ಭಾರತಕ್ಕಾಗಿ ಮನಮಿಡಿದ ಶಾಹಿದ್ ಅಫ್ರಿದಿ: ಪಾಕ್ ಆಟಗಾರನ ಕುರಿತು ಗೌತಮ್ ಗಂಭೀರ್ ಹೇಳಿದ್ದೇನು?

news18
Updated:October 26, 2018, 4:58 PM IST
ಭಾರತಕ್ಕಾಗಿ ಮನಮಿಡಿದ ಶಾಹಿದ್ ಅಫ್ರಿದಿ: ಪಾಕ್ ಆಟಗಾರನ ಕುರಿತು ಗೌತಮ್ ಗಂಭೀರ್ ಹೇಳಿದ್ದೇನು?
  • News18
  • Last Updated: October 26, 2018, 4:58 PM IST
  • Share this:
-ನ್ಯೂಸ್ 18 ಕನ್ನಡ

ಟೀಂ ಇಂಡಿಯಾದ ಎಡಗೈ ಬ್ಯಾಟ್ಸ್​ಮನ್ ಗೌತಮ್ ಗಂಭೀರ್‌ ಮತ್ತು ಪಾಕಿಸ್ತಾನದ ಸ್ಪೋಟಕ ಆಟಗಾರ ಶಾಹಿದ್ ಅಫ್ರಿದಿ ನಡುವೆ ಒಂದಲ್ಲಾ ಒಂದು ವಿಷಯಕ್ಕೆ ಜಟಾಪಟಿ ನಡೆಯುತ್ತಲೇ ಇರುತ್ತದೆ. ಅದು ಕ್ರೀಡಾಂಗಣದಿಂದ ಸಾಮಾಜಿಕ ಜಾಲತಾಣದ ತನಕ ಮುಂದುವರೆದಿತ್ತು. ಆದರೆ ಈ ಬಾರಿ ಗಂಭೀರ್ ತಮ್ಮ ಅಂಗಳದ ದುಷ್ಮನ್​ಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದಾರೆ.

ಅಕ್ಟೋಬರ್ 19ರಂದು ದಸರಾ ಉತ್ಸವದ ವೇಳೆ ಅಮೃತಸರದಲ್ಲಿ ನಡೆದ ರೈಲು ದುರಂತದಲ್ಲಿ 62 ಮಂದಿ ಅಸುನೀಗಿದ್ದರು. ಈ ಕುರಿತು ಶಾಹಿದ್ ಅಫ್ರಿದಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. 'ಭಾರತದಲ್ಲಿ ಬಹಳ ದುಃಖಕರ ಘಟನೆ ನಡೆದಿದ್ದು, ಈ ಅಪಘಾತದಲ್ಲಿ ಮಡಿದಿರುವ ಕುಟಂಬಗಳಿಗೆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಅನುಗ್ರಹಿಸಲಿ' ಎಂದು ಟ್ವಿಟ್ಟರ್​ನಲ್ಲಿ ತಿಳಿಸಿದ್ದರು.

ಪಾಕ್ ಆಟಗಾರ ಮಾಡಿರುವ ಈ ಒಂದು ಟ್ವೀಟ್​ ಗೌತಮ್ ಗಂಭೀರ್ ಅವರ ಮನಗೆದ್ದಿದ್ದು, ಇದಕ್ಕೆ ಎಡಗೈ ದಾಂಡಿಗ ರೀಟ್ವೀಟ್ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ. ನನಗೂ ಅಫ್ರಿದಿಗೂ ಒಂದು ಹಳೆಯ ಇತಿಹಾಸವಿದೆ. ಆದರೆ ಅಮೃತಸರ ರೈಲು ದುರಂತದ ಬಗ್ಗೆ ಅವರು ಸಂತಾಪ ಮತ್ತು ದುಃಖವನ್ನು ವ್ಯಕ್ತಪಡಿಸಿರುವುದಕ್ಕೆ ನಾನು ಕೃತಜ್ಙನಾಗಿದ್ದೇನೆ. ಅಲ್ಲದೆ ಅಫ್ರಿದಿಯ ಈ ನಡೆಯನ್ನು ಭಾರತದಲ್ಲಿರುವ ಪ್ರತಿಯೊಬ್ಬರೂ ಕೂಡ ಗೌರವಿಸುತ್ತಾರೆ ಎಂದು ತಿಳಿಸಿದ್ದರು.


ಅಫ್ರಿದಿ ಅಲ್ಲದೆ ರಾವಲ್ಪಿಂಡಿ ಖ್ಯಾತಿಯ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೊಯೆಬ್ ಅಖ್ತರ್ ಕೂಡ ಈ ಘಟನೆಗೆ ಸಂತಾಪ ಸೂಚಿಸಿದ್ದರು. ಇದಕ್ಕೂ ಗೌತಮ್ ಗಂಭೀರ್ ಧನ್ಯವಾದ ತಿಳಿಸಿದ್ದಾರೆ. ಒಟ್ಟಿನಲ್ಲಿ ಕ್ರೀಡಾಂಗಣದ ಒಳಗೂ, ಹೊರಗೂ ಸದಾ ದುಷ್ಮನ್​ಗಳಂತಿದ್ದ ಗಂಭೀರ್ ಮತ್ತು ಅಫ್ರಿದಿ ದುಃಖಪ್ತ ಸಮಯದಲ್ಲಿ ಒಂದಾಗಿರುವುದು ಮಾತ್ರ ಒಳ್ಳೆಯ ಬೆಳವಣಿಗೆ.

First published:October 26, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading