ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಗವಾಸ್ಕರ್ ಪ್ರಶ್ನೆ; ಬಿಸಿಸಿಐ ವಿರುದ್ಧವೂ ಕಿಡಿ

ಭಾರತ ಇಂದು ಕೆರಿಬಿಯನ್ನರ ನಾಡಿಗೆ ತೆರಳಲಿದ್ದು, ಆ. 3 ರಂದು ಮೊದಲ ಟಿ-20 ಪಂದ್ಯ ಆಡಲಿದೆ.

Vinay Bhat | news18
Updated:July 29, 2019, 6:09 PM IST
ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಗವಾಸ್ಕರ್ ಪ್ರಶ್ನೆ; ಬಿಸಿಸಿಐ ವಿರುದ್ಧವೂ ಕಿಡಿ
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ
  • News18
  • Last Updated: July 29, 2019, 6:09 PM IST
  • Share this:
ಬೆಂಗಳೂರು (ಜು. 29): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಬಿಸಿಸಿಐ ಆಯ್ಕೆ ಸಮಿತಿ ಹಾಗೂ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಕಿಡಿ ಕಾರಿದ್ದಾರೆ.

ವೆಸ್ಟ್​ ಇಂಡೀಸ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿರುವ ಬಗ್ಗೆ ಕಾರವಾಗಿ ಮಾತನಾಡಿದ್ದು, ಇನ್ನೂ ಉತ್ತಮ ಆಟಗಾರರನ್ನು ಆರಿಸಬಹುದಿತ್ತು ಎಂದಿದ್ದಾರೆ.

'ಬಿಸಿಸಿಐ ಆಯ್ಕೆ ಸಮಿತಿ ಕುಂಟು ಬಾತುಕೋಳಿ ಇದ್ದಂತೆ. ವಿಶ್ವಕಪ್​ನಲ್ಲಿ ಭಾರತದ ಪ್ರದರ್ಶನ ಬಗ್ಗೆ ಅಥವಾ ಸೆಮಿ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ವಿಚಾರವಾಗಿ ಕ್ಯಾಪ್ಟನ್ ಕೊಹ್ಲಿಯಲ್ಲಿ ಯಾವುದೇ ಪ್ರಶ್ನೆಯನ್ನು ಕೇಳಿಲ್ಲ. ವಿಶ್ವಕಪ್​ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುವಲ್ಲಿ ಕೊಹ್ಲಿ ಸೋತಿದ್ದಾರೆ. ಅವರ ನಾಯನ ಸ್ಥಾನಕ್ಕೆ ಸೂಕ್ತರಲ್ಲ' ಎಂದು ಹೇಳಿದ್ದಾರೆ. ಕೊಹ್ಲಿ ವಿಶ್ವಕಪ್​​ನಲ್ಲಿ ಯಾವ ಪಾತ್ರ ನಿರ್ವಹಿಸಿದ್ದಾರೆ?. ತಂಡದ ಕ್ಯಾಪ್ಟನ್​ ಆಗಿ ಕೊಹ್ಲಿ ಮುಂದುವರಿಯಲು ಅರ್ಹರೇ?, ಇಷ್ಟಾದರು ಅವರನ್ನು ವಿಂಡೀಶ್ ಸರಣಿಗೆ ನಾಯಕನಾಗಿ ಆಯ್ಕೆ ಮಾಡಿದ್ದೀರಲ್ಲ ಎಂಬ ಖಡಕ್ ಮಾತನ್ನಾಡಿದ್ದಾರೆ.

'ನನಗೆ ತಿಳಿದಿರುವ ಪ್ರಕಾರ ನಾಯಕನಾಗಿ ವಿರಾಟ್ ಕೊಹ್ಲಿ ಅವಧಿ ವಿಶ್ವಕಪ್ ಅಂತ್ಯವಾಗುವವರೆಗೆ ಮಾತ್ರ. ಮುಂದೆಯು ನಾಯಕನಾಗಿ ಭಾರತ ಕ್ರಿಕೆಟ್ ತಂಡದಲ್ಲಿ ಮುಂದುವರೆಯಬೇಕಾದರೆ ಬಿಸಿಸಿಐ ಬಳಿ ತೆರಳಿ ಮತ್ತೆ ಅರ್ಜೆ ಸಲ್ಲಿಸಬೇಕು. ಅದು ಕೇವಲ ಐದು ನಿಮಿಷಗಳ ಕೆಲಸವಷ್ಟೆ' ಎಂದಿದ್ದಾರೆ.

ಈ ಕಾರ್ಯಕ್ಕಾಗಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಿಂದೆ ಬಿದ್ದಿದ್ರಾ ಕನ್ನಡ ಚಿತ್ರನಟಿ..!

'ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡುವಾಗ ಕೂಡ ಆಯ್ಕೆ ಸಮಿತಿ ಯಾವುದೇ ಸಭೆ ಕರೆದಿಲ್ಲ. ಇಗಿರುವ ಆಯ್ಕೆ ಸಮಿತಿ ಇನ್ನು ಕೆಲವು ದಿನಗಳ ಕಾಲ ಮಾತ್ರ ಇರಲಿವೆ. ಸದ್ಯದಲ್ಲೆ ಹೊಸ ಆಯ್ಕೆ ಸಮಿತಿ ನೇಮಕವಾಗಲಿದೆ. ಅವರಾದರು ಸರಿಯಾದ ರೀತಿಯಲ್ಲಿ ಆಟಗಾರರನ್ನು ಆಯ್ಕೆ ಮಾಡುತ್ತಾರೆ ಎಂಬ ಭರವಸೆಯಲ್ಲಿದ್ದೇನೆ' ಎಂದು ಬೇಸರ ಹೊರ ಹಾಕಿದರು.

ಭಾರತ ಇಂದು ಕೆರಿಬಿಯನ್ನರ ನಾಡಿಗೆ ತೆರಳಲಿದ್ದು, ಆ. 3 ರಂದು ಮೊದಲ ಟಿ-20 ಪಂದ್ಯ ಆಡಲಿದೆ.
First published:July 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading