ಬ್ಯಾಟ್ಸ್​ಮನ್ನೋ, ಬ್ಯಾಟ್ಸ್​ವುಮನ್ನೋ? ಹುಡುಗ ಹುಡುಗಿ ಬ್ಯಾಟುಗಾರರಿಗೆ ಈಗ ಸಮಾನ ಹೆಸರು

Men and Women Batters- ಪುರುಷ ಬ್ಯಾಟುಗಾರರಿಗೆ ಮತ್ತು ಮಹಿಳಾ ಬ್ಯಾಟುಗಾರ್ತಿಯರಿಗೆ ಲಿಂಗ ತಾಟಸ್ಥ್ಯ ಪದವಾದ ಬ್ಯಾಟರ್ ಎಂಬ ಪದ ಬಳಕೆ ಅಧಿಕೃತಗೊಂಡಿದೆ. ಕ್ರಿಕೆಟ್​ನ ಅಧಿಕೃತ ಕಾನೂನು ರೂಪಕರಾದ ಎಂಸಿಸಿಯಿಂದ ಈ ಘೋಷಣೆ ಆಗಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡ

ಭಾರತ ಮಹಿಳಾ ಕ್ರಿಕೆಟ್ ತಂಡ

 • Cricketnext
 • Last Updated :
 • Share this:
  ನವದೆಹಲಿ: ಮಹಿಳಾ ಕ್ರಿಕೆಟ್ ಕೂಡ ಈಗ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಾ ಇರುವ ಹಿನ್ನೆಲೆಯಲ್ಲಿ ಕೆಲ ಪದ ಬಳಕೆ ಬಗ್ಗೆ ಇದ್ದ ಗೊಂದಲಗಳು ಮುನ್ನೆಲೆಗೆ ಬಂದಿದ್ದವು. ಪುರುಷ ಬ್ಯಾಟುಗಾರರಿಗೆ ಇಂಗ್ಲೀಷ್​ನಲ್ಲಿ ಬ್ಯಾಟ್ಸ್​ಮನ್ ಎಂದು ಕರೆಯುತ್ತಾರೆ. ಮಹಿಳಾ ಬ್ಯಾಟುಗಾರ್ತಿಯರಿಗೆ ಬ್ಯಾಟ್ಸ್​ವುಮನ್ ಎಂದು ಕರೆಯುತ್ತಾರೆ. ಇಬ್ಬರಿಗೂ ಒಂದೇ ಹೆಸರು ಸಂಬೋಧಿಸಬೇಕೆಂಬ ಕೂಗ ಈಗೀಗ ಬಲವಾಗಿ ಕೇಳಿಬರತೊಡಗಿತ್ತು. ಈ ಹಿನ್ನೆಲೆಯಲ್ಲಿ ಎಂಸಿಸಿ (MCC – Marylebone Cricket Club) ನಿನ್ನೆ ಲಿಂಗಾಲಿಪ್ತವೆನಿಸುವ (Gender Neutral) ಪದ ಬಳಕೆಗೆ ಅನುಮೋದನೆ ಕೊಟ್ಟಿದೆ. ಅದರಂತೆ ಬ್ಯಾಟ್ಸ್​ಮನ್ (Batsman) ಅಥವಾ ಬ್ಯಾಟ್ಸ್​ವುಮನ್ (Batswoman) ಬದಲು ಬ್ಯಾಟರ್ (Batter) ಎಂದು ಕರೆಯುವಂತೆ ನಿಯಮಗಳನ್ನ ತಿದ್ದುಪಡಿ ಮಾಡಿದೆ.

  18ನೇ ಶತಮಾನದ ಅಂತ್ಯದಲ್ಲಿ ಮೇರಿಲೆಬೋನ್ ಕ್ರಿಕೆಟ್ ಕ್ಲಬ್ ಈಗ ಜಾಗತಿಕ ಕ್ರಿಕೆಟ್ ನಿಯಮಗಳನ್ನ ಅಧಿಕೃತವಾಗಿ ನಿರ್ವಹಣೆ ಮಾಡುವ ಸಂಸ್ಥೆಯಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈಗ ಅಧಿಕೃತ ಕ್ರಿಕೆಟ್ ಆಡಳಿತ ಸಂಸ್ಥೆಯಾದರೂ ಕ್ರಿಕೆಟ್ ನಿಯಮಗಳನ್ನ ರೂಪಿಸುವುದು ಎಂಸಿಸಿಯೇ. ಎಂಸಿಸಿ ರೂಪಿಸಿದ ನಿಯಮಗಳನ್ನ ಐಸಿಸಿ ಅನುಮೋದಿಸಿ ಜಾರಿಗೆ ತರುತ್ತದೆ.

  “ಕ್ರಿಕೆಟ್ ಎಲ್ಲರ ಆಟ ಎಂಬುದು ಎಂಸಿಸಿ ನಂಬುಗೆ. ಆಧುನಿಕ ಕಾಲಘಟ್ಟಕ್ಕೆ ಬದಲಾಗುತ್ತಿರುವ ಆಟದ ಚರ್ಯೆಯನ್ನ ನಾವು ಪರಿಗಣಿಸುವ ಕೆಲಸ ಮಾಡಿದ್ದೇವೆ” ಎಂದು ಎಂಸಿಸಿಯ ಅಧಿಕಾರಿ ಜೇಮೀ ಕಾಕ್ಸ್ ಅವರು ಹೇಳುತ್ತಾರೆ.

  ಇದನ್ನೂ ಓದಿ: IPL 2021| ಐಪಿಎಲ್​ನಲ್ಲಿ ಆಡುತ್ತಿರುವ ಕರ್ನಾಟಕದ ಕ್ರಿಕೆಟರ್​ಗಳ ಬಗ್ಗೆ ತಿಳಿದುಕೊಳ್ಳಿ!

  “ನಮ್ಮ ಕ್ರಿಕೆಟ್ ಪರಿಭಾಷೆಯಲ್ಲಿ ಈಗಾಗಲೇ ಬ್ಯಾಟರ್ ಪದಬಳಕೆ ಚಾಲನೆಯಲ್ಲಿದೆ. ಅನೇಕರು ಇದನ್ನ ಉಪಯೋಗಿಸುತ್ತಿದ್ದಾರೆ. ಇದಕ್ಕೆ ಈಗ ಅಧಿಕೃತ ಮುದ್ರೆ ಒತ್ತುವ ಕಾಲ ಇದಾಗಿದೆ. ಕಾನೂನು ನಿಯಮರೂಪಕರಾದ ನಮಗೆ ಈ ಬದಲಾವಣೆಗಳನ್ನ ಪ್ರಕಟಿಸಲು ಸಂತಸವಾಗುತ್ತಿದೆ” ಎಂದು ಕ್ರಿಕೆಟ್ ಮತ್ತು ಕಾರ್ಯಾಚರಣೆಯ ಹೊಣೆಗಾರಿಕೆ ಇರುವ ಎಂಸಿಸಿ ಸಹಾಯಕ ಕಾರ್ಯದರ್ಶಿಯೂ ಆದ ಜೇಮೀ ಕಾಕ್ಸ್ ತಿಳಿಸುತ್ತಾರೆ.

  ಇಂಗ್ಲೆಂಡ್ ರಾಜಧಾನಿ ಲಂಡನ್​ನಲ್ಲಿರುವ ಲಾರ್ಡ್ಸ್ ಮೈದಾನದಲ್ಲಿ ಈ ಮೇರಿಲೆಬೋನ್ ಕ್ರಿಕೆಟ್ ಕ್ಲಬ್ ಇದೆ. ಇದರ ಈಗಿನ ಅಧ್ಯಕ್ಷರು ಕುಮಾರ್ ಸಂಗಕ್ಕಾರ ಅವರಾಗಿದ್ದಾರೆ. ಮುಂದಿನ ತಿಂಗಳು ಕ್ಲೇರ್ ಕಾನರ್ ಅವರು ಕ್ಲಬ್​ನ ಅಧ್ಯಕ್ಷರಾಗಲಿದ್ಧಾರೆ. 200ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ಈ ಕ್ಲಬ್​ಗೆ ಮಹಿಳೆಯೊಬ್ಬರು ಮೊತ್ತಮೊದಲಿಗೆ ಅಧ್ಯಕ್ಷರಾಗಲಿದ್ಧಾರೆ. ಈ ಸಂದರ್ಭದಲ್ಲೇ ಜೆಂಡರ್ ನ್ಯೂಟ್ರಲ್ ಪದ ಬಳಕೆ ವಿಚಾರ ಮುನ್ನೆಲೆಗೆ ಬಂದು ಬದಲಾವಣೆಯೂ ಆಗಿರುವುದು ಗಮನಾರ್ಹ.

  ಇದನ್ನೂ ಓದಿ: Rohith Sharma| ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧದ ಗೆಲುವು ಅಷ್ಟು ಸುಲಭವಲ್ಲ ಎಂಬ ಅರಿವು ನಮಗಿದೆ; ರೋಹಿತ್​ ಶರ್ಮಾ

  ಪುರುಷರ ಕ್ರಿಕೆಟ್ ಸಹಜವಾಗಿಯೇ ಅತೀ ಹೆಚ್ಚು ಜನಪ್ರಿಯತೆ ಹೊಂದಿದೆ. ಆದರೆ, ಈಚಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್ ಹೆಚ್ಚೆಚ್ಚು ಗರಿಗೆದರುತ್ತಾ ಓಡುತ್ತಿದೆ. ಕಳೆದ ವರ್ಷ ನಡೆದ ಟಿ20 ಮಹಿಳಾ ವಿಶ್ವಕಪ್ ಪಂದ್ಯಗಳು ಇದಕ್ಕೆ ಸಾಕ್ಷಿ. ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ಮಧ್ಯೆ ನಡೆದಿತ್ತು. ಈ ಪಂದ್ಯವನ್ನ ವೀಕ್ಷಿಸಲು ಎಂಸಿಜಿ ಮೈದಾನದಲ್ಲಿ ಸೇರಿದ ಜನರ ಸಂಖ್ಯೆ ಹೆಚ್ಚೂಕಡಿಮೆ ಒಂದು ಲಕ್ಷದಷ್ಟು. ಮಹಿಳೆಯರ ನೂರು ಬಾಲ್ ಕ್ರಿಕೆಟ್ ಹಂಡ್ರೆಡ್ ಟೂರ್ನಿಯ ಫೈನಲ್ ಪಂದ್ಯ ವೀಕ್ಷಿಸಲು ಲಾರ್ಡ್ಸ್ ಮೈದಾನದಲ್ಲಿ 17 ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದರು.

  ಮಹಿಳೆಯರ ಆಟದಲ್ಲೂ ಸಾಕಷ್ಟು ಬದಲಾವಣೆ, ಸುಧಾರಣೆಗಳು ಆಗುತ್ತಿವೆ. ಮಹಿಳಾ ಬ್ಯಾಟರ್​ಗಳು ಹೆಚ್ಚೆಚ್ಚು ಸ್ಟ್ರೋಕ್ ಪ್ಲೇಗೆ ಒತ್ತು ಕೊಡುತ್ತಿದ್ದಾರೆ. ಪುರುಷರ ಕ್ರಿಕೆಟ್​ನಂತೆಯೇ ವನಿತೆಯರ ಆಟ ಕೂಡ ರೋಚಕತೆಯನ್ನ ಮೈಗೂಡಿಸಿಕೊಂಡಿದೆ.
  Published by:Vijayasarthy SN
  First published: