಮತ್ತು ಯಜುವೇಂದ್ರ ಚಾಹಲ್​​ ಪಬ್​ಜಿ ಟೂನ್​ಮೆಂಟ್​ನಲ್ಲಿ ಭಾಗವಹಿಸಲಿದ್ದಾರೆ. ಪ್ರೋ ಗೇಮರ್​ಗಳಿಗೆ ಟೀಂ ಇಂಡಿಯಾದ ಆಟಗಾರರೊಂದಿಗೆ ಪಂದ್ಯ ನಡೆಯುತ್ತದೆ ಎಂದು ಒನ್​ ಪ್ಲಸ್​ ತಿಳಿಸಿದೆ.

ಸದ್ಯದಲ್ಲಿ ಒನ್​​ಪ್ಲಸ್ ​ಪಬ್​ಜಿ ಟೂರ್ನಮೆಂಟ್​ಗೆ ಭಾಗವಹಿಸುತ್ತಿರುವ ತಂಡಗಳ ಸಂಖ್ಯೆ, ಇನ್ನಿತರೆ ಮಾಹಿತಿಯನ್ನು ತಿಳಿಸಲಿದೆ ಎಂದು ಹೇಳಿದೆ.EPF Balance: ಈ ಆ್ಯಪ್​ ಮೂಲಕ ನಿಮ್ಮ ಪಿಎಫ್​ ಬ್ಯಾಲೆನ್ಸ್ ಸುಲಭವಾಗಿ​ ಪರೀಕ್ಷಿಸಬಹುದು
First published: May 22, 2020, 1:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading