Gautam Gambhir: ಸಾಹ ಅವರನ್ನು ತಂಡದಿಂದ ಕೈಬಿಟ್ಟಿದ್ದು ಸರಿಯಲ್ಲ..!

ಒಂದು ವೇಳೆ ರಿಷಭ್ ಪಂತ್ ಅವರೂ ಕೂಡ ವಿಫಲವಾದರೆ, ಮತ್ತೆ ಬದಲಿಸುವ ನಿರ್ಧಾರ ಮಾಡುತ್ತಾರೆ. ಆಗ ಅವರಲ್ಲಿಯೂ ಅಭದ್ರತೆ ಗೊಂದಲ ಸೃಷ್ಟಿಯಾಗುತ್ತದೆ. ಹೀಗೆ ಮಾಡುವುದರಿಂದ ಇಬ್ಬರು ಕೀಪರ್​ಗಳು ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಾರೆ.

gautam gambhir

gautam gambhir

 • Share this:
  ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ನಾಲ್ಕು ಪ್ರಮುಖ ಬದಲಾವಣೆ ಮಾಡಲಾಗಿದ್ದು, ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ವೃದ್ಧಿಮಾನ್ ಸಾಹ ಬದಲಿಗೆ ರಿಷಭ್ ಪಂತ್ ಅವರಿಗೆ ಸ್ಥಾನ ನೀಡಲಾಗಿದೆ. ಹಾಗೆಯೇ ವಿರಾಟ್ ಕೊಹ್ಲಿ ಜಾಗದಲ್ಲಿ ರವೀಂದ್ರ ಜಡೇಜಾ ಅವಕಾಶ ಪಡೆದರೆ, ಶುಭ್​ಮನ್ ಗಿಲ್ ಆರಂಭಿಕ ಪೃಥ್ವಿ ಶಾ ಜಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು ಗಾಯಗೊಂಡು ಭಾರತಕ್ಕೆ ವಾಪಾಸಾಗಿರುವ ಮೊಹಮ್ಮದ್ ಶಮಿ ಸ್ಥಾನದಲ್ಲಿ ಮೊಹಮ್ಮದ್ ಸಿರಾಜ್ ಪಾದರ್ಪಣೆ ಮಾಡಲಿದ್ದಾರೆ.

  ಆದರೆ ವೃದ್ಧಿಮಾನ್ ಸಾಹ ಅವರನ್ನು ಕೈಬಿಟ್ಟು ರಿಷಭ್ ಪಂತ್ ಅವರಿಗೆ ಸ್ಥಾನ ನೀಡುವ ನಿರ್ಧಾರ ಅನ್ಯಾಯ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ ಸಾಹ ಅವರನ್ನು ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಪಂತ್ ವಿಫಲರಾದರೆ ಏನು ಮಾಡುತ್ತೀರಿ ಎಂದು ಗಂಭೀರ್ ಪ್ರಶ್ನಿಸಿದ್ದಾರೆ.

  ಬಾರ್ಡರ್-ಗವಾಸ್ಕರ್ ಸರಣಿಯ ಟೆಸ್ಟ್ ಮಾತ್ರ ಆಡಿರುವ ಸಾಹ ಅವರನ್ನು ಕೈಬಿಟ್ಟಿರುವುದು ದುರದೃಷ್ಟಕರ ಎಂದು ಅಭಿಪ್ರಾಯಪಟ್ಟಿರುವ ಗಂಭೀರ್, ಎರಡನೇ ಮತ್ತು ಮೂರನೇ ಟೆಸ್ಟ್‌ನಲ್ಲಿ ಪಂತ್ ಉತ್ತಮವಾಗಿ ಆಡದಿದ್ದರೆ ಏನು ಮಾಡುತ್ತೀರಿ. ಮತ್ತೆ ಸಾಹ ಅವರನ್ನೇ ತಂಡಕ್ಕೆ ಸೇರಿಸಲಾಗುತ್ತದೆಯೇ? ಎಂದು ಪ್ರಶ್ನಿಸಿದರು. ಇದರು ಆಟಗಾರರಲ್ಲಿ ಅಸುರಕ್ಷಿತ ಭಾವನೆಯನ್ನು ಉಂಟು ಮಾಡುತ್ತದೆ. ಇದು ತಂಡವು ಅಸ್ಥಿರವಾಗಲು ಕಾರಣವಾಗುತ್ತದೆ ಎಂದು ಗಂಭೀರ್ ತಿಳಿಸಿದರು.

  ಒಂದು ವೇಳೆ ರಿಷಭ್ ಪಂತ್ ಅವರೂ ಕೂಡ ವಿಫಲವಾದರೆ, ಮತ್ತೆ ಬದಲಿಸುವ ನಿರ್ಧಾರ ಮಾಡುತ್ತಾರೆ. ಆಗ ಅವರಲ್ಲಿಯೂ ಅಭದ್ರತೆ ಗೊಂದಲ ಸೃಷ್ಟಿಯಾಗುತ್ತದೆ. ಹೀಗೆ ಮಾಡುವುದರಿಂದ ಇಬ್ಬರು ಕೀಪರ್​ಗಳು ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಾರೆ. ಹಾಗಾಗಿ ಒಂದಷ್ಟು ಅವಕಾಶ ನೀಡಬೇಕಿತ್ತು. ಅದರಲ್ಲಿ ವಿಫಲರಾಗಿದ್ದರೆ ಬದಲಾವಣೆ ಮಾಡಬೇಕಿತ್ತು ಎಂದು ಗಂಭೀರ್ ಅಭಿಪ್ರಾಯಪಟ್ಟರು.
  Published by:zahir
  First published: